ಹುಬ್ಬಳ್ಳಿ: ನಗರದ ಕರಾಡಿ ಓಣಿಯ 63 ವರ್ಷದ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಕರಾಡಿ ಓಣಿಯ 100 ಮೀಟರ್ ವ್ಯಾಪ್ತಿಯನ್ನು ಸೀಲ್ಡೌನ್ ಪ್ರದೇಶವನ್ನಾಗಿ ಜಿಲ್ಲಾಧಿಕಾರಿ ಘೋಷಿಸಿದ್ದಾರೆ.
ಪಿ-236 ವ್ಯಕ್ತಿಯೊಂದಿಗೆ ದ್ವಿತೀಯ ಸಂಪರ್ಕ ಹೊಂದಿದ್ದ ಈತನನ್ನು ಪಿ-363 ಎಂದು ಹೆಸರಿಸಲಾಗಿದೆ. ಪಿ-363ರ ಸಂಪರ್ಕದಲ್ಲಿ ಇರುವವರು ಹಾಗೂ ಆಹಾರ ಕಿಟ್ ಪಡೆದವರು ಕೂಡಲೇ ಆರೋಗ್ಯ ತಪಾಸಣೆ ಒಳಗಾಗಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.