ETV Bharat / state

ರಾಜ್ಯ ಅಂಡರ್​-19 ಮಹಿಳಾ ಕ್ರಿಕೆಟ್​ ತಂಡಕ್ಕೆ ಆಯ್ಕೆಯಾದ ಬೆಣ್ಣೆನಗರಿಯ ಕುವರಿ

ಸೆ. 28ರಿಂದ ಆರಂಭವಾಗಲಿರುವ ಮಹಿಳಾ ಅಂಡರ್​-19 ಏಕದಿನ ಕ್ರಿಕಟ್ ಪಂದ್ಯಾವಳಿಯ ಕರ್ನಾಟಕ ತಂಡಕ್ಕೆ ದಾವಣಗೆರೆಯ ಯುವತಿ ಆಯ್ಕೆಯಾಗಿದ್ದಾಳೆ. ಆಲ್​ರೌಂಡರ್​ ಆಗಿರುವ ರಕ್ಷಿತಾ ನಾಯಕ್ ರಾಜ್ಯ ತಂಡದಲ್ಲಿ ಅವಕಾಶ ಗಿಟ್ಟಿಸಿದ್ದಾಳೆ.

young-girl-from-davanagere-joins-u-19-women-team-for-state
ರಾಜ್ಯ ಅಂಡರ್​-19 ಮಹಿಳಾ ಕ್ರಿಕೆಟ್​ ತಂಡಕ್ಕೆ ಆಯ್ಕೆಯಾದ ಬೆಣ್ಣೆನಗರಿ ಕುವರಿ
author img

By

Published : Sep 18, 2021, 8:42 AM IST

ದಾವಣಗೆರೆ: 19 ವರ್ಷದೊಳಗಿನ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯಾವಳಿಗೆ ದಾವಣಗೆರೆಯ ರಕ್ಷಿತಾ ಆಯ್ಕೆಯಾಗಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇದೇ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರ ವರೆಗೆ ರಾಜಸ್ಥಾನದ ಜೈಪುರದಲ್ಲಿ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

ರಕ್ಷಿತಾ ನಗರದ ಎವಿಕೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದು, ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಅವರ ಪುತ್ರಿಯಾಗಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಗುರುವಾರ ಪ್ರಕಟಿಸಿದ ರಾಜ್ಯದ 20 ಆಟಗಾರರ ಪಟ್ಟಿಯಲ್ಲಿ ರಕ್ಷಿತಾ ನಾಯಕ್ ಅವರು 6ನೇ ಆಟಗಾರರಾಗಿ ಆಯ್ಕೆಯಾಗಿದ್ದು, ಈ ಮೂಲಕ ಹೆತ್ತವರಿಗೆ ಹಾಗೂ ದಾವಣಗೆರೆಗೆ ಕೀರ್ತಿ ತಂದಿದ್ದಾರೆ.

ಯಾವ ತಂಡಗಳು ಲೀಗ್ ಹಂತದಲ್ಲಿ ಪರಸ್ಪರ ಸೆಣಸಲಿವೆ.?

ಬ್ಯಾಟ್ಸ್​ಮನ್ ಹಾಗೂ ವೇಗದ ಬೌಲರ್ ಆಗಿ ರಕ್ಷಿತಾ ನಾಯಕ್ ಆಯ್ಕೆಯಾಗಿದ್ದಾರೆ. ಈ ಟೂರ್ನಿಯಲ್ಲಿ ಮೊದಲಿಗೆ ಎಲೈಟ್-ಇ ಗುಂಪಿನಲ್ಲಿ ಪಂಜಾಬ್, ಒಡಿಶಾ, ಹಿಮಾಚಲ ಪ್ರದೇಶ, ತ್ರಿಪುರಾ, ಮಿಜೋರಾಂ ಮತ್ತು ಕರ್ನಾಟಕ ತಂಡಗಳು ಲೀಗ್ ಹಂತದಲ್ಲಿ ಪರಸ್ಪರ ಸೆಣಸಲಿದ್ದು, ಅಗ್ರ ತಂಡ ಮುಂದಿನ ನಾಕೌಟ್ ಹಂತ ತಲುಪಲಿದೆ.

ಕರ್ನಾಟಕ ತಂಡದ ಸದಸ್ಯರು

ಚಂದಸಿ ಕೃಷ್ಣಮೂರ್ತಿ(ನಾಯಕಿ), ರೋಷನಿ ಕಿರಣ್(ಉಪ ನಾಯಕಿ), ರಕ್ಷಿತಾ ನಾಯಕ್, ಪೂಜಾ ಧನಂಜಯ್, ನಿಕಿ ಪ್ರಸಾದ್, ಕ್ರಿಷಿಕಾ ರೆಡ್ಡಿ, ಮೈಥಿಲಿ ವಿನೋದ್, ಸ್ನೇಹ ಜಗದೀಶ್, ಪೂಜಾ ಕುಮಾರಿ ಎಂ, ಪ್ರೇರಣ ಜಿ.ಆರ್, ಸವಿ ಸುರೇಂದ್ರ, ಸೌಮ್ಯ ವರ್ಮ (ವಿಕೆಟ್​ ಕೀಪರ್​), ನಿರ್ಮಿತ ಸಿ.ಜೆ, ರೀಮಾ ಫರೀದ್, ರೋಹಿತ ಚೌದ್ರಿ ಪಿ,ಹರ್ಷಿತಾ ಶೇಖರ್, ಅನುಪಮ ಜಿ.ಬೋಸ್ಲೆ (ವಿಕೆಟ್​ ಕೀಪರ್​), ನಜ್ಮಾ ಉನ್ನೀಸ, ಸಲೊನಿ ಪಿ.

ಓದಿ: ಪದೇ ಪದೇ ಪೆಟ್ರೋಲ್ ಬಗ್ಗೆ ಕೇಳಿ ನನ್ನನ್ನು ಟ್ರೋಲ್ ಮಾಡಬೇಡಿ ಮಾರಾಯ: ಸಂಸದ ಜಿ.ಎಂ.ಸಿದ್ದೇಶ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.