ದಾವಣಗೆರೆ: ಈಗಾಗಲೇ ಎಸ್ಸಿ, ಎಸ್ಟಿ ಸಮುದಾಯಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಘೋಷಿಸಿದೆ. ಇದರಿಂದಾಗಿ ಇತರೆ ಸಮುದಾಯಗಳು ಕೂಡಾ ನಮ್ಮ ಸಮಾಜಗಳಿಗೆ ಮೀಸಲಾತಿ ಬೇಕೇಬೇಕೆಂದು ಪಟ್ಟು ಹಿಡಿದಿವೆ. ಇದರ ನಡುವೆ ಪಂಚಮಸಾಲಿ ಸಮಾಜದ ಎರಡು ಮಠಗಳ ಇಬ್ಬರು ಸ್ವಾಮೀಜಿಗಳ ನಡುವೆ ಮೀಸಲಾತಿಗಾಗಿ ಸ್ಪರ್ಧೆ ಶುರುವಾದಂತಿದೆ.
2ಎ ಮೀಸಲಾತಿ ವಿಚಾರವಾಗಿ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀ ಮತ್ತು ಹರಿಹರ ಪೀಠದ ವಚನಾನಂದ ಶ್ರೀಗಳ ನಡುವೆ ಟೀಕಾಸ್ತ್ರ ಪ್ರಯೋಗವಾಗಿದೆ. ವಚನಾನಂದ ಶ್ರೀಯವರು, ಕೆಲವರು ಸ್ವಾಮೀಜಿಗಳಾಗುವ ಮೊದಲೇ ಮೀಸಲಾತಿ ಹೋರಾಟ ಆರಂಭವಾಗಿತ್ತು ಎಂದು ಖಾರವಾಗಿ ನುಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜಯಮೃತ್ಯುಂಜಯ ಶ್ರೀಗಳು, ನಾವು ಮೀಸಲಾತಿಗಾಗಿ ಪಾದಯಾತ್ರೆ ಮಾಡಿದ್ದೇವೆ. ಕೆಲವರು ಪಾದಯಾತ್ರೆಗೂ ಬಂದಿಲ್ಲ ಎಂದು ಪರೋಕ್ಷವಾಗಿ ವಚನಾನಂದ ಸ್ವಾಮೀಜಿಗೆ ತಿರುಗೇಟು ಕೊಟ್ಟಿದ್ದಾರೆ.
ಮೀಸಲಾತಿ ಹೋರಾಟ ಶುರುವಾದಾಗ ಈಗ ಹೋರಾಟ ಮಾಡುವವರು ಎಲ್ಲಿದ್ದರು?. ಆಗವರು ಹೋರಾಟ ಮಾಡುವ ಬದಲು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದರು. ಈಗ ನಾವು ಹೋರಾಟ ಶುರುಮಾಡಿದ ಮೇಲೆ ಬಂದು ಪಾದಯಾತ್ರೆ ಮಾಡುತ್ತಾ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ವಚನಾನಂದ ಸ್ವಾಮೀಜಿ ಟೀಕಿಸಿದ್ದಾರೆ.
ಇದನ್ನೂ ಓದಿ: ಡಿ.22ರಂದು ಪಂಚಮಸಾಲಿ ಮೀಸಲಾತಿ ಸಿಗುವ ಬಗ್ಗೆ ಸ್ಪಷ್ಟ ಚಿತ್ರಣ.. ಜಯಮೃತ್ಯುಂಜಯ ಶ್ರೀ