ETV Bharat / state

ಮನೆ ಮನೆಗೆ ತೆರಳಿ ಪರಿಸರ ಪ್ರೇಮಿ ಗಣೇಶ ಮೂರ್ತಿ ನೀಡಿ ವಿದ್ಯಾರ್ಥಿಗಳಿಂದ ಜಾಗೃತಿ - ಜಾಗೃತಿ ಮೂಡಿಸುತ್ತಿರುವ ದಾವಣಗೆರೆ ವಿದ್ಯಾರ್ಥಿಗಳು

ಪಿಒಪಿ ಅಥವಾ ಇತರೆ ಹಾನಿಕಾರಕ ಬಣ್ಣ ಮಿಶ್ರಿತ ಗಣಪನ ಮೂರ್ತಿ ಪ್ರತಿಷ್ಠಾಪಿಸುವ ಬದಲು ಪರಿಸರ ಪ್ರೇಮಿ ಗಣಪನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಎಂದು ದಾವಣಗೆರೆ ನಗರದ ಮಕ್ಕಳು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.

Students Creating Awareness
ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿರುವ ವಿದ್ಯಾರ್ಥಿನಿ
author img

By

Published : Aug 22, 2020, 1:56 PM IST

ದಾವಣಗೆರೆ: ಎಲ್ಲೆಡೆ ಗಣೇಶೋತ್ಸವ ಹಬ್ಬದ ಸಂಭ್ರಮ ಮನೆ ಮಾಡಿದ್ದು, ದೊಡ್ಡ ದೊಡ್ಡ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ನಿಷೇಧ ಹೇರಲಾಗಿದೆ. ಈ ಹಿನ್ನೆಲೆ ಮನೆಯಲ್ಲೇ ಗಣಪನ ಮೂರ್ತಿ ಇಡಲಾಗುತ್ತಿದ್ದು, ಪರಿಸರ ಸ್ನೇಹಿ ಗಣಪನ ಮೂರ್ತಿ ಕೂರಿಸುವತ್ತ ಜನರ ಚಿತ್ತ ನೆಟ್ಟಿದೆ. ಇದರ ಬೆನ್ನಲ್ಲೇ ನಗರದ ಮಕ್ಕಳು ಪರಿಸರಕ್ಕೆ ಮಾರಕವಾದ ವಿನಾಯಕನ ಬದಲಾಗಿ ಅರಿಶಿಣ, ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸುವಂತೆ ಜಾಗೃತಿ ಮೂಡಿಸುವ ಕಾರ್ಯ ನಡೆಸಿದ್ದಾರೆ.

ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿರುವ ವಿದ್ಯಾರ್ಥಿನಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆಯಾದ ಬನ್ನಿ, ಬುಲ್ ಬುಲ್, ಗೈಡ್ಸ್ ರೋವರ್ಸ್ ಹಾಗೂ ರೇಂಜರ್ಸ್​ನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾವಣಗೆರೆ ಜನರಲ್ಲಿ ಪರಿಸರ ಸ್ನೇಹಿ ಗಣಪನ ಬಗ್ಗೆ ಮಾಹಿತಿ ನೀಡುವ ಜೊತೆಗೆ ಹಬ್ಬದ ಶುಭಾಶಯ ಕೋರುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿಯೇ ಮಣ್ಣಿನ ಗಣಪನನ್ನು ತಯಾರು ಮಾಡಿ ಅರಶಿಣ ಲೇಪನ ಬಳಿದು ಮನೆ ಮನೆಗೆ ತೆರಳಿ ಮೂರ್ತಿಗಳನ್ನು ಉಚಿತವಾಗಿ ವಿತರಿಸುವ ಮೂಲಕ ವಿನೂತನವಾಗಿ ಹಬ್ಬ ಆಚರಿಸುತ್ತಿರುವುದು ವಿಶೇಷವಾಗಿದೆ.

ಈ ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪರಿಸರಕ್ಕೆ ಮಾರಕವಾದ ಗಣಪನಿಗೆ ಇತಿಶ್ರೀ ಹಾಡಿ ಪರಿಸರ ಸ್ನೇಹಿ ಮೂರ್ತಿಗಳನ್ನು ರಚಿಸುವ ಕುರಿತಂತೆ ಮಕ್ಕಳಿಗೆ ತರಬೇತಿ ನೀಡಲಾಗಿತ್ತು. ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಮಕ್ಕಳಿಗೆ ವೆಬಿನಾರ್, ಜೂಮ್ ಆ್ಯಪ್ ಮೂಲಕ ಕಾರ್ಯಾಗಾರ ನಡೆಸಲಾಗಿತ್ತು. ಜಿಲ್ಲೆಯ ವಿವಿಧ ತಾಲೂಕುಗಳ ಸಾವಿರಾರು ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದು ಮತ್ತೊಂದು ವಿಶೇಷ ಸಂಗತಿಯಾಗಿದೆ.

ಪಿಒಪಿ ಹಾಗೂ ಇತರೆ ರಾಸಾಯನಿಕಯುಕ್ತ ಗಣಪನ ವಿಗ್ರಹದ ಬದಲಾಗಿ ಅರಿಶಿಣ, ಮೈದಾ, ಗೋಧಿ ಹಿಟ್ಟಿನಿಂದ ಗಣಪನ ಮೂರ್ತಿಯನ್ನು ಮಕ್ಕಳೇ ಸಿದ್ಧಪಡಿಸಿದ್ದಾರೆ. ಮನೆ ಮನೆಗೆ ತೆರಳಿ ಈ ಮೂರ್ತಿಗಳನ್ನು ಉಚಿತವಾಗಿ ನೀಡುವ ಜೊತೆಗೆ ಇದರ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​​ಲೋಡ್ ಮಾಡುವ ಮೂಲಕ ಜಾಗೃತಿ ಮುಂದುವರೆಸಿದ್ದಾರೆ.

ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿನೂತನ ಪ್ರಯತ್ನ ಯಶಸ್ವಿಯಾಗಿದೆ ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಚಿಗಟೇರಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.