ದಾವಣಗೆರೆ: ಲಾಕ್ಡೌನ್ನಿಂದಾಗಿ ಸಾರಿಗೆ ಇಲಾಖೆಯು 1800 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈಗ ಬಸ್ ಸೇವೆಯನ್ನು ಹಂತ ಹಂತವಾಗಿ ಪ್ರಾರಂಭಿಸುತ್ತೇವೆ. ಚಾಲಕರು, ನಿರ್ವಾಹಕರು ಸೇರಿದಂತೆ ಇಲಾಖೆಯ ಸಿಬ್ಬಂದಿಗೆ ಮೇ ತಿಂಗಳ ವೇತನ ನೀಡುತ್ತೇವೆ. ಯಾವ ಸಿಬ್ಬಂದಿಯೂ ಆತಂಕಪಡುವ ಅಗತ್ಯವಿಲ್ಲವೆಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಯ ನೀಡಿದ್ದಾರೆ.
ಸಾರಿಗೆ ಇಲಾಖೆಯ ಯಾವ ಸಿಬ್ಬಂದಿಯೂ ಆತಂಕ ಪಡುವ ಅಗತ್ಯವಿಲ್ಲ: ಸಚಿವ ಸವದಿ ಅಭಯ - ವೇತನ ನೀಡಲು ಸರ್ಕಾರವು 460 ಕೋಟಿ ರೂಪಾಯಿ ಮೀಸಲು
ಈಗಾಗಲೇ ವೇತನ ನೀಡಲು ಸರ್ಕಾರವು 460 ಕೋಟಿ ರೂಪಾಯಿ ಮೀಸಲಿಟ್ಟಿದೆ. ಜೂನ್ 1 ರಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಹೆಚ್ಚು ಬಸ್ಗಳ ಓಡಾಟಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದರು.
ಸಚಿವ ಲಕ್ಷ್ಮಣ ಸವದಿ
ದಾವಣಗೆರೆ: ಲಾಕ್ಡೌನ್ನಿಂದಾಗಿ ಸಾರಿಗೆ ಇಲಾಖೆಯು 1800 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈಗ ಬಸ್ ಸೇವೆಯನ್ನು ಹಂತ ಹಂತವಾಗಿ ಪ್ರಾರಂಭಿಸುತ್ತೇವೆ. ಚಾಲಕರು, ನಿರ್ವಾಹಕರು ಸೇರಿದಂತೆ ಇಲಾಖೆಯ ಸಿಬ್ಬಂದಿಗೆ ಮೇ ತಿಂಗಳ ವೇತನ ನೀಡುತ್ತೇವೆ. ಯಾವ ಸಿಬ್ಬಂದಿಯೂ ಆತಂಕಪಡುವ ಅಗತ್ಯವಿಲ್ಲವೆಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಯ ನೀಡಿದ್ದಾರೆ.
ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರು ಲಾಕ್ಡೌನ್ ಕಾರಣ ಎರಡು ತಿಂಗಳಿಂದ ಸಂಕಷ್ಟ ಅನುಭವಿಸಿದ್ದಾರೆ. ಹೀಗಾಗಿ 5 ಸಾವಿರ ರೂಪಾಯಿಯನ್ನು ಅವರ ಅಕೌಂಟ್ಗೆ ಹಾಕಲಾಗುವುದು. ಸೇವಾ ಸಿಂಧು ಆ್ಯಪ್ನಲ್ಲಿ 1 ಲಕ್ಷದ 25 ಸಾವಿರ ಮಂದಿ ನೋಂದಣಿ ಮಾಡಿಸಿ ಅರ್ಜಿ ಹಾಕಿದ್ದು, ನಾಳೆಯಿಂದಲೇ ಹಣ ಹಾಕಲಾಗುವುದು. ಇನ್ನು ಆರೂವರೆ ಲಕ್ಷ ಚಾಲಕರು ಅರ್ಜಿ ಸಲ್ಲಿಸಬೇಕಿದೆ ಎಂದು ಮಾಹಿತಿ ನೀಡಿದರು.