ETV Bharat / state

ದಾವಣಗೆರೆ:ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸಿದ್ಧವಾಯಿತು ಟ್ರಾಫಿಕ್ ಪಾರ್ಕ್ - ETv Bharat Kannada news

ಸಂಚಾರಿ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸಿದ್ದಗೊಂಡ ಟ್ರಾಫಿಕ್ ಪಾರ್ಕ್ - ಸಂಚಾರಿ ನಿಯಮಗಳ ಬೋರ್ಡ್ ಅಳವಡಿಸಿದ ಪಾರ್ಕ್​ ಎಸ್ಪಿ ಸಿಬಿ ರಿಷ್ಯಂತ್​ ರಿಂದ ಉದ್ಘಾಟಿನೆ - ಟ್ರಾಫಿಕ್ ನಿಯಮಗಳನ್ನು ಗಾಳಿ ತೂರಿ ಬೇಕಾಬಿಟ್ಟಿ ವಾಹನ ಚಲಾಯಿಸುತ್ತಿದ್ದವರಿಗೆ ಈ ಟ್ರಾಫಿಕ್ ಪಾರ್ಕ್‌ ಉಪಯುಕ್ತ

SP CB Rishyant with school students
ಶಾಲೆಯ ವಿದ್ಯಾರ್ಥಿಗಳೊಂದಿಗೆ ಎಸ್ಪಿ ಸಿಬಿ ರಿಷ್ಯಂತ್
author img

By

Published : Jan 12, 2023, 10:39 PM IST

Updated : Jan 12, 2023, 11:08 PM IST

ಸಂಚಾರಿ ನಿಯಮಗಳ ಬೋರ್ಡ್ ಅಳವಡಿಸಿದ ಪಾರ್ಕ್​ ಎಸ್ಪಿ ಸಿಬಿ ರಿಷ್ಯಂತ್​ ರಿಂದ ಉದ್ಘಾಟಿನೆ

ದಾವಣಗೆರೆ :ಪ್ರಸ್ತುತ ದಿನಗಳಲ್ಲಿ ಅಪಘಾತಗಳು ಹೆಚ್ಚಾಗ್ತಿದ್ದು, ಸಂಚಾರಿ ನಿಯಮಗಳು ಅರಿಯದ ವಿದ್ಯಾರ್ಥಿಗಳೇ ಹೆಚ್ಚು ಅಪಘಾತಕ್ಕೆ ಬಲಿಯಾಗ್ತಿದ್ದಾರೆ. ಇದನ್ನು ಮನಗಂಡ ದಾವಣಗೆರೆ ಸಂಚಾರಿ ಪೋಲಿಸರು, ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಒಂದೊಳ್ಳೆ ಉಪಾಯ ಕಂಡುಕೊಂಡಿದ್ದಾರೆ.‌ ಅಂದಾಗೆ ದಾವಣಗೆರೆ ನಗರದ ಎಸ್ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಗಂಗೂಬಾಯಿ ಹಾನಗಲ್‌ ಪಾರ್ಕ್‌ನಲ್ಲಿ, ಜಿಲ್ಲಾ ಪೊಲೀಸ್ ಇಲಾಖೆ, ಸ್ಮಾರ್ಟ್‌ಸಿಟಿ, ಮಹಾನಗರ ಪಾಲಿಕೆ ಅಡಿ ಈ ಟ್ರಾಫಿಕ್ ಪಾರ್ಕ್ ಅಭಿವೃದ್ಧಿ ಪಡಿಸಲಾಗಿದೆ.

ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಈ ಟ್ರಾಫಿಕ್ ಪಾರ್ಕ್‌ವೊಂದನ್ನು ಸಿದ್ಧಪಡಿಸಿದ್ದಾರೆ‌. ಇಡೀ ಪಾರ್ಕ್​ ತುಂಬಾ ಸಂಚಾರ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆ ಬೋರ್ಡ್​ಗಳನ್ನು ಅಳವಡಿಸಿದ್ದು, ಎಲ್ಲಿ ನೋಡಿದರಲ್ಲಿ ಸಂಚಾರಿ ನಿಯಮಗಳು ಕಾಣ ಸಿಗುತ್ತಿವೆ. ಸಾರ್ವಜನಿಕರಿಗೆ ಜಾಗೃತಿ‌ ಮೂಡಿಸುವ ಸಲುವಾಗಿ ಈ ಪಾರ್ಕ್​ನ್ನು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಅವರು ಉದ್ಘಾಟಿಸಿದರು.

ಟ್ರಾಫಿಕ್‌ ಪಾರ್ಕ್‌ನಲ್ಲಿ ಏಕ ಮುಖ ರಸ್ತೆ, ದ್ವೀಮುಖ ರಸ್ತೆ, ಪಾರ್ಕಿಂಗ್, ನೋ ಪಾರ್ಕಿಗ್ ಬೋರ್ಡ್​ಗಳು, ಟ್ರಾಫಿಕ್ ಸಿಗ್ನಲ್, ಝೀಬ್ರಾ ಕ್ರಾಸಿಂಗ್,‌ ಫಿಯ್ಯೋಲ್ ಬೋರ್ಡ್, ನೋ ಟರ್ನ್ ಲೆಫ್ಟ್ ಹಾಗೂ ರೈಟ್, ‌ನ್ಯಾರೋ ಬ್ರಿಡ್ಜ್, ನೋ ಓವರ್ ಟೇಕ್, ಸ್ಪೀಡ್‌ ಲಿಮಿಟ್ ಹೀಗೇ ಸಾಕಷ್ಟು ಸಂಚಾರಿ ನಿಯಮಗಳ ಕುರಿತು ಬೋರ್ಡ್​ಗಳನ್ನು ಅಳವಡಿಸಲಾಗಿದೆ. ಈ ನಡುವೆ ಸಂಚಾರ ನಿಯಮಗಳ ಬಗ್ಗೆ ತಿಳಿದುಕೊಳ್ಳಲು ಮಕ್ಕಳು ಪಾರ್ಕ್​ಗೆ ಭೇಟಿ ನೀಡಿದರು. ಇಲ್ಲಿ ಅಳವಡಿಸಲಾದ ಬೋರ್ಡ್​ಗಳ ಮೂಲಕ ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು.‌

ಪಾರ್ಕ್​ ಉದ್ಘಾಟಿಸಿ ಮಾತನಾಡಿದ ಎಸ್ಪಿ ಸಿಬಿ ರಿಷ್ಯಂತ್​, ’’ಈ ಯೋಜನೆಗೆ ಸ್ಮಾರ್ಟ್ ಸಿಟಿ, ಮಹಾನಗರ ಪಾಲಿಕೆ ಸಹಕಾರ ಸಿಕ್ಕಿದ್ದು, ಡಿಎಸ್‌ಪಿ ಹೆಚ್ಚುವರಿ ಎಸ್‌ಪಿ, ಹಾಗೂ ಇನ್ಸ್‌ಪೆಕ್ಟರ್ ಸೇರಿದಂತೆ ಪಾಲಿಕೆ ಅಧಿಕಾರಿಗಳ ಜತೆ ಸೇರಿಕೊಂಡು ಈ ಟ್ರಾಫಿಕ್‌ಪಾರ್ಕ್‌ ಕಾನ್ಸೆಪ್ಟ್ ಮಾಡಿರುವುದು ತುಂಬಾ ವಿಶೇಷವಾಗಿದೆ ಎಂದು ಅಭಿನಂದನೆ ಸಲ್ಲಿಸಿದರು. ಗಂಗೂಬಾಯಿ ಪಾರ್ಕ್​ಗೆ ನಿತ್ಯ ಸಾಕಷ್ಟು ಹಿರಿಯರು, ಸಾರ್ವಜನಿಕರು ವಾಯು ವಿಹಾರಕ್ಕೆಂದು ಆಗಮಿಸುತ್ತಾರೆ. ಆ ಸಂದರ್ಭದಲ್ಲಿ ವಾಯುವಿಹಾರ ಮಾಡ್ತಾ ಈ ಸೈನ್ ಬೋರ್ಡ್​ಗಳನ್ನು ನೋಡುತ್ತಾ ಸಾಗಿದರೆ, ಟ್ರಾಫಿಕ್​ ರೂಲ್ಸ್​, ಹಾಗೂ ವಾಹನ ಚಾಲನಾ ನಿಯಮಗಳನ್ನು ಸುಲಭವಾಗಿ ಮನನ ಮಾಡಿಕೊಳ್ಳಬಹುದು ಎಂದು ಹೇಳಿದರು.

ಅಷ್ಟೇ ಅಲ್ಲ ಮಕ್ಕಳನ್ನು ಬಿಡುವಿನ ಸಮಯದಲ್ಲಿ ಪಾರ್ಕ್​ಗೆ ಕರೆದುಕೊಂಡು ಬಂದ್ರೇ ಮಕ್ಕಳು ಕೂಡ ಸಂಚಾರಿ ನಿಯಮಗಳನ್ನು ಕಂಡು ಜಾಗೃತರಾಗುತ್ತಾರೆ. ಹೀಗಾಗಿಯೇ ಈ ಪಾರ್ಕ್​ ನಿರ್ಮಾಣ ಮಾಡಲಾಗಿದ್ದು, ಅದರ ಸದುಪಯೋಗ ಪಡೆದುಕೊಳ್ಳುವಂತೆ ಮಕ್ಕಳಿಗೆ ಎಸ್​​​ಪಿ ಮನವಿ ಮಾಡಿದರು.

ಟ್ರಾಫಿಕ್ ನಿಯಮಗಳನ್ನು ಗಾಳಿ ತೂರಿ ಬೇಕಾಬಿಟ್ಟಿ ವಾಹನ ಚಲಾಯಿಸುವವರಿಗೆ ಈ ಪಾರ್ಕ್​ ಒಂದು ಪಾಠ ಕಲಿಸಲಿದೆ. ಇನ್ಮುಂದೆ ರಸ್ತೆ ನಿಯಮಗಳನ್ನು ಹೇಗೆ ಪಾಲಿಸಬೇಕು ಎಂಬುದನ್ನು ತಿಳಿಯಲು ನೆರವಾಗಲಿದೆ. ಅದೇನೆ ಆಗಲಿ ಪ್ರಸ್ತುತ ದಿನಗಳಲ್ಲಿ ಟ್ರಾಫಿಕ್ ನಿಯಮಗಳ ಬಗ್ಗೆ ತಿಳಿಯಲು ಡ್ರೈವಿಗ್ ಕ್ಲಾಸ್‌ಗೆ ಹಣ ಕೊಟ್ಟು ಹೋಗ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಗಂಗೂಬಾಯಿ ಹಾನಗಲ್ ಪಾರ್ಕ್​ನಲ್ಲಿ ಸಂಚಾರಿ ನಿಯಮಗಳನ್ನು ಸೂಚಿಸುವ ಬೋರ್ಡ್​ಗಳು ಅಳವಡಿಕೆ ಮಾಡಿದ್ದು, ಪುಗಸಟ್ಟೆಯಾಗಿ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಈ ಸಂಚಾರಿ ನಿಯಮಗಳು ಇರುವ ಈ ಪಾರ್ಕ್​ ಜನರನ್ನು ಆಕರ್ಷಿಸಿ ತನ್ನತ್ತಾ ಸೆಳೆಯುತ್ತಿರುವುದಂತೂ ಸುಳ್ಳಲ್ಲ.

ಇದನ್ನೂ ಓದಿ :ಸಂಚಾರಿ ನಿಯಮ‌ ಉಲ್ಲಂಘನೆ:16 ಸಾವಿರ ದಂಡ ಕಟ್ಟಿದ ಬೈಕ್​ ಮಾಲೀಕ

Last Updated : Jan 12, 2023, 11:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.