ಹರಿಹರ (ದಾವಣಗೆರೆ) : ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ರಾಷ್ಟ್ರ ಸೇವಿಕಾ ಸಮಿತಿಯಿಂದ ಗಾಂಧಿ ನಗರದಲ್ಲಿರುವ ಗುತ್ತೂರು ಆಟೋ ನಿಲ್ದಾಣದ 60 ಆಟೋ ಚಾಲಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ಆಹಾರ ಧಾನ್ಯಗಳ ಕಿಟ್ ವಿತರಣೆಗೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶಾರದೇಶಾನಂದ ಸ್ವಾಮೀಜಿ ಚಾಲನೆ ನೀಡಿದರು. ಹಿರಿಯ ವೈದ್ಯ ಡಾ.ಆರ್.ಆರ್. ಖಮಿತ್ಕರ್ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಉಂಟಾದ ಕಷ್ಟ, ನಷ್ಟಗಳನ್ನು ಕೇವಲ ಸರ್ಕಾರದಿಂದಲೇ ಪರಿಹರಿಸಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಸಂಘ, ಸಂಸ್ಥೆಯವರು, ಸ್ಥಿತಿವಂತರು ತಮ್ಮ ಸುತ್ತಲಿನ ಪರಿಸರದಲ್ಲಿರುವ ಬಡವರಿಗೆ, ನಿರ್ಗತಿಕರಿಗೆ ಸಹಾಯ ಹಸ್ತ ಚಾಚಬೇಕು ಎಂದರು.
ಈ ಸಂದರ್ಭ ಆರ್‌ಎಸ್‌ಎಸ್ ಜಿಲ್ಲಾ ಪ್ರಚಾರಕ ಗುರುದತ್, ರಾಷ್ಟ್ರ ಸೇವಿಕಾ ಸಮಿತಿ ಸಂಚಾಲಕಿ ಸುಮನ್ ಖಮಿತ್ಕರ್, ಪತ್ರಕರ್ತ, ಯೋಗಪಟು ಡಾ.ಕೆ.ಜೈಮುನಿ, ಶೀತಲ್ ಲದ್ವಾ, ಮೀನಾ ಭೂತೆ ಉಪಸ್ಥಿತರಿದ್ದರು.