ETV Bharat / state

ಪೋಸ್ಟ್​​ಮಾರ್ಟಂ ಅವಶ್ಯಕತೆ ಇಲ್ಲ: ಸಿಎಂ ಬದಲಾವಣೆ ವಿಚಾರವಾಗಿ ಸೋಮಣ್ಣ ಸ್ಪಷ್ಟನೆ - davanagere latest news

ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ವಿ. ಸೋಮಣ್ಣ, ಪೋಸ್ಟ್​​ಮಾರ್ಟಂ ಮಾಡುವ ಅವಶ್ಯಕತೆ ಇಲ್ಲ. ಇದಕ್ಕೆ ಹೈಕಮಾಂಡ್ ಇದ್ದು, ಎಲ್ಲವನ್ನೂ ಗಮನಿಸುತ್ತಿದೆ ಎಂದರು.

somanna
ಸಚಿವ ವಿ. ಸೋಮಣ್ಣ
author img

By

Published : May 30, 2021, 2:43 PM IST

Updated : May 30, 2021, 2:53 PM IST

ದಾವಣಗೆರೆ: ಪೋಸ್ಟ್​​ಮಾರ್ಟಂ ಮಾಡುವ ಅವಶ್ಯಕತೆ ಇಲ್ಲ. ಯಾರೋ ಮಾತನಾಡುತ್ತಾರೆ ಅಂದ್ರೆ ಅದು ಆಗಲ್ಲ. ಇದಕ್ಕೆ ಹೈಕಮಾಂಡ್ ಇದೆ ಎಂದು ಸಚಿವ ವಿ. ಸೋಮಣ್ಣ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದರು.

ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ

ಜಿಲ್ಲೆಯ ಹರಿಹರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ದೊಡ್ಡ ಪಕ್ಷ, ಶಿಸ್ತಿನ ಪಕ್ಷ. ರಾಜ್ಯದಲ್ಲಿ ಹರಿದಾಡುತ್ತಿರುವ ವಿಚಾರವಾಗಿ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ. ಅಧ್ಯಕ್ಷರಿಗಿಂತ ನಾವೇನು ದೊಡ್ಡವರಲ್ಲ. ಅಧ್ಯಕ್ಷರು ಏನು ಹೇಳಿದ್ದಾರೋ ಅದು ಆಗಬೇಕೆನ್ನುವುದು ಎಲ್ಲರ ಬಯಕೆ. ಹೈಕಮಾಂಡ್ ಪ್ರತಿಯೊಂದನ್ನು ಗಮನಿಸುತ್ತಿದೆ. ಸಿಎಂ ಬದಲಾವಣೆ ವಿಚಾರವೇ ಇಲ್ಲವೆಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕೋವಿಡ್​ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುತ್ತಿರುವ ಡಿಮ್ಹಾನ್ಸ್ ಸಂಸ್ಥೆ

ಲಾಕ್​​ಡೌನ್​ನಿಂದ ಸೋಂಕು ಪ್ರಕರಣಗಳು ಇಳಿಕೆಯಾಗಿದೆ. ಮಹಾಮಾರಿಯನ್ನು ಸಂಪೂರ್ಣ ತಡೆಯಲು ಜನರ ಸಹಕಾರ ಅಗತ್ಯ. ಹಾಗಾಗಿ ಎಲ್ಲರೂ ನಿಯಮ ಪಾಲಿಸಿ ಸೋಂಕು ತಡೆಯಬೇಕಿದೆ. ಲಾಕ್​ಡೌನ್​ ಬಗ್ಗೆ ಈಗಾಗಲೇ ಸಿಎಂ ಪ್ರತಿಕ್ರಿಯಿಸಿದ್ದಾರೆ. ಎಲ್ಲವೂ ಪರಿಸ್ಥಿತಿ ಮೇಲೆ ನಿರ್ಧಾರ ಆಗಲಿದೆ ಎಂದು ಸಚಿವ ಸೋಮಣ್ಣ ಹೇಳಿದ್ರು.

Last Updated : May 30, 2021, 2:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.