ETV Bharat / state

ಪೊಲೀಸ್​ ವಶದಲ್ಲಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು : ದಾವಣಗೆರೆ ಎಸ್​ಪಿ ಹೇಳಿದ್ದೇನು?

ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆಯ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

suspicious-death-of-a-person-in-mayakonda
ಅನುಮಾನಾಸ್ಪದ ಸಾವು
author img

By

Published : Oct 7, 2020, 3:57 AM IST

ದಾವಣಗೆರೆ: ಪೊಲೀಸರ ವಶದಲ್ಲಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಾವಣಗೆರೆ ತಾಲೂಕಿನ ಮಾಯಕೊಂಡ ಸಮೀಪದ ವಿಟ್ಲಾಪುರ ನಿವಾಸಿ ಮರಳಸಿದ್ದಪ್ಪ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ವ್ಯಕ್ತಿ.

ಘಟನೆ ಹಿನ್ನೆಲೆ:

ಮರಳಸಿದ್ದಪ್ಪ 19 ವರ್ಷದ ಯುವತಿಯನ್ನು ಪ್ರೀತಿಸಿ ಎರಡನೇ ಮದುವೆಯಾಗಿದ್ದ. ಈ ಬಗ್ಗೆ ಕಳೆದ ಅಕ್ಟೋಬರ್ 3ರಂದು ಆತನ ಮೊದಲ ಪತ್ನಿ ವೃಂದಮ್ಮ ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು‌. ನನ್ನ ಪತಿ ಮರಳಸಿದ್ದಪ್ಪ ಯುವತಿಯೋರ್ವಳ ಜೊತೆ ಓಡಿ ಹೋಗಿ ಮದುವೆಯಾಗಿದ್ದು, ಹುಡುಕಿಕೊಡಿ.‌ ನ್ಯಾಯ ಕೊಡಿಸಿ ಎಂದು ದೂರಿನಲ್ಲಿ ಮನವಿ‌ ಮಾಡಿದ್ದರು.

ವ್ಯಕ್ತಿ ಅನುಮಾನಾಸ್ಪದ ಸಾವು

ಈ ಹಿನ್ನೆಲೆಯಲ್ಲಿ ಸೋಮವಾರ ಮರಳಸಿದ್ದಪ್ಪನನ್ನು ಪೊಲೀಸರು ಪತ್ತೆ ಹಚ್ಚಿ ಕರೆ ತಂದಿದ್ದರು. ರಾತ್ರಿ 12 ಗಂಟೆಗೆ ಊಟವನ್ನು‌ ಕೊಟ್ಟಿದ್ದರು‌. ಬಳಿಕ ಸಬ್ ಇನ್ಸ್​ಪೆಕ್ಟರ್ ಗಸ್ತಿಗೆ ತೆರಳಿದ್ದರು. ಆದರೆ ಬೆಳಗ್ಗೆ ಪೊಲೀಸ್ ಠಾಣೆ ಸಮೀಪದಲ್ಲಿ ಆತನ ಶವ ಪತ್ತೆಯಾಗಿದೆ.‌ ಇದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪೊಲೀಸರು ಥಳಿಸಿದ ಪರಿಣಾಮ ಮರಳಸಿದ್ದಪ್ಪ ಮೃತಪಟ್ಟಿದ್ದು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಒತ್ತಾಯಿಸಿ ಮೃತನ ಸಂಬಂಧಿಕರು ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಘಟನೆಯ ತೀವ್ರತೆ ಅರಿತ ಎಸ್ಪಿ ಹನುಮಂತರಾಯ ಸ್ಥಳಕ್ಕೆ ಭೇಟಿ ನೀಡಿ ಆಕ್ರೋಶಗೊಂಡವರ ಮನವೊಲಿಸುವಲ್ಲಿ ಯಶಸ್ವಿಯಾದರು. ಘಟನೆಯ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುವುದು. ಠಾಣೆಯಲ್ಲಿ ಸಿಸಿಟಿವಿ ಇದೆ. ಅದನ್ನು ಪರಿಶೀಲಿಸುತ್ತೇವೆ. ಈಗ ಮೃತದೇಹವನ್ನು ದಾವಣಗೆರೆ ಸಿಜೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಎಫ್‌ಎಸ್​​ಎಲ್ ತಜ್ಞರ ವೈದ್ಯಕೀಯ ವರದಿಗೆ ಕಳುಹಿಸಿಕೊಡುತ್ತೇವೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ವಿಧಿಸಲಾಗುವುದು ಎಂದು ಎಸ್ಪಿ ಹನುಮಂತರಾಯ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.