ದಾವಣಗೆರೆ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಏರಿ ಕುಸಿದಿದ್ದು ಅಪಾಯ ಮಟ್ಟಕ್ಕೆ ತಲುಪಿದೆ. ದಾವಣಗೆರೆ ತಾಲೂಕಿನ ಕೊಡಗನೂರು ಗ್ರಾಮದಲ್ಲಿರುವ ಕೆರೆ ಏರಿ ಕುಸಿಯುವ ಭೀತಿಯಲ್ಲಿ ರೈತರಿದ್ದಾರೆ.
ದಾವಣಗೆರೆ - ಹೊಳಲ್ಕೆರೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಹೆಚ್ಚು ಮಳೆಯಿಂದಾಗಿ ಕೆರೆ ಕೂಡ ತುಂಬಿದ್ದರಿಂದ ಒಂದು ಅಡಿಗಿಂತ ಜಾಸ್ತಿ ಆಳದಷ್ಟು ಕೆರೆ ಏರಿ ಕುಸಿದಿದೆ. ಇನ್ನು, ಕೆರೆ ಏರಿ ಹಾನಿಯಾದ್ರೆ ಲಕ್ಷಾಂತರ ಹೆಕ್ಟೇರ್ ಜಮೀನು, ವಸತಿ ಪ್ರದೇಶ ಮುಳುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ.
ಕೆರೆ ಏರಿ ಒಡೆದು ಅನಾಹುತವಾಗಬಹುದು ಎಂದು ರೈತರಲ್ಲಿ ಆತಂಕ ಮನೆ ಮಾಡಿದೆ. ಇನ್ನು, ಕೆರೆ ಏರಿ ಕುಸಿದಿದ್ದರಿಂದ ತಾತ್ಕಾಲಿಕವಾಗಿ ರಸ್ತೆ ಸಂಚಾರ ಬಂದ್ ಮಾಡಿ ಅಧಿಕಾರಿಗಳು ಮಣ್ಣು ಏರಿಸುವ ಕೆಲಸ ಮಾಡ್ತಿದ್ದಾರೆ. ಜಿಲ್ಲಾಡಳಿತ ಕೆರೆ ಏರಿ ಮೇಲೆ ನಿಗಾ ಇರಿಸಿದೆ. ಕಾಟಾಚಾರಕ್ಕೆ ಕಾಮಗಾರಿ ಮಾಡದೆ ಕೆರೆ ಏರಿಯನ್ನು ಭದ್ರಪಡಿಸುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ರೈತರು ಒತ್ತಾಯಿಸಿದ್ದಾರೆ.
ಓದಿ: ದಾವಣಗೆರೆಯಲ್ಲಿ ಧಾರಾಕಾರ ಮಳೆಗೆ ಒಡೆದ ಕೆರೆ ಏರಿ.. ಮುನ್ನೂರು ಎಕರೆ ಜಮೀನಿಗೆ ನುಗ್ಗಿದ ನೀರು