ETV Bharat / state

ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದಿಂದ ತಿಂಗಳಿಗೊಮ್ಮೆ ವೇತನ ವಿತರಣೆಗೆ ಮನವಿ - latest harihara news

ತಿಂಗಳಿಗೊಮ್ಮೆ ನಿಯಮಿತವಾಗಿ ವೇತನ ವಿತರಣೆಗೆ ಆಗ್ರಹಿಸಿ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದಿಂದ ನಗರದಲ್ಲಿ ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪರಿಗೆ ಮನವಿ ನೀಡಲಾಯಿತು.

Request for salary distribution once in a month from Association of Health
ತಿಂಗಳಿಗೊಮ್ಮೆ ವೇತನ ವಿತರಣೆಗೆ ಮನವಿ : ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘ
author img

By

Published : Nov 26, 2019, 8:47 PM IST

ಹರಿಹರ: ತಿಂಗಳಿಗೊಮ್ಮೆ ನಿಯಮಿತವಾಗಿ ವೇತನ ವಿತರಣೆಗೆ ಆಗ್ರಹಿಸಿ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದಿಂದ ನಗರದಲ್ಲಿ ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪರಿಗೆ ಮನವಿ ನೀಡಲಾಯಿತು.

ತಿಂಗಳಿಗೊಮ್ಮೆ ವೇತನ ವಿತರಣೆಗೆ ಮನವಿ

ಸಂಘದ ತಾಲೂಕು ಅಧ್ಯಕ್ಷ ಎಂ.ಉಮಣ್ಣ ಮಾತನಾಡಿ, ಆರೋಗ್ಯ ಸಹಾಯಕ ವೃಂದದವರಿಗೆ ರಾಜ್ಯದಲ್ಲಿ 3ರಿಂದ 6 ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ತಿಂಗಳಿಗೊಮ್ಮೆ ನಿಯಮಿತವಾಗಿ ವೇತನ ನೀಡಲು ಈ ಹಿಂದೆ ಆರೋಗ್ಯ ಇಲಾಖೆ ನಿರ್ದೇಶಕರು, ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸಂಬಂಧಿಸಿದ ರಾಜ್ಯಮಟ್ಟದ ಅಧಿಕಾರಿಗಳಿಗೆ ಮನವಿ ನೀಡಲಾಗಿದೆ. ಆದರೂ ಕೂಡ ಆರೋಗ್ಯ ಸಹಾಯಕರು ವೇತನಕ್ಕಾಗಿ ಪರದಾಡುವುದು ತಪ್ಪಿಲ್ಲವೆಂದು ಅಸಮಾಧಾನ ಹೊರ ಹಾಕಿದರು.

ಸಾರ್ವಜನಿಕರ ಆರೋಗ್ಯ ಕಾಪಾಡುವ ಹೊಣೆ ಹೊತ್ತ ಆರೋಗ್ಯ ಸಹಾಯಕರ ಆರೋಗ್ಯವೇ ಹದಗೆಟ್ಟಿದೆ. ಸಾಲ ಸೂಲ ಮಾಡಿ ಕುಟುಂಬ ನಿರ್ವಹಣೆ ಮಾಡಬೇಕಿದೆ. ಮನವಿಗೆ ಸ್ಪಂದಿಸದ ಸರ್ಕಾರದ ಕಣ್ಣು ತೆರೆಸಲು ಸಂಘದ ಕೇಂದ್ರ ಸಭೆಯ ನಿರ್ಣಯದಂತೆ ಈ ತಿಂಗಳಿಂದ ರಾಷ್ಟ್ರೀಯ ಕಾರ್ಯಕ್ರಮಗಳ ವರದಿಯನ್ನು ಇಲಾಖೆಗೆ ಸಲ್ಲಿಸುವುದನ್ನು ಸ್ಥಗಿತಗೊಳಿಸುತ್ತಿದ್ದೇವೆ. ಡಿಸೆಂಬರ್ ತಿಂಗಳಿಂದ ಎಲ್ಲಾ ಕಾರ್ಯಕ್ರಮಗಳ ವರದಿ ನೀಡುವುದನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್, ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

Intro:ಸ್ಲಗ್ : ವೇತನ ವಿತರಣೆಗೆ ಮನವಿ
Into:
ಹರಿಹರ : ತಿಂಗಳಿಗೊಮ್ಮೆ ನಿಯಮಿತವಾಗಿ ವೇತನ ವಿತರಣೆಗೆ ಆಗ್ರಹಿಸಿ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದಿಂದ ನಗರದಲ್ಲಿ ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪರಿಗೆ ಮನವಿ ನೀಡಲಾಯಿತು.

Body:
ನಂತರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಉಮಣ್ಣ ಮಾತನಾಡಿ, ಆರೋಗ್ಯ ಸಹಾಯಕ ವೃಂದದವರಿಗೆ ರಾಜ್ಯದಲ್ಲಿ 3 ರಿಂದ 6 ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ.
ತಿಂಗಳಿಗೊಮ್ಮೆ ನಿಯಮಿತವಾಗಿ ವೇತನ ನೀಡಲು ಈ ಹಿಂದೆ ಆರೋಗ್ಯ ಇಲಾಖೆ ನಿರ್ದೇಶಕರು, ಸರಕಾರದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸಂಬಮಧಿತ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಈ ಹಿಂದೆ ಮನವಿ ನೀಡಲಾಗಿದೆ. ಆದರೂ ಕೂಡ ಆರೋಗ್ಯ ಸಹಾಯಕರು ವೇತನಕ್ಕಾಗಿ ಪರದಾಡುವುದು ತಪ್ಪಿಲ್ಲ.
ಸಾರ್ವಜನಿಕರ ಆರೋಗ್ಯ ಕಾಪಾಡುವ ಹೊಣೆ ಹೊತ್ತ ಆರೋಗ್ಯ ಸಹಾಯಕರ ಆರೋಗ್ಯವೆ ಹದಗೆಟ್ಟಿದೆ. ಸಾಲ, ಸೂಲ ಮಾಡಿ ಕುಟುಂಬ ನಿರ್ವಹಣೆ ಮಾಡಬೇಕಿದೆ. ಮಕ್ಕಳ ಶಾಲಾ ಶುಲ್ಕ ಪಾವತಿ, ದಿನಸಿ ಅಂಗಡಿ ಖರೀದಿ ಕಷ್ಟಕರವಾಗಿದೆ.
ಮನವಿಗೆ ಓಗೊಡದ ಸರಕಾರದ ಕಣ್ಣು ತೆರೆಸಲು ಸಂಘದ ಕೇಂದ್ರ ಸಭೆಯ ನಿರ್ಣಯದಂತೆ ಈ ತಿಂಗಳಿಂದ ರಾಷ್ಟ್ರೀಯ ಕಾರ್ಯಕ್ರಮಗಳ ವರದಿಯನ್ನು ಇಲಾಖೆಗೆ ಸಲ್ಲಿಸುವುದನ್ನು ಸ್ಥಗಿತಗೊಳಿಸುತ್ತಿದ್ದೇವೆ. ಡಿಸೆಂಬರ್ ತಿಂಗಳಿಂದ ಎಲ್ಲಾ ಕಾರ್ಯಕ್ರಮಗಳ ವರದಿ ನೀಡುವುದನ್ನು ಸ್ಥಗಿತಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

Conclusion
ಆರೋಗ್ಯ ಸಹಾಯಕರ ಸಂಘದ ಪದಾಧಿಕಾರಿಗಳಾದ ಎಂ.ಬಿ.ಮಂಜುನಾಥ್, ಗೋವಿಂದಪ್ಪ, ಆದರ್ಶ, ಕಿರಣ್, ವಿಜಯ ವಿಠ್ಠಲ, ಸಾವಿತ್ರಮ್ಮ, ಕಾರ್ಲಿನಾ, ಸುಧಾ, ಕೋಕಿಲಾ ವಾಣಿ, ವಿಮಲಶೀಲ, ಪೂಜಾ, ರೇಖಾ, ಪರಶುರಾಮ, ಮಹೇಶ್ ಇತರರಿದ್ದರು.Body:ಸ್ಲಗ್ : ವೇತನ ವಿತರಣೆಗೆ ಮನವಿ
Into:
ಹರಿಹರ : ತಿಂಗಳಿಗೊಮ್ಮೆ ನಿಯಮಿತವಾಗಿ ವೇತನ ವಿತರಣೆಗೆ ಆಗ್ರಹಿಸಿ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದಿಂದ ನಗರದಲ್ಲಿ ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪರಿಗೆ ಮನವಿ ನೀಡಲಾಯಿತು.

Body:
ನಂತರ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಉಮಣ್ಣ ಮಾತನಾಡಿ, ಆರೋಗ್ಯ ಸಹಾಯಕ ವೃಂದದವರಿಗೆ ರಾಜ್ಯದಲ್ಲಿ 3 ರಿಂದ 6 ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ.
ತಿಂಗಳಿಗೊಮ್ಮೆ ನಿಯಮಿತವಾಗಿ ವೇತನ ನೀಡಲು ಈ ಹಿಂದೆ ಆರೋಗ್ಯ ಇಲಾಖೆ ನಿರ್ದೇಶಕರು, ಸರಕಾರದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಸಂಬಮಧಿತ ರಾಜ್ಯ ಮಟ್ಟದ ಅಧಿಕಾರಿಗಳಿಗೆ ಈ ಹಿಂದೆ ಮನವಿ ನೀಡಲಾಗಿದೆ. ಆದರೂ ಕೂಡ ಆರೋಗ್ಯ ಸಹಾಯಕರು ವೇತನಕ್ಕಾಗಿ ಪರದಾಡುವುದು ತಪ್ಪಿಲ್ಲ.
ಸಾರ್ವಜನಿಕರ ಆರೋಗ್ಯ ಕಾಪಾಡುವ ಹೊಣೆ ಹೊತ್ತ ಆರೋಗ್ಯ ಸಹಾಯಕರ ಆರೋಗ್ಯವೆ ಹದಗೆಟ್ಟಿದೆ. ಸಾಲ, ಸೂಲ ಮಾಡಿ ಕುಟುಂಬ ನಿರ್ವಹಣೆ ಮಾಡಬೇಕಿದೆ. ಮಕ್ಕಳ ಶಾಲಾ ಶುಲ್ಕ ಪಾವತಿ, ದಿನಸಿ ಅಂಗಡಿ ಖರೀದಿ ಕಷ್ಟಕರವಾಗಿದೆ.
ಮನವಿಗೆ ಓಗೊಡದ ಸರಕಾರದ ಕಣ್ಣು ತೆರೆಸಲು ಸಂಘದ ಕೇಂದ್ರ ಸಭೆಯ ನಿರ್ಣಯದಂತೆ ಈ ತಿಂಗಳಿಂದ ರಾಷ್ಟ್ರೀಯ ಕಾರ್ಯಕ್ರಮಗಳ ವರದಿಯನ್ನು ಇಲಾಖೆಗೆ ಸಲ್ಲಿಸುವುದನ್ನು ಸ್ಥಗಿತಗೊಳಿಸುತ್ತಿದ್ದೇವೆ. ಡಿಸೆಂಬರ್ ತಿಂಗಳಿಂದ ಎಲ್ಲಾ ಕಾರ್ಯಕ್ರಮಗಳ ವರದಿ ನೀಡುವುದನ್ನು ಸ್ಥಗಿತಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

Conclusion
ಆರೋಗ್ಯ ಸಹಾಯಕರ ಸಂಘದ ಪದಾಧಿಕಾರಿಗಳಾದ ಎಂ.ಬಿ.ಮಂಜುನಾಥ್, ಗೋವಿಂದಪ್ಪ, ಆದರ್ಶ, ಕಿರಣ್, ವಿಜಯ ವಿಠ್ಠಲ, ಸಾವಿತ್ರಮ್ಮ, ಕಾರ್ಲಿನಾ, ಸುಧಾ, ಕೋಕಿಲಾ ವಾಣಿ, ವಿಮಲಶೀಲ, ಪೂಜಾ, ರೇಖಾ, ಪರಶುರಾಮ, ಮಹೇಶ್ ಇತರರಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.