ದಾವಣಗೆರೆ: ಹಲವು ಸಮಾಜಮುಖಿ ಕಾರ್ಯ ಮಾಡುವ ಮೂಲಕ ಗಮನ ಸೆಳೆದಿರುವ ಶಾಸಕ ರೇಣುಕಾಚಾರ್ಯ ಕೊರೊನಾ ಸೋಂಕಿತರ ಸೇವೆ ಮಾಡಿ ಸ್ಥಳೀಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೀಗ ಕೋವಿಡ್ ಕೇರ್ ಸೆಂಟರ್ನಲ್ಲಿರುವ ಸೋಂಕಿತ ಮಕ್ಕಳ ಹುಟ್ಟುಹಬ್ಬ ಆಚರಿಸಿ ಮತ್ತೊಮ್ಮೆ ಮನಗೆದ್ದಿದ್ದಾರೆ.
ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ತಂದೆ - ತಾಯಿ ಹಾಗೂ ಪಾಲಕರ ಅನುಪಸ್ಥಿತಿಯಲ್ಲಿ ಬಾಲಕಿಯರ ಹುಟ್ಟುಹಬ್ಬ ಆಚರಿಸುವ ಮೂಲಕ ಶಾಸಕ ರೇಣುಕಾಚಾರ್ಯ, ಮಕ್ಕಳ ಮನಸ್ಸು ಗೆದ್ದಿದ್ದಾರೆ. ಅದ್ಧೂರಿ ಹುಟ್ಟುಹಬ್ಬದಲ್ಲಿ ನೂರಾರು ಮಕ್ಕಳು ಪಾಲ್ಗೊಂಡಿದ್ದು, ಈ ವೇಳೆ ಅವರಿಂದ ಕೇಕ್ ಕತ್ತರಿಸಿ ಸಿಹಿ ತಿನಿಸಿದರು. ಈ ಮೂಲಕ ಸೋಂಕಿತ ಮಕ್ಕಳ ಕೊರಗನ್ನು ಶಾಸಕ ರೇಣುಕಾಚಾರ್ಯ ದೂರವಾಗಿಸಿದ್ದಾರೆ.
ಉಳುಮೆ ಮಾಡಿ ಗಮನ ಸೆಳೆದ ಶಾಸಕ:
ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದ ರಂಗನಾಥ್ ಎಂಬುವರು ಲಾಕ್ಡೌನ್ ಹಿನ್ನೆಲೆ ಕುಟುಂಬ ಸಮೇತ ಹೊನ್ನಾಳಿಗೆ ಆಗಮಿಸಿ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದರು. ಇವರು ಉಳುಮೆ ಮಾಡುವುದನ್ನು ನೋಡಿದ ಶಾಸಕ ಎಂಪಿ ರೇಣುಕಾಚಾರ್ಯ ಜಮೀನಿಗೆ ಭೇಟಿ ನೀಡಿ ಅವರ ಜೊತೆ ಬೇಸಾಯ ಮಾಡಿದರು.