ETV Bharat / state

ಎರಡೂವರೆ ವರ್ಷದ ಪೋರಿಗೆ ಅಪಾರ ಜ್ಞಾಪಕ ಶಕ್ತಿ: ದಾಖಲೆ ಬರೆದ ಚತುರೆ! - sukruti selected indian book of record in davanagere

ಎರಡೂವರೆ ವರ್ಷದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸೇರುವ ಮೂಲಕ ಚನ್ನಗಿರಿ ತಾಲೂಕಿನ ನಾರಶೆಟ್ಟಿಹಳ್ಳಿಯ ಮಗುವೊಂದು ಪ್ರಶಂಸೆಗೆ ಪಾತ್ರವಾಗಿದೆ.

two-and-a-half-year-old-girl-achieved-indian-book-of-record
ಸುಕೃತಿ
author img

By

Published : Jan 21, 2021, 8:22 PM IST

ದಾವಣಗೆರೆ: ಚಿಕ್ಕ ವಯಸ್ಸಿನಲ್ಲೇ ಮಗುವೊಂದು ಅಪಾರ ಜ್ಞಾಪಕ ಶಕ್ತಿ ಸಾಧಿಸುವ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಸೇರಿದೆ.

ಜಿಲ್ಲೆಯ ಚನ್ನಗಿರಿ ತಾಲೂಕಿನ ನಾರಶೆಟ್ಟಿಹಳ್ಳಿಯ ಶ್ರೀನಿವಾಸ್ ಮತ್ತು ರಶ್ಮಿ ರಾಣಿಯ ಪುತ್ರಿ ಸುಕೃತಿ ಈ ಸಾಧನೆ ಮಾಡಿರುವ ಬಾಲಕಿ. ಎರಡೂವರೆ ವರ್ಷದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್, ಕರ್ನಾಟಕ ಬುಕ್ ಆಫ್ ಅಚೀವರ್ಸ್ ಪಡೆದ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ದಾಖಲೆ ಬರೆದ ಚತುರೆ ಸುಕೃತಿ

ಓದಿ: ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ವ್ಯಕ್ತಿಯಿಂದ ಲಕ್ಷ ರೂ. ದೇಣಿಗೆ

ದೇಶದ ನಾಯಕರ ಹೆಸರು, ವಾಹನದ ಹೆಸರು ತಪ್ಪದೇ ಹೇಳುವ ಮಗಳ ಅಪಾರ ಜ್ಞಾನ ಶಕ್ತಿಯನ್ನು ಗಮನಿಸಿ ಸುಕೃತಿ ತಂದೆ ಶ್ರೀನಿವಾಸ್, ಪುತ್ರಿಯ ವಿಡಿಯೋವನ್ನ ಇಂಡಿಯನ್ ಬುಕ್ ಆಫ್ ರೆಕಾರ್ಡ್​, ಕರ್ನಾಟಕ ಬುಕ್ ಅಚೀವರ್ಸ್​ಗೆ ಕಳುಹಿಸಿದ್ದರು. ಈ ಮಗುವಿನ ವಿಡಿಯೋ ಗಮನಿಸಿ ಶಾರ್ಪ್​ ಮೆಮೋರಿ ಕಿಡ್ ವಿಭಾಗದಲ್ಲಿ ಸುಕೃತಿಗೆ ಎರಡು ಪ್ರಶಸ್ತಿಗಳು ಲಭಿಸಿವೆ. ಚಿಕ್ಕ ವಯಸ್ಸಿನಲ್ಲೇ ಮಗಳ ಸಾಧನೆ ಕಂಡು ಶ್ರೀನಿವಾಸ್ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.