ETV Bharat / state

ದಾವಣಗೆರೆ: ರೈಲ್ವೆ ಬ್ರಿಡ್ಜ್​ಗೆ ಗುದ್ದಿದ ಬೈಕ್​.. ಸೇತುವೆ ಕೆಳಗೆ ಬಿದ್ದು ಕೇರಳದ ಯುವಕರಿಬ್ಬರು ಸಾವು - ವಾಪಾಸ್​ ತೆರಳುತ್ತಿದ್ದ ವೇಳೆ ಭೀಕರ ಅಪಘಾತ

ಕೇರಳದಿಂದ ಬೈಕ್​ನಲ್ಲಿ ಗೋವಾಗೆ ತೆರಳಿ ಮರಳುವಾಗ ದಾವಣಗೆರೆ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

Kerala youths die in an accident  accident in Davangere  Kerala youths die in an accident in Davangere  ಬ್ರಿಡ್ಜ್​ಗೆ ಗುದ್ದಿ ಕೆಳಗೆ ಬಿದ್ದ ಕೇರಳದ ಯುವಕರಿಬ್ಬರು  ಕೇರಳದ ಯುವಕರಿಬ್ಬರು ಸಾವು  ಬೈಕ್​ನಲ್ಲಿ ಕೇರಳದಿಂದ ಗೋವಾ  ದಾವಣಗೆರೆಯಲ್ಲಿ ಭೀಕರ ಅಪಘಾತ  ಸ್ಥಳದಲ್ಲೇ ಇಬ್ಬರು ಯುವಕರು ಮೃತ  ಯುವಕರು ಬೈಕ್​ ಮೂಲಕ ರಾಜ್ಯಕ್ಕೆ ಭೇಟಿ  ವಾಪಾಸ್​ ತೆರಳುತ್ತಿದ್ದ ವೇಳೆ ಭೀಕರ ಅಪಘಾತ  ಎಸ್​ಎಸ್ ಆಸ್ಪತ್ರೆ ಪಕ್ಕದಲ್ಲಿರುವ ರೈಲ್ವೆ ಬ್ರಿಡ್ಜ್
ದಾವಣಗೆರೆ: ರೈಲ್ವೇ ಬ್ರಿಡ್ಜ್​ಗೆ ಗುದ್ದಿ ಕೆಳಗೆ ಬಿದ್ದ ಕೇರಳದ ಯುವಕರಿಬ್ಬರು ಸಾವು..
author img

By ETV Bharat Karnataka Team

Published : Sep 7, 2023, 2:35 PM IST

Updated : Sep 7, 2023, 3:51 PM IST

ದಾವಣಗೆರೆ: ನೆರೆ ರಾಜ್ಯದ ಇಬ್ಬರು ಯುವಕರು ಬೈಕ್​ ಮೂಲಕ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಬಳಿಕ ವಾಪಾಸ್​ ತೆರಳುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ದಾವಣಗೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 54ರಲ್ಲಿ ನಡೆದಿದೆ. ಮೃತರನ್ನು ಕೇರಳದ ಪಾಲಕ್ಕಾಡ್​​ನ ಅತುಲ್ (25), ಋಷಿಕೇಶ್ ( 24) ಎಂದು ಗುರುತಿಸಲಾಗಿದೆ.‌

ದಾವಣಗೆರೆಯ ಎಸ್​ಎಸ್ ಆಸ್ಪತ್ರೆ ಪಕ್ಕದಲ್ಲಿರುವ ರೈಲ್ವೆ ಬ್ರಿಡ್ಜ್ ಬಳಿ ಅಪಘಾತ ಸಂಭವಿಸಿದ್ದು, ಕೇರಳದಿಂದ ಯುವಕರು ಬಂದಿದ್ದರು ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ‌ಎನ್​ಫೀಲ್ಡ್ ಹಿಮಾಲಯನ್ ಬೈಕ್​ನಲ್ಲಿ ಕೇರಳದಿಂದ ಕರ್ನಾಟಕ ಮಾರ್ಗವಾಗಿ ಗೋವಾಕ್ಕೆ ತೆರಳಿದ್ದರು. ಗೋವಾದಲ್ಲಿ ತಮ್ಮ ಕಾರ್ಯ ಮುಗಿಸಿಕೊಂಡು ಯುವಕರಿಬ್ಬರು ಮತ್ತೆ ಕರ್ನಾಟಕದ ಮೂಲಕ ಕೇರಳಕ್ಕೆ ತೆರಳುತ್ತಿದ್ದರು. ಈ ವೇಳೆ ದಾವಣಗೆರೆ ಬಳಿ ತಡರಾತ್ರಿ ಅಪಘಾತ ‌ಸಂಭವಿಸಿದೆ.

ಓವರ್ ಸ್ಪೀಡ್​ನಲ್ಲಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 54ರ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಪರಿಣಾಮ ಸೇತುವೆ ಮೇಲಿಂದ ಯುವಕರು ರೈಲ್ವೆ ಹಳಿ ಬಳಿ ಪಕ್ಕದಲ್ಲಿ ಬಿದ್ದಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಗ ರಸ್ತೆಯ ಮಧ್ಯದಲ್ಲಿ ಬಿದ್ದಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಕೂಡಲೇ ಸ್ಥಳೀಯರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುದ್ದಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಎಸ್​ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ದಾವಣಗೆರೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬೈಕ್ ರಿಜಿಸ್ಟ್ರೇಷನ್​ ಮಾಹಿತಿ ಪ್ರಕಾರ ಯುವಕರಿಬ್ಬರು ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಪೊಲೀಸರು ಮೃತರ ಕುಟುಂಬಸ್ಥರಿಗೆ ಮಾಹಿತಿ ಒದಗಿಸಿದ್ದು, ಮೃತರ ಪೋಷಕರು ಕೇರಳದಿಂದ ನಿರ್ಗಮಿಸಿದ್ದಾರೆ. ಆದಷ್ಟು ಬೇಗ ಮೃತರ ಪೋಷಕರು ಮತ್ತು ಸಂಬಂಧಿಗಳು ದಾವಣಗೆರೆ ತಲುಪಲಿದ್ದಾರೆ.

ಘಟನೆ ಬಗ್ಗೆ ದಕ್ಷಿಣ ಸಂಚಾರಿ ಠಾಣೆಯ ಸಿಪಿಐ ಮಂಜುನಾಥ್ ಪ್ರತಿಕ್ರಿಯಿಸಿ, ''ಮೃತರು ಕೇರಳದಿಂದ ದ್ವಿಚಕ್ರ ವಾಹನದಲ್ಲಿ ಪ್ರವಾಸಕ್ಕೆಂದು ಗೋವಾಕ್ಕೆ ​​ತೆರಳಿದ್ದರು. ಗೋವಾದಿಂದ ಬೆಂಗಳೂರಿಗೆ ವಾಪಸ್ ಆಗುವ ವೇಳೆ ದಾವಣಗೆರೆ ಬಳಿ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರು ಕೇರಳದ ಪಾಲಕ್ಕಾಡ್​​ನವರು ಎಂದು ತಿಳಿದು ಬಂದಿದೆ. ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ'' ಎಂದು ತಿಳಿಸಿದ್ದಾರೆ.

ಓದಿ: ಶಾಲೆಯಲ್ಲಿ ಅಭ್ಯಾಸದ ವೇಳೆ ತಲೆಗೆ ಹೊಕ್ಕ ಭರ್ಚಿ.. ಜಾವಲಿನ್‌ನಿಂದ 15 ವರ್ಷದ ಬಾಲಕ ದಾರುಣ ಸಾವು

Last Updated : Sep 7, 2023, 3:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.