ದಾವಣಗೆರೆ : ಮಳೆಯೊಂದಿಗೆ ಭಾರಿ ಗಾಳಿ ಬೀಸಿದ ಪರಿಣಾಮ 40 ರಿಂದ 50 ಅಂಗಡಿ ಮಳಿಗೆಗಳ ಶೀಟ್‌ಗಳು ಹಾರಿಹೋದ ಘಟನೆ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಲಾಕ್‌ಡೌನ್ ಇದ್ದ ಕಾರಣ ವ್ಯಾಪಾರಿಗಳು ಯಾರೂ ಇರಲಿಲ್ಲ. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ. ಇಲ್ಲಿದ್ದ ಖಾಸಗಿ ಬಸ್ ನಿಲ್ದಾಣವನ್ನೂ ಕೆಲ ತಿಂಗಳ ಹಿಂದೆಯಷ್ಟೇ ಸ್ಟೇಡಿಯಂ ಪಕ್ಕ ಸ್ಥಳಾಂತರಿಸಲಾಗಿತ್ತು. ಆದರೆ, ಮಳಿಗೆಗಳು ಮಾತ್ರ ಕಾರ್ಯಾಚರಿಸುತ್ತಿದ್ದವು. ಇಲ್ಲಿ ಕಳಪೆ ಕಾಮಗಾರಿ ಮಾಡಿದ್ದರಿಂದ ಶೀಟ್‌ಗಳು ಹಾಳಾಗಿವೆ ಎಂಬುದು ಸ್ಥಳೀಯರ ಆರೋಪ.
ನಿನ್ನೆ ಸಂಜೆ ಆರು ಗಂಟೆಯಿಂದ 9.30ರ ತನಕ ಸುರಿದ ಭಾರಿ ಮಳೆ ಹಾಗೂ ಜೋರಾಗಿ ಬೀಸಿದ ಗಾಳಿಯಿಂದ ಕೆಲ ಶೀಟ್‌ಗಳು ಹಾರಿ ಹೋದ್ರೆ, ಮತ್ತೆ ಕೆಲವು ಕುಸಿದಿವೆ. ಲಾಕ್‌ಡೌನ್ ಸಮಸ್ಯೆಯಿಂದ ಜನ ವ್ಯಾಪಾರ ಇಲ್ಲದೇ ಕಂಗಾಲಾಗಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಪರಿಹಾರ ನೀಡಬೇಕು ಎಂದು ಸಂತ್ರಸ್ತರು ಆಗ್ರಹಿಸಿದ್ದಾರೆ.