ETV Bharat / state

ಅಡಕೆ ತೋಟಕ್ಕೆ ಫಿಲ್ಟರ್ ವಾಟರ್ ಡ್ರಿಪ್ ಬಳಕೆ: ಏಕಕಾಲಕ್ಕೆ 14 ಎಕರೆಗೆ ನೀರು ಹಾಯಿಸುತ್ತಿರುವ ರೈತ - Model farmer of Channagiri taluk of Davanagere district

ದಾವಣಗೆರೆಯ ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿಯ ರೈತ ಟಿ.ವಿ ರಾಜು ಎಂಬುವರು ತಮ್ಮ ಬಾಳೆ, ಅಡಕೆ ತೋಟಕ್ಕೆ ಫಿಲ್ಟರ್ ವಾಟರ್ ಡ್ರಿಪ್ ಬಳಕೆ ಮಾಡಿ ಬೆಳೆ ಬೆಳೆಯುವ ಮೂಲಕ ಮಾದರಿ ರೈತ ಎಂಬ ಖ್ಯಾತಿ ಗಳಿಸಿದ್ದಾರೆ.

water filter
ಅಡಿಕೆ ತೋಟಕ್ಕೆ ವಾಟರ್ ಫಿಲ್ಟರ್ ವ್ಯವಸ್ಥೆ ಅಳವಡಿಕೆ
author img

By

Published : Jan 13, 2022, 9:33 AM IST

ದಾವಣಗೆರೆ: ಅಡಕೆ ಹಾಗೂ ಬಾಳೆ ತೋಟಗಳಿಗೆ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ಅಧಿಕ ನೀರು ಹಾಯಿಸಲು ಸಾಧ್ಯವಾಗದೇ ಅದೆಷ್ಟೋ ರೈತರು ತೋಟದಿಂದ ದೂರ ಸರಿದಿರುವ ಉದಾಹರಣೆಗಳಿವೆ. ಅದ್ರೆ ಬೆಣ್ಣೆನಗರಿ ದಾವಣಗೆರೆಯ ರೈತನೊಬ್ಬ ಏಕಕಾಲಕ್ಕೆ ಇಡೀ 14 ಎಕರೆ ತೋಟಕ್ಕೆ ಫಿಲ್ಟರ್ ನೀರನ್ನು ಹಾಯಿಸಿ ಮಿತ ನೀರಿನಲ್ಲೇ ಬೆಳೆ ಬೆಳೆಯುತ್ತಿದ್ದಾನೆ.

ದಾವಣಗೆರೆಯ ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿಯ ರೈತ ಟಿ.ವಿ ರಾಜು ಎಂಬುವರು ತಮ್ಮ ಬಾಳೆ, ಅಡಕೆ ತೋಟಕ್ಕೆ ಫಿಲ್ಟರ್ ವಾಟರ್ ಡ್ರಿಪ್ ಬಳಕೆ ಮಾಡಿ ಬೆಳೆ ಬೆಳೆಯುವ ಮೂಲಕ ಮಾದರಿ ರೈತ ಎಂಬ ಖ್ಯಾತಿ ಗಳಿಸಿದ್ದಾರೆ.

ಅಡಕೆ ತೋಟಕ್ಕೆ ವಾಟರ್ ಫಿಲ್ಟರ್ ವ್ಯವಸ್ಥೆ ಅಳವಡಿಕೆ

ತಮ್ಮ ತೋಟದಲ್ಲಿ ಕಡಿಮೆ ಪ್ರಮಾಣದ ನೀರು ಇರುವ ಕಾರಣ ಅಡಕೆ, ಬಾಳೆ ಬೆಳೆಯಲು ರಾಜು ಪರದಾಡುತ್ತಿದ್ದರು. ಆದರೆ, ವಾಟರ್ ಫಿಲ್ಟರ್ ಡ್ರಿಪ್ ಬಳಕೆಯಿಂದ ಕಡಿಮೆ ನೀರಿನಲ್ಲೇ 14 ಎಕರೆ ತೋಟ ಮಾಡಿಕೊಂಡಿದ್ದು, ನೀರನ್ನು ಉಳಿತಾಯ ಮಾಡುತ್ತಿದ್ದಾರೆ. ಡ್ರಿಪ್ ಬಳಕೆಯಿಂದ ಪ್ರತಿ ಗಿಡಕ್ಕೂ ಸಮರ್ಪಕವಾಗಿ ನೀರು ತಲುಪುತ್ತದೆ. ಜೊತೆಗೆ ಇಳುವರಿ ಕೂಡ ಹೆಚ್ಚು ಬರುತ್ತದೆ ಎಂಬುದು ಟಿ.ವಿ ರಾಜು ಅಭಿಪ್ರಾಯ.

ಈ ವಾಟರ್ ಫಿಲ್ಟರ್ ವ್ಯವಸ್ಥೆ ಇಡೀ 14 ಎಕರೆ ಪ್ಲಾಟ್​ಗೆ ಸಮರ್ಪಕವಾದ ನೀರು ಒದಗಿಸುತ್ತಿದ್ದು, ಇದನ್ನು ಅಳವಡಿಸಲು ಎಂಟು ಲಕ್ಷ ಖರ್ಚಾಗಿದೆಯಂತೆ. ಇಡೀ ಚನ್ನಗಿರಿ ತಾಲೂಕಿನಲ್ಲಿ ರಾಜು ಮಾತ್ರ ಈ ಫಿಲ್ಟರ್ ವಾಟರ್ ಡ್ರಿಪ್ ಇರಿಗೇಷನ್ ವ್ಯವಸ್ಥೆ ಮಾಡಿಕೊಂಡಿದ್ದು, ಇದೀಗ ಇತರ ರೈತರು ಕೂಡ ತಮ್ಮ ಜಮೀನಿನಲ್ಲಿ ಇದನ್ನು ಅಳವಡಿಸಲು ಯೋಚಿಸಿದ್ದಾರೆ.

ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ: ಡಿಕೆಶಿ, ಸಿದ್ದರಾಮಯ್ಯ ಸೇರಿ 29 ಮಂದಿ ವಿರುದ್ಧ 4ನೇ ಎಫ್​ಐಆರ್ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.