ದಾವಣಗೆರೆ: ವೀರಶೈವ-ಲಿಂಗಾಯತ ಒಂದೇ ಧರ್ಮವಾಗಿ ಉಳಿಯಬೇಕೆ ವಿನಾಃ ವೀರಶೈವರು ಬೇರೆ ಲಿಂಗಾಯತರು ಬೇರೆ ಆಗಬಾರದು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಸ್ತ ಲಿಂಗಾಯತ ಬೇಡಿಕೆ ಇದ್ರೇ ತಮ್ಮದೇಯಾದ ಮುಖ್ಯಮಂತ್ರಿಗಳಿದ್ದಾರೆ ಹಾಗು ಸಾಕಷ್ಟು ಸಚಿವರಿದ್ದಾರೆ. ಈ ಕುರಿತು ಸಭೆ ಕರೆದು ಚರ್ಚೆ ನಡೆಸಿ ಸಾಧಕ-ಬಾಧಕಗಳನ್ನು ಚರ್ಚಿಸುವ ಮೂಲಕ ಬಗೆಹರಿಸಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಕಮೀಟಿಯ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆಯವರು ಈಗಾಗಾಲೇ ಅಧ್ಯಯನ ನಡೆಸಿದ್ದಾರೆ ಎಂದು ತಿಳಿಸಿದರು.
ನಾನು ಪಂಚಮಸಾಲಿ ಸಮಾಜದ ಬಗ್ಗೆ ಮಾತನಾಡುವುದಿಲ್ಲ, ಬದಲಾಗಿ ಸಣ್ಣ ಸಣ್ಣ ಸಮಾಜದರನ್ನು ಒಗ್ಗೂಡಿಸಿ ಅವರ ಧ್ವನಿಯಾಗಬೇಕಾಗಿದೆ. ಪಂಚಮಸಾಲಿ ಪ್ರತ್ಯೇಕ ಧರ್ಮದ ವಿಚಾರವನ್ನ ಅವರು ತಳ್ಳಿಹಾಕಿದರು. ಪಂಚಮಸಾಲಿ ಮತ್ತೊಂದು ಪ್ರತ್ಯೇಕ ಪೀಠ ಸ್ಥಾಪನೆ ವಿಚಾರವಾಗಿ ಮಾತನಾಡಿದ ನಿರಾಣಿ ಇದ್ಯಾವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.