ETV Bharat / state

ವೋಟರ್ಸ್‌ ಲಿಸ್ಟ್‌ ಅದಲು-ಬದಲು : ಮತದಾರರು, ಅಭ್ಯರ್ಥಿಗಳು - ಪೊಲೀಸರ ನಡುವೆ ವಾಗ್ವಾದ - ದಾವಣಗೆರೆಯಲ್ಲಿ ಮತದಾರರ ಪಟ್ಟಿ ಅದಲು-ಬದಲು

ಪೊಲೀಸರ ಹಾಗೂ ಅಭ್ಯರ್ಥಿಗಳ‌ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿ ಆಗಿರುವ ದೋಷ ಸರಿಪಡಿಸುವಂತೆ ತಹಶೀಲ್ದಾರ್​ಗೆ ದೂರವಾಣಿ ಮೂಲಕ ಮಾತನಾಡಿ ಮನವಿ ಮಾಡಿದರು..

ದಾವಣಗೆರೆಯಲ್ಲಿ ಮತದಾರರ ಪಟ್ಟಿ ಅದಲು-ಬದಲು
Voter list interchange in davanagere
author img

By

Published : Dec 27, 2020, 10:01 AM IST

ದಾವಣಗೆರೆ : ಎರಡನೇ ಹಂತದ ಗ್ರಾಪಂ ಚುನಾವಣಾ‌ ಮತದಾನ ಆರಂಭವಾಗಿದ್ದು, ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ಮತದಾರರ ಪಟ್ಟಿ ಅದಲು-ಬದಲಾಗಿರುವ ಘಟನೆ ನಡೆದಿದೆ.

ಮತಗಟ್ಟೆ 53 ಹಾಗೂ 53Aಯಲ್ಲಿ ಮತದಾರರ ಪಟ್ಟಿಯಲ್ಲಿ ದೋಷ ಕಂಡು ಬಂದಿದ್ದು, ಮತದಾರ ಸಂಖ್ಯೆಗಳು ಕೂಡ‌ ಅದಲು-ಬದಲಾಗಿವೆ. ಇದರಿಂದ ಕೋಪಗೊಂಡು ಮತದಾರರು ಹಾಗೂ ಅಭ್ಯರ್ಥಿಗಳು ಮತಗಟ್ಟೆ 53ರಲ್ಲಿ ಬಂದು ಗಲಾಟೆ ಮಾಡಿದರು.

ಮತಗಟ್ಟೆಯಲ್ಲಿ ಮತದಾರರ ಪಟ್ಟಿ ಅದಲು-ಬದಲು

ಈ ವೇಳೆ ಮಹಿಳಾ ಪೊಲೀಸರು ಮತಗಟ್ಟೆಯೊಳಗೆ ಬರದಂತೆ ಮತದಾರರನ್ನು ತಡೆದರು. ಆಗ ಪೊಲೀಸರ ಹಾಗೂ ಅಭ್ಯರ್ಥಿಗಳ‌ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿ ಆಗಿರುವ ದೋಷ ಸರಿಪಡಿಸುವಂತೆ ತಹಶೀಲ್ದಾರ್​ಗೆ ದೂರವಾಣಿ ಮೂಲಕ ಮಾತನಾಡಿ ಮನವಿ ಮಾಡಿದರು.‌

ಬಳಿಕ‌ ಸ್ವಲ್ಪ ಸಮಯದಲ್ಲೇ ಮತದಾರರ ಪಟ್ಟಿಯನ್ನು ಸರಿಪಡಿಸಿ ಮತದಾನಕ್ಕೆ‌ ಅನುವು ಮಾಡಿಕೊಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.