ETV Bharat / state

ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆ, ಆರ್ಥಿಕ ನೆರವಿಗಾಗಿ ಅಂಗಲಾಚುತ್ತಿರುವ ವಿಶೇಷಚೇತನ ಕ್ರೀಡಾಪಟು - ಹರಿಹರದ ಕರವೇ ಅಧ್ಯಕ್ಷ ಪ್ರೀತಮ್ ಬಾಬು

ಹರಿಹರದ ವಿಶೇಷಚೇತನ ರೂಪಾ ಅವರು ಕಜಕಿಸ್ತಾನದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಸಿಟ್ಟಿಂಗ್​ ವಾಲಿಬಾಲ್​ ಚಾಂಪಿಯನ್​ಶಿಪ್​ಗೆ ಆಯ್ಕೆಯಾಗಿದ್ದಾರೆ. ಪಂದ್ಯಾವಳಿಯಲ್ಲಿ ಭಾಗವಹಿಸಲು ಆರ್ಥಿಕ ಸಂಕಷ್ಟ ಎದುರಾಗಿದ್ದು, ಆರ್ಥಿಕವಾಗಿ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ.

vspecial-athlete-selected-for-the-sitting-volleyball-championship
ಅಂತರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆ, ಆರ್ಥಿಕ ನೆರವಿಗಾಗಿ ಅಂಗಲಾಚುತ್ತಿರುವ ವಿಶೇಷಚೇತನ ಕ್ರೀಡಾಪಟು
author img

By

Published : Feb 23, 2023, 6:38 PM IST

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ವಿಶೇಷಚೇತನ ರೂಪಾ ಅವರು ಅಂತಾರಾಷ್ಟ್ರೀಯ ಮಟ್ಟದ ಸಿಟ್ಟಿಂಗ್ (ವಿಶೇಷಚೇತನರಿಗಾಗಿ ಆಯೋಜನೆ ಮಾಡುವ) ವಾಲಿಬಾಲ್ ಚಾಂಪಿಯನ್​ಶಿಪ್​ಗೆ ಆಯ್ಕೆಯಾಗಿದ್ದಾರೆ, ದುರಂತ ಎಂದರೇ ಕಜಕಿಸ್ತಾನ್ ನಡೆಯುವ ಈ ಚಾಂಪಿಯನ್​ಶಿಪ್​ನಲ್ಲಿ ಭಾಗಿಯಾಗಲು ಆರ್ಥಿಕ ಸಂಕಷ್ಟ ಎದುರಾಗಿದ್ದು, ಹಣವಿಲ್ಲದೇ ರೂಪಾ ಕಜಕಿಸ್ತಾನಕ್ಕೆ ತೆರಳಲು ಆರ್ಥಿಕ ನೆರವಿಗಾಗಿ ಆಸರೆಯಾಗುವಂತೆ ವಿನಂತಿಸಿಕೊಂಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ನಗರದ ನಿವಾಸಿಯಾದ ರೂಪಾ ಹುಟ್ಟು ವಿಶೇಷಚೇತನರಾಗಿದ್ದು, ಕಷ್ಟು ಪಟ್ಟು ವಿಕಲಾಂಗರ ಸಿಟ್ಟಿಂಗ್ ವಾಲಿಬಾಲ್​ನಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟು ಆಗಿದ್ದಾರೆ. ಇದೀಗ ಈ ಕ್ರೀಡಾಪಟುವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಅವಕಾಶ ದೊರೆತಿದ್ದರೂ ತಮ್ಮ ಪ್ರತಿಭೆ ಹೊರಹಾಕಲು ಆರ್ಥಿಕ ಸಂಕಷ್ಟ ಎದುರಾಗಿದೆ.

ಜೂನ್​ ತಿಂಗಳಲ್ಲಿ ವಿಕಲಚೇತನರಿಗಾಗಿಯೇ ಸಿಟ್ಟಿಗ್ ವಾಲಿಬಾಲ್ ಟೂರ್ನಿ ಆಯೋಜನೆ ಮಾಡಲಾಗಿದ್ದು, ಕಜಕಿಸ್ತಾನಕ್ಕೆ ತೆರಳಲು ಸುಮಾರು ಮೂರು ಲಕ್ಷ ಹಣ ಬೇಕಾಗಿದೆ, ಬಡತನದಲ್ಲೇ ಜೀವನ ಸಾಗಿಸುತ್ತಿರುವ ರೂಪಾ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಜೀವನ ಕಟ್ಟಿಕೊಂಡಿದ್ದಾರೆ. ಇನ್ನು ಹಣ ಹಾಕಿ ಟೂರ್ನಿಗೆ ತೆರಳಲು ಕೈಯಲ್ಲಿ ಹಣ ಇಲ್ಲದೇ ಹೈರಾಣಾಗಿರುವ ರೂಪಾ ಜನಸಾಮಾನ್ಯರಿಂದ ಸಹಾಯ ಹಸ್ತ ಚಾಚಿದ್ದಾರೆ.

ಈ ಬಗ್ಗೆ ಕ್ರೀಡಾಪಟು ರೂಪಾ ಮಾತನಾಡಿ, ಕಜಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಸಿಟ್ಟಿಂಗ್​ ವಾಲಿಬಾಲ್ ಟೂರ್ನಿ ನಡೆಯಲಿದ್ದು ಅದರಲ್ಲಿ ಭಾಗವಹಿಸಬೇಕು. ಪಂದ್ಯಾವಳಿಯಲ್ಲಿ ಭಾಗವಹಿಸಲು ಸುಮಾರು 3 ಲಕ್ಷ ರೂ. ಹಣವನ್ನು ಕಟ್ಟಬೇಕು ಎಂದಾಗ ದಿಕ್ಕು ತೋಚದಂತಾಗಿದೆ, ಆರ್ಥಿಕ ಸಂಕಷ್ಟ ಎದುರಾಗಿದ್ದು, ಕೆಲಸ ಮಾಡಿ ಬರುವ 6 ಸಾವಿರ ಸಂಬಳದಲ್ಲಿ ಜೀವನ ಸಾಗಿಸಬೇಕು, ಜೊತೆಗೆ ಇಬ್ಬರು ಮಕ್ಕಳನ್ನು ಸಹ ನೋಡಿಕೊಳ್ಳಬೇಕು. ಪಂದ್ಯಾವಳಿಯಲ್ಲಿ ಭಾಗವಹಿಸಲು ಹಣದ ಅವಶ್ಯಕತೆ ಇದೆ. ಸಹಾಯ ಮಾಡುವಂತೆ ಮನವಿ ಮಾಡಿಕೊಂಡರು.

ಇದನ್ನೂ ಓದಿ: ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರ ಹಿಂದೇಟು: ವಿಧಾನಸಭೆಯಲ್ಲಿ ನಡೆಯಿತು ಬಿಸಿ ಬಿಸಿ ಚರ್ಚೆ

ಮೈಸೂರಿನಲ್ಲಿ ಸಿಟ್ಟಿಂಗ್​ ವಾಲಿಬಾಲ್​ ತರಬೇತಿ ಪಡೆದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪಾಲ್ಗೊಂಡು ಸಾಕಷ್ಟು ಬಹುಮಾನಗಳು ಮತ್ತು ಪ್ರಶಸ್ತಿಗೆ ಭಾಜನರಾಗಿರುವ ವಿಕಲಚೇತನ ರೂಪಾ ಅವರ ಕಷ್ಟಕ್ಕೆ ಕರವೇ ಕಾರ್ಯಕರ್ತರು 10 ಸಾವಿರ ಹಣವನ್ನು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಹರಿಹರದ ಕರವೇ ಅಧ್ಯಕ್ಷ ಪ್ರೀತಮ್ ಬಾಬು, ಅಂತಾರಾಷ್ಟ್ರೀಯ ಸಿಟ್ಟಿಂಗ್​ ವಾಲಿಬಾಲ್​ ಪಂದ್ಯಾವಳಿಗೆ ರೂಪ ಅವರು ಆಯ್ಕೆಯಾಗಿದ್ದು, ಖುಷಿಯ ಸಂಗತಿ, ನಮ್ಮ ಸಂಘದ ವತಿಯಿಂದ 10 ಸಾವಿರ ರೂ. ಹಣ ಸಹಾಯ ಮಾಡಿದ್ದೇವೆ. ಇದೇ ರೀತಿ ಎಲ್ಲ ನಾಗರಿಕರು ಸಹಾಯ ಮಾಡಬೇಕು. ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಕೀರ್ತಿ ತಂದ ಆಟಗಾರ್ತಿಯಾಗಿದ್ದಾರೆ. ತುಂಬಾ ಬಡತನದಲ್ಲಿ ಜೀವನ ಸಾಗಿಸುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ರೂಪಾ ಅವರು ಭಾಗವಹಿಸಲು ಎಲ್ಲರೂ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ: ಬುಡಕಟ್ಟು ಜನರ ಜಮೀನು ವಿವಾದ: ಜಿಲ್ಲಾಧಿಕಾರಿ ಬಂಧನಕ್ಕೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.