ದಾವಣಗೆರೆ: ನಗರದಲ್ಲಿ ದುಗ್ಗಮ್ಮ ದೇವಿ ಜಾತ್ರೆ ಸಂಭ್ರಮ ಮನೆ ಮಾಡಿದ್ದು, ಆಚರಣೆಯಲ್ಲಿ ಪ್ರಾಣಿ ಬಲಿ ಕೊಡಬಾರದು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಆದರೆ ನಿಯಮವನ್ನು ಗಾಳಿಗೆ ತೂರಿ ಕೆಲ ಯುವಕರು ಕೋಣವನ್ನು ಬಲಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪ್ರತಿವರ್ಷದಂತೆ ಈ ಬಾರಿಯೂ ದುಗ್ಗಮ್ಮ ದೇವಿ ಜಾತ್ರೆ ಆರಂಭವಾಗಿದೆ. ಈ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಕೋಣ ಬಲಿ ಕೊಡುವ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದಾರೆ. ಆದರೆ ಜಿಲ್ಲಾಡಳಿತ ದೇಗುಲ 500 ಮೀಟರ್ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮಾಡಬಾದರು. ಬದಲಿಗೆ ಕೋಣದ ರಕ್ತವನ್ನು ಸಿರಿಂಜ್ನಲ್ಲಿ ತಗೆದು ಪೂಜೆ ಮಾಡಬೇಕೆಂದು ಭಕ್ತರಿಗೆ ತಿಳಿಸಿತ್ತು.
ಅಷ್ಟೇ ಅಲ್ಲದೆ ಪ್ರಾಣವಧೆ ಆಗುವುದನ್ನು ತಡೆಯುವ ಸಲುವಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ಪಿ ಸಿಬಿ ರಿಷ್ಯಂತ್ ಅವರು ಕಟ್ಟೆಚ್ಚರ ವಹಿಸಿ ರಾತ್ರಿಯಿಡಿ ದೇವಸ್ಥಾನದ ಮುಂಭಾಗವೇ ಠಿಕಾಣಿ ಹೂಡಿದ್ದರು. ಆದರೂ ಅಧಿಕಾರಿಗಳ ಕಣ್ಣು ತಪ್ಪಿಸಿ ಭಕ್ತರು, ದೇವಾಲಯದಿಂದ 500 ಮೀಟರ್ ವ್ಯಾಪ್ತಿಯಲ್ಲಿ ಕೆಲ ಯುವಕರು ಕೋಣವನ್ನು ಬಲಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 12ರಿಂದ 14 ವರ್ಷದ ಮಕ್ಕಳಿಗೆ ನಾಳೆಯಿಂದ ವ್ಯಾಕ್ಸಿನ್.. ಗೈಡ್ಲೈನ್ಸ್ ಹೊರಡಿಸಿದ ಕೇಂದ್ರ