ದಾವಣಗೆರೆ : ಜಾತ್ರೆಗೆ ಬಂದಿದ್ದ ಬಾಲಕರಿಬ್ಬರು ತುಂಗಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ನಡೆದಿದೆ.
ಓದಿ: ‘ಯಾವ ಕ್ರೀಡೆ ಅಂತ ಬಿಡಿಸಿ ಹೇಳ್ರಿ’: ವಿಧಾನಸಭೆ ಕಲಾಪದಲ್ಲಿ ಸಿಡಿಯದ್ದೇ ಹಾಸ್ಯ
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಉಕ್ಕಡಗಾತ್ರಿ ಗ್ರಾಮದ ಬಳಿಯ ತುಂಗಭದ್ರ ನದಿಯಲ್ಲಿ ಈ ಘಟನೆ ನಡೆದಿದೆ. ಚನ್ನಗಿರಿ ತಾಲೂಕಿನ ಮಾಳನಾಯಕನಹಟ್ಟಿ ನಿವಾಸಿ 12 ವರ್ಷದ ಅಜ್ಜಯ್ಯ ಹಾಗೂ ಆಂಧ್ರದ ಕಲ್ಯಾಣದುರ್ಗದ 14 ವರ್ಷದ ನವೀನ್ ಕುಮಾರ್ ಮೃತಪಟ್ಟ ಬಾಲಕರು ಎಂದು ಗುರುತಿಸಲಾಗಿದೆ.
ಮೃತ ಬಾಲಕರು ಪೋಷಕರೊಂದಿಗೆ ಉಕ್ಕಡಗಾತ್ರಿಯ ಅಜ್ಜಯ್ಯನ ರಥೋತ್ಸವಕ್ಕೆ ಬಂದಿದ್ದರು. ಈ ವೇಳೆ ನದಿಯಲ್ಲಿ ಈಜಲು ಹೋದಾಗ ಮೃತಪಟ್ಟಿದ್ದಾರೆ. ಬಳಿಕ ಈಜು ತಜ್ಞರು ನದಿಗೆ ಇಳಿದು ಬಾಲಕರ ಶವವನ್ನ ಹೊರ ತೆಗೆದಿದ್ದಾರೆ. ಈ ಸಂಬಂಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.