ETV Bharat / state

ದಾವಣಗೆರೆ: ಶಾಸಕ ರೇಣುಕಾಚಾರ್ಯ ವಿರುದ್ದ ಜೀವ ಬೆದರಿಕೆ ದೂರು ಸಲ್ಲಿಕೆ - Karnataka Road Development Corporation Pvt

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ 22 ಕೋಟಿ ರೂ ವೆಚ್ಚದ ಸಿಸಿ ರಸ್ತೆ, ಡಿವೈಡರ್ ಬೀದಿ ದೀಪ ಅಳವಡಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ನಡೆದಿದೆ ಎಂದು ಭ್ರಷ್ಟಾಚಾರ ನಿರ್ಮೂಲನೆ ವೇದಿಕೆಯ ಪದಾಧಿಕಾರಿಗಳು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಶಾಸಕ ರೇಣುಕಾಚಾರ್ಯ ಹಾಗೂ ಹನುಮಂತಪ್ಪ ಸೊರಟೂರು
ಶಾಸಕ ರೇಣುಕಾಚಾರ್ಯ ಹಾಗೂ ಹನುಮಂತಪ್ಪ ಸೊರಟೂರು
author img

By

Published : Oct 27, 2022, 6:37 PM IST

ದಾವಣಗೆರೆ: ಹೊನ್ನಾಳಿ ಮತ ಕ್ಷೇತ್ರ ಒಂದು ಸಾಮ್ರಾಜ್ಯದಂತೆ ಆಗ್ಬಿಟ್ಟಿದೆ. ಈ ಸಾಮ್ರಾಜ್ಯದಲ್ಲಿ ಶಾಸಕ ರೇಣುಕಾಚಾರ್ಯರ ಅಂಧ ದರ್ಬಾರ್ ಮಿತಿಮೀರಿದೆ. ಸರ್ಕಾರದಿಂದ ಸಾವಿರಾರು ಕೋಟಿ ರೂ ಹಣ ತಂದು ಶಾಸಕ ಭ್ರಷ್ಟಾಚಾರ ಮಾಡಿದ್ದಾರೆ ಎಂದು ದೂರು ನೀಡಿದ ಯುವಕ ತನಗೆ ಜೀವ ಬೆದರಿಕೆ ಇದೆ ಎಂದು ಎಸ್ಪಿಗೆ ದೂರು ನೀಡಿದ್ದಾನೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ 22 ಕೋಟಿ ರೂ ವೆಚ್ಚದ ಸಿಸಿ ರಸ್ತೆ, ಡಿವೈಡರ್ ಬೀದಿ ದೀಪ ಅಳವಡಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ನಡೆದಿದೆ ಎಂದು ಭ್ರಷ್ಟಾಚಾರ ನಿರ್ಮೂಲನೆ ವೇದಿಕೆಯ ಪದಾಧಿಕಾರಿಗಳು 184 ಪುಟಗಳ ದೂರನ್ನು ಲೋಕಾಯುಕ್ತರಿಗೆ ಸಲ್ಲಿಸಿದ್ದರು. ಆದರೆ ಇದಕ್ಕೆ ಕೋಪಗೊಂಡ ಶಾಸಕ ರೇಣುಕಾಚಾರ್ಯ ಭ್ರಷ್ಟಾಚಾರ ನಿರ್ಮೂಲನೆ ವೇದಿಕೆಯ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಸೊರಟೂರು ಅವರಿಗೆ ಅವಾಜ್ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಹೊನ್ನಾಳಿಯಲ್ಲಿ ಮನೆಹಾನಿ ಪರಿಹಾರ ಧನ ನೀಡುವಲ್ಲಿ ಬಡವರಿಗೆ ಅನ್ಯಾಯ ಮಾಡಿ ಕರ್ತವ್ಯ ಲೋಪವೆಸಗಿರುವ ತಹಶೀಲ್ದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಅಹೋರಾತ್ರಿ ಧರಣಿ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.