ETV Bharat / state

4 ದಿನದಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಗೆ 14 ಕೋಟಿ ರೂ ನಷ್ಟ

ಸಾರಿಗೆ ಸಂಸ್ಥೆ ನೌಕರರ ನಾಲ್ಕು ದಿನದ ಪ್ರತಿಭಟನೆಯಿಂದ ಬಸ್ ಚಾಲನೆಯಾಗದ ಪರಿಣಾಮ ವಾಯುವ್ಯ ಸಾರಿಗೆ ಸಂಸ್ಥೆಗೆ ಬರೋಬ್ಬರಿ 14 ಕೋಟಿ ರೂ ನಷ್ಟ ಸಂಭವಿಸಿದೆ.

hubli
ವಾಯುವ್ಯ ಸಾರಿಗೆ ಸಂಸ್ಥೆಗೆ ನಷ್ಟ
author img

By

Published : Dec 15, 2020, 2:40 PM IST

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನೌಕರರ ನಾಲ್ಕು ದಿನದ ಮುಷ್ಕರದಿಂದ ಪ್ರಯಾಣಿಕರು ಇನ್ನಿಲ್ಲದಂತೆ ಪರದಾಡಿದ್ರೆ, ಮತ್ತೊಂದೆಡೆ, ಪ್ರತಿಭಟನೆಯಿಂದ ಬಸ್ ಚಾಲನೆಯಾಗದ ಪರಿಣಾಮ ವಾಯುವ್ಯ ಸಾರಿಗೆ ಸಂಸ್ಥೆಗೆ ಬರೋಬ್ಬರಿ 14 ಕೋಟಿ ರೂ ನಷ್ಟ ಸಂಭವಿಸಿದೆ.

ಬೆಳಗಾವಿ, ಚಿಕ್ಕೋಡಿ, ಶಿರಸಿ, ಬಾಗಲಕೋಟೆ, ಗದಗ, ಹಾವೇರಿ, ಹುಬ್ಬಳ್ಳಿ-ಧಾರವಾಡ ಹಾಗೂ ನಗರ ಸಾರಿಗೆ ಸೇರಿದಂತೆ 6 ಜಿಲ್ಲೆಗಳಲ್ಲಿ 9 ವಿಭಾಗಗಳನ್ನೊಳಗೊಂಡ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಪ್ರತಿನಿತ್ಯ 4,075 ಬಸ್‌ಗಳು ಕಾರ್ಯಾಚರಣೆ ನಡೆಸುತ್ತವೆ. ಪ್ರತಿದಿನ ಕನಿಷ್ಠವೆಂದರೂ 4 ಕೋಟಿ ರೂ ಆದಾಯ ಬರುವ ವಾಯುವ್ಯ ಸಾರಿಗೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಬಸ್​ಗಳು ಸಂಚರಿಸದ ಪರಿಣಾಮ ಕೋಟ್ಯಂತರ ರೂಪಾಯಿ ಆದಾಯ ನಷ್ಟ ಆಗಿದೆ.

ಓದಿ: ವಿಧಾನ ಪರಿಷತ್​ನಲ್ಲಿ ಹೈಡ್ರಾಮಾ - ಬಿಜೆಪಿ-ಕಾಂಗ್ರೆಸ್​ ಸದಸ್ಯರ ಮಧ್ಯೆ ಕಿತ್ತಾಟ

ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದ ಮಧ್ಯೆಯೂ ಸೋಮವಾರ ಬೆಳಗ್ಗೆಯಿಂದ ಕೆಲ ಬಸ್ ಸಂಚಾರ ಆರಂಭಿಸಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಸೋಮವಾರ ಅರ್ಧದಷ್ಟು ಆದಾಯ ಬಂದ್ರೂ ನಾಲ್ಕು ದಿನದ ಮುಷ್ಕರದಿಂದ ವಾಯುವ್ಯ ಸಾರಿಗೆ ಸಂಸ್ಥೆಗೆ ಸರಾಸರಿ 14 ರಿಂದ 15 ಕೋಟಿ ರೂ ನಷ್ಟವಾಗಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.