ETV Bharat / state

ಸಾರ್ವಜನಿಕ ಸ್ಥಳಗಳಲ್ಲಿ ನೂತನ ವರ್ಷಾಚರಣೆ ನಿಷಿದ್ಧ: ಎಸ್​ಪಿ ಹನುಮಂತರಾಯ

ಸಾರ್ವಜನಿಕ ಸ್ಥಳಗಳು, ಮುಖ್ಯರಸ್ತೆಗಳು ಹಾಗೂ ಹೆಚ್ಚು ಜನರಿರುವಂತಹ ಅಪಾರ್ಟ್​ಮೆಂಟ್​ಗಳಲ್ಲಿ ಹೊಸ ವರ್ಷಾಚರಣೆಗೆ ನಿಷೇಧ ಹೇರಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಸೂಚಿಸಿದ್ದಾರೆ.

author img

By

Published : Dec 29, 2020, 7:55 PM IST

sp-hanumantharaya-reaction-about-new-year-celebration
ಸಾರ್ವಜನಿಕ ಸ್ಥಳಗಳಲ್ಲಿ ನೂತನ ವರ್ಷಾಚರಣೆ ನಿಷಿದ್ಧ: ಎಸ್​ಪಿ ಹನುಮಂತರಾಯ

ದಾವಣಗೆರೆ: ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಮಾಡದಂತೆ ಜಿಲ್ಲಾದ್ಯಂತ ನಿಷೇಧ ಹೇರಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳು, ಮುಖ್ಯರಸ್ತೆಗಳು ಹಾಗೂ ಹೆಚ್ಚು ಜನರಿರುವಂತಹ ಅಪಾರ್ಟ್​ಮೆಂಟ್​ಗಳಲ್ಲಿ ಹೊಸ ವರ್ಷಾಚರಣೆ ಮಾಡುವಂತಿಲ್ಲ. ಜೊತೆಗೆ ಪಬ್​, ವಿಶೇಷ ಪಾರ್ಟಿ, ಡಿಜೆಗಳಿಗೆ ನಿಷೇಧ ಹೇರಲಾಗಿದೆ. ಆದರೆ, ರೆಸ್ಟೋರೆಂಟ್​, ಹೋಟೆಲ್​ಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಮುಂಜಾಗ್ರತಾ ಕ್ರಮವಾಗಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್​ ಹಾಗೂ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ.

ಸರ್ಕಾರ ಹೊಸ ವರ್ಷದಂದು 12 ಗಂಟೆಯೊಳಗೆ ಮನೆ ಸೇರಲು ಸಾರ್ವಜನಿಕರಿಗೆ ಅವಕಾಶ ನೀಡಿದ್ದು, ದಾವಣಗೆರೆಯಲ್ಲಿ ಅರ್ಧ ಗಂಟೆ ಹೆಚ್ಚು ಕಾಲಾವಕಾಶ ನೀಡುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.