ದಾವಣಗೆರೆ: 'ಯಡಿಯೂರಪ್ಪ ಹೆಚ್ಚು ದಿನ ಮುಖ್ಯಮಂತ್ರಿ ಆಗಿರುವುದಿಲ್ಲ. ಉತ್ತರ ಕರ್ನಾಟಕದವರು ಸಿಎಂ ಆಗ್ತಾರೆ' ಎಂಬ ಹೇಳಿಕೆ ನೀಡಿದ್ದ ಸಂಬಂಧ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಫೋನ್ನಲ್ಲಿ ಮಾತನಾಡಿ, ಹಾಗೆಲ್ಲಾ ಮಾತನಾಡಿದ್ದು ಸರಿಯಲ್ಲ ಎಂಬುದಾಗಿ ಹೇಳಿದ್ದೇನೆ ಎಂದು ಬಿಜೆಪಿ ಹಿರಿಯ ಶಾಸಕ ಎಸ್.ಎ.ರವೀಂದ್ರನಾಥ್ ತಿಳಿಸಿದ್ದಾರೆ.
"ಮದುವೆ ಮಾಡ್ಕೋ ಅಂದ್ರೆ ಬೇಡ ಅಂತೀವಾ''?
ಇನ್ನು ನೀವು ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದೀರಾ ಎಂಬ ಪ್ರಶ್ನೆಗೆ ಮದುವೆ ಮಾಡ್ಕೋ ಅಂದ್ರೆ ಬೇಡ ಅನ್ನೋಕ್ಕಾಗುತ್ತಾ. ಆದರೆ, ಹೆಣ್ಣು ಕೊಡಬೇಕಲ್ವಾ ಎಂದು ಹೇಳುವ ಮೂಲಕ ಸಚಿವ ಸ್ಥಾನದ ಇಚ್ಛೆಯನ್ನು ಮಾರ್ಮಿಕವಾಗಿ ವ್ಯಕ್ತಪಡಿಸಿದರು.