ETV Bharat / state

ಸಾಹಿತಿಗಳಿಗೆ ಬೆದರಿಕೆ ಪತ್ರ ಪ್ರಕರಣ: ಆರೋಪಿ ಶಿವಾಜಿ ರಾವ್ ಜಾಧವ್ ಮನೆಯಲ್ಲಿ ಸಿಸಿಬಿ ಮಹಜರು

author img

By ETV Bharat Karnataka Team

Published : Sep 30, 2023, 5:43 PM IST

Updated : Sep 30, 2023, 8:28 PM IST

ಸಾಹಿತಿಗಳಿಗೆ ಜೀವ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದ ಪ್ರಕರಣದ ಬಂಧಿತ ಆರೋಪಿ ಮನೆ ಮತ್ತು ಆತನಿಗೆ ಸಂಬಂಧಿಸಿದ ಇತರ ಸ್ಥಳಗಳನ್ನು ಸಿಸಿಬಿ ಪೊಲೀಸರು ಮಹಜರು ಮಾಡಿದರು.

spot-inspection-in-house-of-threat-letter-case-accused-by-ccb-in-davanagere
ಸಾಹಿತಿಗಳಿಗೆ ಬೆದರಿಕೆ ಪತ್ರ ಪ್ರಕರಣ: ಆರೋಪಿ ಶಿವಾಜಿ ರಾವ್ ಜಾಧವ್ ಮನೆಯಲ್ಲಿ ಸಿಸಿಬಿ ಮಹಜರು

ಸಾಹಿತಿಗಳಿಗೆ ಬೆದರಿಕೆ ಪತ್ರ ಪ್ರಕರಣ ಆರೋಪಿ ಮನೆಯಲ್ಲಿ ಸಿಸಿಬಿ ಮಹಜರು

ದಾವಣಗೆರೆ: ಸಾಹಿತಿಗಳಿಗೆ ಎರಡು ವರ್ಷಗಳಿಂದ ಜೀವ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದ ಎಂಬ ಆರೋಪ ಎದುರಿಸುತ್ತಿರುವ ದಾವಣಗೆರೆಯ ಶಿವಾಜಿ ರಾವ್ ಜಾಧವ್ ಬಂಧನವಾಗಿದೆ. ಸಿಸಿಬಿ ಪೊಲೀಸರು ದಾವಣಗೆರೆ ನಗರದ ಈಡ್ಲ್ಯೂಎಸ್ ಕಾಲೋನಿಯ ಆರೋಪಿಯ ನಿವಾಸದಲ್ಲಿಂದು ಮಹಜರು ಮಾಡಿದರು. ಎರಡು ಕಾರುಗಳಲ್ಲಿ ಆಗಮಿಸಿದ ಸಿಸಿಬಿ ಅಧಿಕಾರಿಗಳು ನಾಲ್ಕು ಗಂಟೆಗೂ ಹೆಚ್ಚು ಕಾಲ ಆರೋಪಿ ಶಿವಾಜಿ ರಾವ್ ಜಾಧವ್ ಮನೆಯಲ್ಲಿ ಮಹಜರು ಮಾಡಿ ಮಾಹಿತಿ ಕಲೆ ಹಾಕಿ ಆರೋಪಿಗೆ ಸೇರಿದ ಪೆನ್ನು, ಡೈರಿ ಕೆಲ ಪುಸ್ತಕಗಳನ್ನು ವಶಕ್ಕೆ ಪಡೆದರು.

ಇನ್ನು ಆರೋಪಿ ಕುಟುಂಬಸ್ಥರಿಂದಲೂ ಮಾಹಿತಿ ಕಲೆ ಹಾಕಿರುವ ಸಿಸಿಬಿ ಪೊಲೀಸರು ಪತ್ರ ಬರೆಯಲು ಬಳಸುತ್ತಿದ್ದ ಸ್ಥಳ, ಮನೆಯ ಮಹಡಿ, ಹಾಗೂ ಆತನ ಬೆಡ್ ರೂಂ ಹೀಗೆ ಸಾಕಷ್ಟು ಕಡೆ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದರು. ಈ ವೇಳೆ, ಆರೋಪಿಯ ತಾಯಿ ಹಾಗೂ ಸಹೋದರ ಕೂಡ ಹಾಜರಿದ್ದರು. ಇನ್ನು ಆರೋಪಿ ಕೆಲಸ ಮಾಡುತ್ತಿದ್ದ ನಗರದ ಶಿವಪ್ಪ ವೃತ್ತದ ಬಳಿ ಇರುವ ರಾಜು ಪ್ರಿಂಟರ್ಸ್ ಹಾಗೂ ಪತ್ರ ಬರೆಯಲು ಪೆನ್ನು, ಪೇಪರ್ ಹಾಗೂ ಕವರ್ ಖರೀದಿ ಮಾಡಿದ್ದಾ ಸುರ್ ಸಾ ಪೇಪರ್ ಎಂಬ ಅಂಗಡಿಯಲ್ಲಿ ಕೂಡ ಮಹಜರು ಮಾಡಿದರು.

ಬಳಿಕ ತೆರಳಿ ಪತ್ರ ಬರೆಯುತ್ತಿದ್ದ ಸ್ಥಳವಾದ ಹೈಸ್ಕೂಲ್ ಮೈದಾನದ ಬಳಿ ಇರುವ ಜಿಲ್ಲಾ ಲೈಬ್ರರಿಯಲ್ಲೂ ಮಹಜರು ಮಾಡಿ ಮಹಿತಿ ಕಲೆ ಹಾಕಿದರು. ಇನ್ನು ಎಲ್ಲೆಲ್ಲಿ ಮಹಜರು ಮಾಡಿದ್ದಾರೋ ಅಲ್ಲಿಯವರ ದೂರವಾಣಿ ಸಂಖ್ಯೆ ಪಡೆದು ವಿಚಾರಣೆಗೆ ಹಾಜರ್ ಆಗುವಂತೆ ಹೇಳಿದ್ದಾರೆಂದು ಸುರ್ ಸಾ ಪೇಪರ್ ಅಂಗಡಿಯ ಮಾಲೀಕ ಮಹಜರ್ ಬಳಿಕ ಮಾಹಿತಿ ನೀಡಿದರು.

ಇದನ್ನೂ ಓದಿ: ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ: ಸಿಎಂ ಸಿದ್ದರಾಮಯ್ಯ

ಬಂಧಿತನ ಸಹೋದರ ಹೇಳಿದ್ದೇನು?: ಈ ವಿಚಾರವಾಗಿ ಬಂಧಿತ ಶಿವಾಜಿ ರಾವ್ ಅವರ ಸಹೋದರ ಗುರುರಾಘವೇಂದ್ರ ಜಾಧವ್ ದಾವಣಗೆರೆಯಲ್ಲಿ ಮಾತನಾಡಿ,​ ಸಹೋದರನ ಬಂಧನದ ಬಗ್ಗೆ ಪೊಲೀಸರು ಮಾಹಿತಿ‌ ನೀಡಿದಾಗ ಮಾತ್ರ ನಮಗೆ ಗೊತ್ತಾಗಿದೆ. ಆತನಿಗೆ ಹಿಂದುತ್ವದ ಬಗ್ಗೆ ಹೆಚ್ಚು ಒಲವು ಇತ್ತು. ಜೊತೆಗೆ ಶಿವಮೊಗ್ಗದಲ್ಲಿ ನಡೆಯುವ ಹಿಂದುತ್ವದ ಕಾರ್ಯಕ್ರಮಕ್ಕೂ ಹೋಗುತ್ತಿದ್ದ. ಆದರೆ, ಸಾಹಿತಿಗಳಿಗೆ ಜೀವ ಬೇದರಿಕೆ ಪತ್ರ ಬರೆದಿದ್ದಾರೆ ಅನ್ನೋದನ್ನು ಕೇಳಿ ನಮಗೆ ಶಾಕ್ ಆಗಿದೆ. ಶಿವಾಜಿ ರಾವ್ ಪ್ರಿಂಟಿಂಗ್ ಪ್ರೆಸ್​ನಲ್ಲಿ‌ ಕೆಲಸ ಮಾಡುತ್ತಿದ್ದ. ಬೆಳಗ್ಗೆ ಹೋದರೆ, ರಾತ್ರಿ ಹತ್ತು ಗಂಟೆಗೆ ಮನೆಗೆ ಬರುತ್ತಿದ್ದ, ಆತನಿಗೆ ಮದುವೆ ಆಗಿಲ್ಲ. ಹಿಂದುತ್ವ ಅಂತಾ ಸುತ್ತಾಡುತ್ತಿದ್ದ. ದಾವಣಗೆರೆ ನಗರದ EWS ಕಾಲೋನಿಯಲ್ಲಿ ವಾಸವಾಗಿದ್ದು, ಈ ತರ ಎಂಬುದು ಈಗ ಗೊತ್ತಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Last Updated : Sep 30, 2023, 8:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.