ETV Bharat / state

ಸ್ವಾಮಿ ವಿವೇಕಾನಂದರು ಮಹಾನ್ ಪ್ರೇರಕ ಶಕ್ತಿ...ಚಿಂತಕ ಚಕ್ರವರ್ತಿ ಸೂಲಿಬೆಲೆ - ಹರಿಹರದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಮಹಾನ್ ಪ್ರೇರಕ ಶಕ್ತಿ ಸ್ವಾಮಿ ವಿವೇಕಾನಂದರು ಎಂದು, ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಚಿಂತಕ ಚಕ್ರವರ್ತಿ ಸೂಲಿಬೆಲೆ
ಚಿಂತಕ ಚಕ್ರವರ್ತಿ ಸೂಲಿಬೆಲೆ
author img

By

Published : Jan 12, 2020, 8:22 PM IST

ಹರಿಹರ: ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಮಹಾನ್ ಪ್ರೇರಕ ಶಕ್ತಿ ಸ್ವಾಮಿ ವಿವೇಕಾನಂದರು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ನಗರದ ರಾಮಕೃಷ್ಣ ವಿವೇಕಾನಂದಾಶ್ರಮದ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ಇಂತಹ ಮಹಾ ಸಂತರ ಆದರ್ಶ ಮತ್ತು ಚಿಂತನೆಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸ್ವಾಮಿ ವಿವೇಕಾನಂದರು ನಮ್ಮೆಲ್ಲರಿಗೂ ಪ್ರೇರಣಾಶಕ್ತಿ. ಯುವ ಜನಾಂಗ ದಿನಕ್ಕೆ ಒಂದು ಬಾರಿ ವಿವೇಕಾನಂದರನ್ನು ನೆನಪಿಸಿಕೊಂಡರೆ ಸಾಕು, ಏನು ಬೇಕಾದರೂ ಸಾಧಿಸಬಹುದು ಎಂಬ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಎಂದರು. ಕಬ್ಬಿಣದಂತಹ ಮಾಂಸ, ಉಕ್ಕಿನಂತಹ ನರಮಂಡಲ, ಮಿಂಚಿನ ಬುದ್ಧಿ ಶಕ್ತಿ ಹಾಗೂ ಅಪಾರ ಅತ್ಮ ಸ್ಥೈರ್ಯದಿಂದ ಕೂಡಿರುವಂತ ವ್ಯಕ್ತಿಯೇ ನಿಜವಾದ ಯುವ ಶಕ್ತಿ ಎನ್ನುತ್ತಿದ್ದ ಅವರು, ಅಂತಹ 100 ಜನ ಯುವಕರಿದ್ದರೆ ದೇಶದ ಚಿತ್ರಣವನ್ನು ಬದಲಿಸುವ ವಿಶ್ವಾಸ ಹೊಂದಿದ್ದರು ಎಂದರು.

ಚಿಂತಕ ಚಕ್ರವರ್ತಿ ಸೂಲಿಬೆಲೆ

ದೇಶದ ಇಂದಿನ ಯುವ ಪೀಳಿಗೆ ಗಾಂಜಾ ಮತ್ತು ಅಫೀಮ್​ಗಿಂತ ಹೆಚ್ಚಿನ ಅಪಾಯಕಾರಿಯಾಗಿರುವ ಮೊಬೈಲ್ ಬಳಕೆಯಿಂದ, ತಮ್ಮ ಅಮೂಲ್ಯವಾದ ಚಿಂತನ ಶಕ್ತಿಯನ್ನು ಕಳೆದುಕೊಂಡು ಅವನತಿಯ ಹಾದಿಯತ್ತ ಸಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸ್ವಾತಂತ್ರ ಹೋರಾಟದಲ್ಲಿ ಯುವಕರು ಪಾಲ್ಗೊಳ್ಳಲು ವಿವೇಕಾನಂದರ ಪ್ರೇರಣೆಯೇ ಮೂಲ ಕಾರಣ. ಧರ್ಮ ಪಾಲನೆ ಎಂದರೆ ಏಕಾಂತದಲ್ಲಿ ಕುಳಿತು ಮಾಡುವ ತಪಸ್ಸಲ್ಲ. ಜನರ ನಡುವೆ ಇದ್ದು ಜನರಿಗಾಗಿ ಸಮಸ್ತ ಶಕ್ತಿಯನ್ನು ವಿನಿಯೋಗಿಸುವುದು ಎಂದು ವಿವೇಕಾನಂದರು ಸಾರಿದ್ದಾರೆ ಎಂದು ಹೇಳಿದರು. ಜಗತ್ತಿಗೆ ಹಿಂದೂ ಧರ್ಮದ ಸಾರವನ್ನು ಸಾರಿದ ಅವರಿಗೆ, ಭಾರತವನ್ನು ವಿಶ್ವಗುರುವನ್ನಾಗಿ ಮಾಡಿದ ಕೀರ್ತಿ ಸಲ್ಲುತ್ತದೆ ಎಂದರು.

ಇನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ವಿದ್ಯಾರ್ಥಿ ತಮ್ಮ ಜೀವನದಲ್ಲಿ ವಿವೇಕಾನಂದ ಅವರಂತಹ ಆದರ್ಶ ವ್ಯಕ್ತಿಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ, ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಕಿವಿ ಮಾತು ಹೇಳಿದರು. ಸಭೆಯಲ್ಲಿ ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ಶಾರದೇಶಾನಂದಜೀ ಮಹಾರಾಜ್, ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಪೌರಯುಕ್ತೆ ಎಸ್.ಲಕ್ಷ್ಮೀ, ಮಾಜಿ ಶಾಸಕ ಬಿ.ಪಿ. ಹರೀಶ್, ಸಿಪಿಐ ಶಿವಪ್ರಸಾದ್ ಎಂ, ಡಾ. ಶಾರಾದಾದೇವಿ, ಡಾ. ರಾಮಪ್ರಸಾದ, ತುಕಾಮಣಿ ಸಾ. ಬೂತೆ, ಡಾ. ಖಮೀತ್ಕರ್ ಭಾಗಿಯಾಗಿದ್ದರು.

Intro:ವಿದ್ಯಾರ್ಥಿಗಳಿಗೆ ಚಕ್ರವರ್ತಿ ಸೂಲಿಬೆಲೆ ಕಿವಿ ಮಾತು

Intro :
ಹರಿಹರ: ಹಿಂದೂ ಧರ್ಮದ ಅನನ್ಯತೆ ಹಾಗೂ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಮಹಾನ್ ಪ್ರೇರಕ ಶಕ್ತಿ ವೀರ ಸನ್ಯಾಸಿ ಮತ್ತು ಪ್ರಸಿದ್ದ ತತ್ವಜ್ಞಾನಿ ಶ್ರೀ ಸ್ವಾಮಿ ವಿವೇಕಾನಂದರು ಎಂದು ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ಪಟ್ಟರು.

Body:
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಆವರಣದಲ್ಲಿ ಭಾನುವಾರ ನಡೆದ ಸ್ವಾಮಿ ವಿವೇಕಾನಂದರ ೧೫೭ನೇ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ರಾಷ್ರ್ಟೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು ಇಂತಹ ಮಹಾ ಸಂತರ ಆದರ್ಶ ಮತ್ತು ಚಿಂತನೆಗಳನ್ನು ತಮ್ಮ ಜೀವನದಲ್ಲಿ ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವಕರ ಅದರ್ಶ ಹಿಂದು ಸಮಾಜದ ಅಂತ:ಶಕ್ತಿ ಭಾರತದ ಆಧ್ಯಾತ್ಮ , ಸಾಂಸ್ಕೃತಿಕ ರಾಯಬಾರಿ ಹಾಗೂ ವಿಶ್ವ ವಿಜೇತ ಸನ್ಯಾಸಿಯಾದ ಶ್ರೀ ಸ್ವಾಮಿ ವಿವೇಕಾನಂದರು ನಮ್ಮೆಲ್ಲರಿಗೂ ಪ್ರೇರಣಾಶಕ್ತಿ ಎಂದ ಅವರು ಇಂದಿನ ಯುವ ಜನಾಂಗ ದಿನಕ್ಕೆ ಒಂದು ಬಾರಿ ವಿವೇಕಾನಂದರನ್ನು ನೆನಪಿಸಿಕೊಂಡರೆ ಸಾಕು ಅವರಲ್ಲಿ ನಾವು ಎನು ಬೇಕಾದರೂ ಸಾಧಿಸ ಬಹುದು ಎಂಬ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಎಂದರು.
ಕಬ್ಬಿಣ ತರಹ ಮಾಂಸ ಖಂಡ,ಉಕ್ಕಿನಂತಹ ನರಮಂಡಲ, ಮಿಂಚಿನ ಬುದ್ದಿ ಶಕ್ತಿ ಹಾಗೂ ಅಪಾರ ಅತ್ಮ ಸ್ಥೈರ್ಯದಿಂದ ಕೂಡಿರುವಂತ ವ್ಯಕ್ತಿಯೇ ನಿಜವಾದ ಯುವ ಶಕ್ತಿ ಎನ್ನುತ್ತಿದ್ದ ಅವರು ಇಂತಹ 100 ಜನ ಯುವಕರು ಇದ್ದರೆ ದೇಶದ ಚಿತ್ರಣವನ್ನು ಬದಲಿಸುವ ವಿಶ್ವಾಸ ಹೊಂದಿದ್ದರು.ಅದರೆ ದೇಶದ ಇಂದಿನ ಯುವ ಪೀಳಿಗೆ ಗಾಂಜಾ ಮತ್ತು ಅಪೀಮ್ ಕ್ಕಿಂತ ಹೆಚ್ಚಿನ ಅಪಾಯಕಾರಿಯಾಗಿರುವ ಮೊಬೈಲ್ ಬಳಕೆಯಿಂದ ತಮ್ಮ ಅಮೂಲ್ಯವಾದ ಚಿಂತನ ಶಕ್ತಿಯನ್ನು ಕಳೆದು ಕೊಂಡು ಅವನತಿಯ ಹಾದಿಯತ್ತ ಸಾಗುತ್ತಿದ್ದಾರೆ ಎಂದು ಖೇಧ ವ್ಯಕ್ತ ಪಡಿಸಿದರು.
ಸ್ವತಂತ್ರ ಹೋರಾಟದಲ್ಲಿ ಯುವಕರು ಪಾಲ್ಗೋಳ್ಳಲು ವಿವೇಕಾ ನಂದರ ಪ್ರೇರಣೆಯೇ ಮೂಲ ಕಾರಣ ಎಂದ ಅವರು ಸರ್ಕಾರವು ಮಹಾನೀಯರ ಜಯಂತಿಗಳಿಗೆ ರಜಾ ನೀಡದೆ ಅವರು ಸಮಾಜಕ್ಕೆ ನೀಡಿರುವ ಕೊಡುಗೆಯ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸುವುದು ಇಂದಿನ ಜನಾಂಗಕ್ಕೆ ಅವಶ್ಯಕತೆಯಿದೆ ಎಂದು ಹೇಳಿದರು.
ಸನ್ಯಾಸ ಧರ್ಮದ ವ್ಯಾಪ್ತಿಯನ್ನು ವಿಶೇಷವಾಗಿ ವ್ಯಾಖ್ಯಾನಿಸಿದ ಸ್ವಾಮಿ ವಿವೇಕಾನಂದರು ಧರ್ಮ ಪಾಲನೆ ಎಂದರೆ ಏಕಾಂತದಲ್ಲಿ ಕುಳಿತು ಮಾಡುವ ತಪಸ್ಸಲ್ಲ, ಜನರ ನಡುವೆ ಇದ್ದು ಕೊಂಡು ಜನರಿಗಾಗಿ ಸಮಸ್ತ ಶಕ್ತಿಯನ್ನು ವಿನಿಯೊಗಿಸುವುದು ಎಂದು ಸಾರಿರುವುದನ್ನು ಸ್ಮರಿಸಿದರು.ಜಗತ್ತಿಗೆ ಹಿಂದೂ ಧರ್ಮದ ಸಾರವನ್ನು ಸಾರಿದ ಅವರು ಭಾರತವನ್ನು ವಿಶ್ವಗುರುವನ್ನಾಗಿ ಮಾಡಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ ಸಂತರ ಆದರ್ಶಗಳನ್ನು ಕೇವಲ ಮಾತನಾಡದೆ ನಮ್ಮ ನಿತ್ಯಾ ಜೀವನದಲ್ಲಿ ಅಳವಡಿಸಿ ಕೊಂಡಾಗ ಮಾತ್ರ ಅಂತಹವರಿಗೆ ಸಲ್ಲಿಸುವ ನಿಜವಾದ ಗೌರವ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಇಂತಹ ಅದರ್ಶ ವ್ಯಕ್ತಿಗಳ ಬಗ್ಗೆ ತಿಳಿದು ಕೊಂಡಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಲು ಸಾದ್ಯ ಎಂದು ಕಿವಿ ಮಾತು ಹೇಳಿದರು.

Conclusion :
         ಸಭೆಯಲ್ಲಿ ರಾಮಕೃಷ್ಣ ವಿವೇಕಾನಂದ ಅಶ್ರಮದ ಶ್ರೀ ಶಾರದೇಶಾನಂದಜೀ ಮಹಾರಾಜ್, ತಹಶಿಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಪೌರಯುಕ್ತೆ ಎಸ್.ಲಕ್ಷ್ಮೀ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್, ಸಿಪಿಐ ಶಿವಪ್ರಸಾದ್ ಎಂ, ಡಾ.ಶಾರಾದ ದೇವಿ, ಡಾ.ರಾಮಪ್ರಸಾದ, ತುಕಾಮಣಿ ಸಾ.ಬೂತೆ, ಡಾ. ಖಮೀತ್ಕರ್ ಹಾಗೂ ವಿವಿದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.Body:ವಿದ್ಯಾರ್ಥಿಗಳಿಗೆ ಚಕ್ರವರ್ತಿ ಸೂಲಿಬೆಲೆ ಕಿವಿ ಮಾತು

Intro :
ಹರಿಹರ: ಹಿಂದೂ ಧರ್ಮದ ಅನನ್ಯತೆ ಹಾಗೂ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ಮಹಾನ್ ಪ್ರೇರಕ ಶಕ್ತಿ ವೀರ ಸನ್ಯಾಸಿ ಮತ್ತು ಪ್ರಸಿದ್ದ ತತ್ವಜ್ಞಾನಿ ಶ್ರೀ ಸ್ವಾಮಿ ವಿವೇಕಾನಂದರು ಎಂದು ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ಪಟ್ಟರು.

Body:
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಆವರಣದಲ್ಲಿ ಭಾನುವಾರ ನಡೆದ ಸ್ವಾಮಿ ವಿವೇಕಾನಂದರ ೧೫೭ನೇ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ರಾಷ್ರ್ಟೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು ಇಂತಹ ಮಹಾ ಸಂತರ ಆದರ್ಶ ಮತ್ತು ಚಿಂತನೆಗಳನ್ನು ತಮ್ಮ ಜೀವನದಲ್ಲಿ ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವಕರ ಅದರ್ಶ ಹಿಂದು ಸಮಾಜದ ಅಂತ:ಶಕ್ತಿ ಭಾರತದ ಆಧ್ಯಾತ್ಮ , ಸಾಂಸ್ಕೃತಿಕ ರಾಯಬಾರಿ ಹಾಗೂ ವಿಶ್ವ ವಿಜೇತ ಸನ್ಯಾಸಿಯಾದ ಶ್ರೀ ಸ್ವಾಮಿ ವಿವೇಕಾನಂದರು ನಮ್ಮೆಲ್ಲರಿಗೂ ಪ್ರೇರಣಾಶಕ್ತಿ ಎಂದ ಅವರು ಇಂದಿನ ಯುವ ಜನಾಂಗ ದಿನಕ್ಕೆ ಒಂದು ಬಾರಿ ವಿವೇಕಾನಂದರನ್ನು ನೆನಪಿಸಿಕೊಂಡರೆ ಸಾಕು ಅವರಲ್ಲಿ ನಾವು ಎನು ಬೇಕಾದರೂ ಸಾಧಿಸ ಬಹುದು ಎಂಬ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಎಂದರು.
ಕಬ್ಬಿಣ ತರಹ ಮಾಂಸ ಖಂಡ,ಉಕ್ಕಿನಂತಹ ನರಮಂಡಲ, ಮಿಂಚಿನ ಬುದ್ದಿ ಶಕ್ತಿ ಹಾಗೂ ಅಪಾರ ಅತ್ಮ ಸ್ಥೈರ್ಯದಿಂದ ಕೂಡಿರುವಂತ ವ್ಯಕ್ತಿಯೇ ನಿಜವಾದ ಯುವ ಶಕ್ತಿ ಎನ್ನುತ್ತಿದ್ದ ಅವರು ಇಂತಹ 100 ಜನ ಯುವಕರು ಇದ್ದರೆ ದೇಶದ ಚಿತ್ರಣವನ್ನು ಬದಲಿಸುವ ವಿಶ್ವಾಸ ಹೊಂದಿದ್ದರು.ಅದರೆ ದೇಶದ ಇಂದಿನ ಯುವ ಪೀಳಿಗೆ ಗಾಂಜಾ ಮತ್ತು ಅಪೀಮ್ ಕ್ಕಿಂತ ಹೆಚ್ಚಿನ ಅಪಾಯಕಾರಿಯಾಗಿರುವ ಮೊಬೈಲ್ ಬಳಕೆಯಿಂದ ತಮ್ಮ ಅಮೂಲ್ಯವಾದ ಚಿಂತನ ಶಕ್ತಿಯನ್ನು ಕಳೆದು ಕೊಂಡು ಅವನತಿಯ ಹಾದಿಯತ್ತ ಸಾಗುತ್ತಿದ್ದಾರೆ ಎಂದು ಖೇಧ ವ್ಯಕ್ತ ಪಡಿಸಿದರು.
ಸ್ವತಂತ್ರ ಹೋರಾಟದಲ್ಲಿ ಯುವಕರು ಪಾಲ್ಗೋಳ್ಳಲು ವಿವೇಕಾ ನಂದರ ಪ್ರೇರಣೆಯೇ ಮೂಲ ಕಾರಣ ಎಂದ ಅವರು ಸರ್ಕಾರವು ಮಹಾನೀಯರ ಜಯಂತಿಗಳಿಗೆ ರಜಾ ನೀಡದೆ ಅವರು ಸಮಾಜಕ್ಕೆ ನೀಡಿರುವ ಕೊಡುಗೆಯ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸುವುದು ಇಂದಿನ ಜನಾಂಗಕ್ಕೆ ಅವಶ್ಯಕತೆಯಿದೆ ಎಂದು ಹೇಳಿದರು.
ಸನ್ಯಾಸ ಧರ್ಮದ ವ್ಯಾಪ್ತಿಯನ್ನು ವಿಶೇಷವಾಗಿ ವ್ಯಾಖ್ಯಾನಿಸಿದ ಸ್ವಾಮಿ ವಿವೇಕಾನಂದರು ಧರ್ಮ ಪಾಲನೆ ಎಂದರೆ ಏಕಾಂತದಲ್ಲಿ ಕುಳಿತು ಮಾಡುವ ತಪಸ್ಸಲ್ಲ, ಜನರ ನಡುವೆ ಇದ್ದು ಕೊಂಡು ಜನರಿಗಾಗಿ ಸಮಸ್ತ ಶಕ್ತಿಯನ್ನು ವಿನಿಯೊಗಿಸುವುದು ಎಂದು ಸಾರಿರುವುದನ್ನು ಸ್ಮರಿಸಿದರು.ಜಗತ್ತಿಗೆ ಹಿಂದೂ ಧರ್ಮದ ಸಾರವನ್ನು ಸಾರಿದ ಅವರು ಭಾರತವನ್ನು ವಿಶ್ವಗುರುವನ್ನಾಗಿ ಮಾಡಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ ಸಂತರ ಆದರ್ಶಗಳನ್ನು ಕೇವಲ ಮಾತನಾಡದೆ ನಮ್ಮ ನಿತ್ಯಾ ಜೀವನದಲ್ಲಿ ಅಳವಡಿಸಿ ಕೊಂಡಾಗ ಮಾತ್ರ ಅಂತಹವರಿಗೆ ಸಲ್ಲಿಸುವ ನಿಜವಾದ ಗೌರವ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಇಂತಹ ಅದರ್ಶ ವ್ಯಕ್ತಿಗಳ ಬಗ್ಗೆ ತಿಳಿದು ಕೊಂಡಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಲು ಸಾದ್ಯ ಎಂದು ಕಿವಿ ಮಾತು ಹೇಳಿದರು.

Conclusion :
         ಸಭೆಯಲ್ಲಿ ರಾಮಕೃಷ್ಣ ವಿವೇಕಾನಂದ ಅಶ್ರಮದ ಶ್ರೀ ಶಾರದೇಶಾನಂದಜೀ ಮಹಾರಾಜ್, ತಹಶಿಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಪೌರಯುಕ್ತೆ ಎಸ್.ಲಕ್ಷ್ಮೀ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್, ಸಿಪಿಐ ಶಿವಪ್ರಸಾದ್ ಎಂ, ಡಾ.ಶಾರಾದ ದೇವಿ, ಡಾ.ರಾಮಪ್ರಸಾದ, ತುಕಾಮಣಿ ಸಾ.ಬೂತೆ, ಡಾ. ಖಮೀತ್ಕರ್ ಹಾಗೂ ವಿವಿದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.