ETV Bharat / state

5 ಗಂಟೆಗಳ ಯಶಸ್ವಿ ಕಾರ್ಯಾಚರಣೆ: ಸುರಕ್ಷಿತವಾಗಿ ಮನೆ ತಲುಪಿದ 150 ವಿದ್ಯಾರ್ಥಿಗಳು

author img

By

Published : Jun 17, 2022, 11:22 AM IST

ಧಾರವಾಡದ ನವಲಗುಂದ ತಾಲೂಕಿನ ಅಮರಗೋಳದ ಸರ್ಕಾರಿ ಪ್ರೌಢ ಶಾಲೆಗೆ ಹೋಗಿದ್ದ ಸುಮಾರು 150 ವಿದ್ಯಾರ್ಥಿಗಳು ಭಾರಿ ಮಳೆ ಹಿನ್ನೆಲೆ ಶಾಲೆಯಲ್ಲಿಯೇ ಸಿಲುಕಿದ್ದರು. ಪೊಲೀಸ್ ಸಿಬ್ಬಂದಿ, ಗ್ರಾಮ ಪಂಚಾಯತ್ ಅಧಿಕಾರಿ, ಸದಸ್ಯರು ಮತ್ತು ಗ್ರಾಮಸ್ಥರು ಸತತ 5 ಗಂಟೆ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳನ್ನ ರಕ್ಷಣೆ ಮಾಡಿದ್ದಾರೆ.

ಅಮರಗೋಳ ಸರ್ಕಾರಿ ಪ್ರೌಢ ಶಾಲೆ
ಅಮರಗೋಳ ಸರ್ಕಾರಿ ಪ್ರೌಢ ಶಾಲೆ

ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿನ ಹಳ್ಳದ ಹರಿವು ಹೆಚ್ಚಿದ ಹಿನ್ನೆಲೆ ಸರ್ಕಾರಿ ಪ್ರೌಢ ಶಾಲೆಗೆ ತೆರಳಿದ್ದ ಸುಮಾರು 150 ವಿದ್ಯಾರ್ಥಿಗಳು ಶಾಲೆಯಲ್ಲಿಯೇ ಸಿಲುಕಿದ್ದರು. ಇದೀಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಕ್ಕಳನ್ನು ರಕ್ಷಿಸಿ, ಮನೆಗೆ ಕಳುಹಿಸುವ ಕಾರ್ಯ ಯಶಸ್ವಿಯಾಗಿದೆ.

5 ಗಂಟೆಗಳ ಯಶಸ್ವಿ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳ ರಕ್ಷಣೆ

ಬೆಳವಟಗಿ ಗ್ರಾಮ ಪಂಚಾಯತ್ ಅಧಿಕಾರಿ, ಸದಸ್ಯರು, ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಮತ್ತು ಗ್ರಾಮಸ್ಥರು ಸೇರಿ ಸುಮಾರು 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ವಿದ್ಯಾರ್ಥಿಗಳನ್ನ ರಕ್ಷಿಸಿ ಟ್ರ್ಯಾಕ್ಟರ್ ಮೂಲಕ ಸುರಕ್ಷಿತವಾಗಿ ಮನೆಗಳಿಗೆ ತಲುಪಿಸಿದ್ದಾರೆ ಎಂದು ಬೆಳವಟಗಿ ಗ್ರಾಮ ಪಂಚಾಯತ್​ ಅಭಿವೃದ್ಧಿ ಅಧಿಕಾರಿ ಶಿವಾನಂದ ಹಂಪಿಹೊಳಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಧಾರವಾಡ: ಭಾರಿ ಮಳೆಗೆ ಶಾಲೆಯ ಸುತ್ತ ನೀರಿನ ಹರಿವು; ಮಕ್ಕಳ ರಕ್ಷಣೆಗೆ ಮುಂದಾದ ಗ್ರಾಮಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.