ETV Bharat / state

ಮುಂಗಾರು ಹಂಗಾಮಿನ ಬೆಳೆ ಬೆಳೆಯಲು ಭದ್ರಾ ನಾಲೆಗಳಿಗೆ ಇಂದಿನಿಂದ ಹರಿಯಲಿದೆ ನೀರು.. ರೈತರಲ್ಲಿ ಮೊಗದಲ್ಲಿ ಮಂದಹಾಸ

ಭದ್ರಾ ಎಡ ಹಾಗೂ ಬಲದಂಡೆ ನಾಲೆಗಳಿಗೆ ಭದ್ರಾ ಜಲಾಶಯದ ಅಣೆಕಟ್ಟಿನಿಂದ ಇಂದಿನಿಂದ ಒಟ್ಟು ನೂರು ದಿನಗಳ ಕಾಲ ನೀರು ಹರಿಸಲಾಗುತ್ತದೆ.

ಭದ್ರಾ ಜಲಾಶಯ ಅಣೆಕಟ್ಟು
ಭದ್ರಾ ಜಲಾಶಯ ಅಣೆಕಟ್ಟು
author img

By

Published : Aug 10, 2023, 11:34 AM IST

ದಾವಣಗೆರೆ: ಭದ್ರಾ ಜಲಾಶಯದ ಅಣೆಕಟ್ಟು ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಭದ್ರಾ ಎಡ ಹಾಗೂ ಬಲದಂಡೆ ನಾಲೆಗಳಿಗೆ ನೀರು ಹರಿಸುವುದಾಗಿ ರೈತರಿಗೆ ಆಶ್ವಾಸನೆ ನೀಡಿದ್ದ ರಾಜ್ಯ ಸರ್ಕಾರ, ಮುಂಗಾರ ಹಂಗಾಮಿನ ಬೆಳೆಗಳನ್ನು ಬೆಳೆಯಲು ಇಂದಿನಿಂದ ಒಟ್ಟು ನೂರು ದಿನಗಳ ಕಾಲ ನೀರು ಹರಿಸಲಿದೆ.

ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆ, ಅನವೇರಿ ಶಾಖಾನಾಲೆ, ದಾವಣಗೆರೆ ಶಾಖಾನಾಲೆ, ಹರಿಹರ ತಾಲೂಕಿನ ಮಲೇಬೆನ್ನೂರು ಶಾಖಾನಾಲೆ ಹರ, ನಾರಾಣಿ ಮತ್ತು ಗೋಂದಿ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಆದೇಶ ಹೊರಡಿಸಿದೆ.‌

ಇನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುವವರು ಮತ್ತು ನೀರಾವರಿ ಬೆಳಗಾರರು ವಿವಿಧ ನಿಯಮಗಳ ಪ್ರಕಾರ ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಮುಂಗಾರು ಹಂಗಾಮಿನ ಬೆಳೆಗಳಿಗೆ ಆಗಸ್ಟ್ 10 ರಿಂದ ಎಂದರೆ ಇಂದಿನಿಂದ ಮುಂದಿನ ನೂರು ದಿನಗಳ ಕಾಲ ಭದ್ರಾ ಜಲಾಶಯದಿಂದ ಎಡದಂಡೆಯ ನಾಲೆಗೆ 380 ಹಾಗೂ ಬಲದಂಡೆ ನಾಲೆಯಲ್ಲಿ 2,650 ಕ್ಯೂಸೆಕ್​​ ನೀರನ್ನು ಮುಂಗಾರು ಬೆಳೆಗಳನ್ನು ಬೆಳೆಯಲು ಒಟ್ಟು 100 ದಿನಗಳ ಕಾಲ ( ಮೂರು ತಿಂಗಳು ಹತ್ತು ದಿನ) ನೀರನ್ನು ಹರಿಸಲಾಗುವುದು ಎಂದು ಸರ್ಕಾರ ಹೊರಡಿರುವ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:Tungabhadra Dam: ತುಂಗಭದ್ರಾ ಡ್ಯಾಂನಿಂದ ಕಾಲುವೆಗಳಿಗೆ ನೀರು ಬಿಡುಗಡೆ

ಲಕ್ಕವಳ್ಳಿ ಭದ್ರಾ ಜಲಾಶಯದ ನೀರಿನ ಮಟ್ಟ ಎಷ್ಟಿದೆ: ಭದ್ರಾ ಜಲಾಶಯದ ಸದ್ಯ ನೀರಿನ ಮಟ್ಟ 166.5 ಅಡಿಯಷ್ಟು ಇದೆ. ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, ಜಲಾಶಯ ಭರ್ತಿಯಾಗಲು ಇನ್ನೂ 20 ಅಡಿ ಬಾಕಿ ಇದೆ. ಪ್ರಸ್ತುತ ಜಲಾಶಯಕ್ಕೆ 4,118 ಕ್ಯುಸೆಕ್​​ ನೀರಿನ ಒಳಹರಿವಿದ್ದು, 194 ಕ್ಯುಸೆಕ್​ ಹೊರ ಹರಿವಿದೆ.

ಕಳೆದ ವರ್ಷ ಭಾರೀ ಮಳೆ ಆಗಿದ್ದರಿಂದ ಭದ್ರಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿತ್ತು. ಆದ್ದರಿಂದ ಭದ್ರಾ ನಾಲೆಗಳಿಗೆ ಜುಲೈ ತಿಂಗಳನಲ್ಲೇ ನೀರು ಹರಿಸಲಾಗಿತ್ತು. ಆದರೆ ಈ ವರ್ಷ ಜೂನ್​ನಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಭದ್ರಾ ಜಲಾಶಯ ಭರ್ತಿಯಾಗದೇ 20 ಅಡಿ ಬಾಕಿ ಉಳಿಯಿತು. ಜುಲೈ ತಿಂಗಳಲ್ಲಿ ತಕ್ಕಮಟ್ಟಿಗೆ ಮಳೆ ಆಗಿದ್ದರಿಂದ ಭದ್ರಾ ಜಲಾಶಯಕ್ಕೆ 166.5 ಅಡಿಯಷ್ಟು ನೀರು ಹರಿದು ಬಂದಿದ್ದರಿಂದ ಭದ್ರಾ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ.

ಇದನ್ನೂ ಓದಿ: KRS DAM: ಕೆಆರ್​ಎಸ್ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ: ರೈತರ ಮೊಗದಲ್ಲಿ ಮಂದಹಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.