ETV Bharat / state

ಪಿಎಫ್ಐ ಜೊತೆ ಲಿಂಕ್ ಹೊಂದಿರುವ ಶಂಕೆ: ಎನ್ಐಎ ಅಧಿಕಾರಿಗಳಿಗೆ ಸಿಗದ ದಾವಣಗೆರೆಯ ತಾಹೀರ್ ಹುಸೇನ್ - Tahir Hussain news

ರಾಷ್ಟ್ರೀಯ ತನಿಖಾ ದಳವು ದಾವಣಗೆರೆ ಮತ್ತು ಹರಿಹರದಲ್ಲಿ ಪಿಎಫ್ಐ ಕಚೇರಿಗಳ ಮೇಲೆ ದಾಳಿ ನಡೆಸಿ, ಮುಖಂಡರ ವಿಚಾರಣೆ ನಡೆಸಿದೆ. ಆದ್ರೆ ಈ ಸಂಘಟನೆ ಜೊತೆ ಲಿಂಕ್​ ಹೊಂದಿರುವ ಹರಿಹರದ ತಾಹೀರ್​ ಹುಸೇನ್​ ಮಾತ್ರ ಇನ್ನೂ ಎನ್​ಐಎ ಅಧಿಕಾರಿಗಳಿಗೆ ಸಿಕ್ಕಿಲ್ಲ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Tahir Hussain was not found to the NIA officials
ಎನ್ಐಎ ಅಧಿಕಾರಿಗಳಿಗೆ ಸಿಗದ ತಾಹೀರ್ ಹುಸೇನ್
author img

By

Published : Sep 27, 2022, 1:23 PM IST

ದಾವಣಗೆರೆ: ಎನ್ಐಎ ಅಧಿಕಾರಿಗಳು ದಾವಣಗೆರೆಯಲ್ಲಿ ದಾಳಿ ನಡೆಸಿ, ಪಿಎಫ್ಐ ಸಂಘಟನೆ ಮುಖಂಡರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದ್ರೆ ಈ ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ಜಿಲ್ಲೆಯ ಹರಿಹರದ ತಾಹೀರ್ ಹುಸೇನ್ ಎನ್ಐಎ ಅಧಿಕಾರಿಗಳಿಗೆ ಸಿಗದ ಹಿನ್ನೆಲೆ ಆತನಿಗಾಗಿ ಹುಡುಕಾಟ ಆರಂಭಿಸಲಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ ನಗರದ ಜೆಸಿ ಬಡಾವಣೆಯ ನಿವಾಸಿ ತಾಹೀರ್ ಹುಸೇನ್​ನನ್ನು ವಶಕ್ಕೆ ಪಡೆಯಲು, ಕಳೆದ ಒಂದು ವಾರದಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶಿವಮೊಗ್ಗ, ಉಡುಪಿ, ಬೆಂಗಳೂರು ಮೂರು ಜಿಲ್ಲೆಗಳಲ್ಲೂ ಪೊಲೀಸರು ಹುಡುಕಿದ್ದಾರೆ.

ಇದನ್ನೂ ಓದಿ: ದಾವಣಗೆರೆ, ಹರಿಹರದಲ್ಲೂ ಎನ್​ಐಎ ದಾಳಿ: ಇಬ್ಬರ ವಿಚಾರಣೆ

ಇನ್ನು, ತಾಹೀರ್ ಹುಸೇನ್ ವಿರುದ್ಧ 2013ರಲ್ಲಿ ಗೋಡೆ ಮೇಲೆ ಕೆಲ ಪೋಸ್ಟರ್ ಹಚ್ಚಿದ್ದಕ್ಕೆ ಪ್ರಕರಣ ಸಹ ದಾಖಲಾಗಿತ್ತು. ಈ ಪ್ರಕರಣದಲ್ಲಿ ಹರಿಹರದ ಪೊಲೀಸರು ತಾಹೀರ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇದೀಗ ಎನ್​ಐಎ ತಾಹೀರ್ ಹುಸೇನ್​ನನ್ನು ವಶಕ್ಕೆ ಪಡೆಯಲು ಹುಡುಕಾಟ ನಡೆಸುತ್ತಿದೆ. ಈತನನ್ನು ಹಿಡಿಯಲು ಪೊಲೀಸರು ತಂಡ ರಚನೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.