ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಭರದಿಂದ ಸಾಗಿದೆ. ಜನತಂತ್ರದ ಈ ಹಬ್ಬದಲ್ಲಿ ಸಾವಿರಾರು ಯುವಕ - ಯುವತಿಯರು ಮೊದಲ ಬಾರಿಗೆ ಉತ್ಸಾಹದಿಂದ ವೋಟ್ ಮಾಡಿ ಗಮನ ಸೆಳೆದರು. ರಕ್ಷಿತಾ ಕೆಪಿ ಎಂಬ ಯುವತಿ ಮೊದಲ ಬಾರಿಗೆ ಮತದಾನ ಮಾಡಿ ಖುಷಿ ಹಂಚಿಕೊಂಡರು.
ದಾವಣಗೆರೆ ತಾಲೂಕಿನ ಕುಂಬಳೂರು ಗ್ರಾಮದ ನಿವಾಸಿ ರಕ್ಷಿತ ಗ್ರಾಮದ ಮತಗಟ್ಟೆ ಸಂಖ್ಯೆ 42 ಮತದಾನ ಮಾಡಿ ತಮ್ಮ ಅನುಭವ ಹಂಚಿಕೊಂಡರು. 'ವೋಟ್ ಹೇಗೆ ಮಾಡುವುದು ಎಂದು ಗೊತ್ತಿರಲಿಲ್ಲ. ನಮ್ಮ ಪೋಷಕರು ಮನೆಯಲ್ಲಿ ವೋಟಿಂಗ್ ಮಾಡುವ ಬಗ್ಗೆ ಸ್ವಲ್ಪ ಹೇಳಿದ್ದರು. ಆದರೂ, ವೋಟ್ ಮಾಡುವ ಪ್ರಕ್ರಿಯೆ ಹೇಗಿರುತ್ತದೆ ಅನ್ನೋದರ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಈಗ ವೋಟ್ ಮಾಡಿದೆ. ಖುಷಿ ಆಯಿತು' ಎಂದು ಮೊದಲ ಮತದಾನ ಬಳಿಕ ರಕ್ಷಿತಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವಿಜಯಪುರ: ವಿಕಲಚೇತನ ಸಹೋದರನನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದು ಮತ ಹಾಕಿಸಿದ ಅಣ್ಣ
ನಗರದಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಯುವರಾಜ್ ಎ.ಪಿ ಕೂಡ ಮೊದಲ ಬಾರಿ ಮತದಾನ ಮಾಡಿದರು. ಇಲ್ಲಿನ ವಿಶೇಷ ಯುವ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಯುವಕ ಯುವರಾಜ್, ತಮ್ಮ ಖುಷಿ ಹೇಳಿಕೊಂಡರು. 'ಮತದಾನ ನಮ್ಮ ಹಕ್ಕು. ಮೊದಲ ಬಾರಿ ಮತ ಹಾಕುವ ಅವಕಾಶ ಸಿಕ್ಕಿದೆ. ಭಾರತದ ಸಂವಿಧಾನದಲ್ಲಿ ಹೇಳಿರುವಂತೆ ಮತದಾನ ನಮ್ಮ ಹಕ್ಕು, ಅದನ್ನು ಚಲಾಯಿಸುವ ಮೂಲಕ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ಯುವಕರು ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿ ಏನೆಂಬುದನ್ನು ಅರಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ಮತದಾನ ಮಾಡುವುದರಿಂದ ವಂಚಿತರಾಗಬಾರದು. ಈ ಬಾರಿ ಯುವ ಮತದಾರರ ಮತಗಟ್ಟೆ ಸ್ಥಾಪಿಸಲಾಗಿದ್ದು ಖುಷಿ ತಂದಿದೆ. ಮತಗಟ್ಟೆ ಕೂಡ ಬಹಳ ಆಕರ್ಷಕವಾಗಿದೆ' ಎಂದು ವೋಟ್ ಮಾಡಿದ ಖುಷಿ ಹಂಚಿಕೊಂಡರು.
![Reaction of who voted for the first time](https://etvbharatimages.akamaized.net/etvbharat/prod-images/18465624_dvg-1.jpg)
ನಗರದ ನಿಜಲಿಂಗಪ್ಪ ಬಡಾವಣೆ ನಿವಾಸಿ ನಮ್ರತಾ. ಎನ್, ಎನ್ನುವವರು ಕೂಡ ಇದೇ ಮೊದಲ ಬಾರಿ ಮತದಾನ ಮಾಡಿದರು. ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿರುವ ನಮ್ರತಾ, ತನ್ನ ತಂದೆಯೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಅಲ್ಲದೇ ಇದೇ ಮೊದಲ ಬಾರಿ ಮತಚಲಾವಣೆದ್ದರಿಂದ ಹರ್ಷ ವ್ಯಕ್ತಪಡಿಸಿದರು. 'ಇಂದು ಪ್ರಜಾಪ್ರಭುತ್ವದ ಹಬ್ಬ. ನಾನು ಮತದಾನ ಮಾಡಿದ್ದೇನೆ, ನೀವು ಕೂಡ ತಪ್ಪದೇ ಮತದಾನ ಮಾಡಿ' ಎಂದು ಸಂದೇಶ ರವಾನಿಸಿದರು.
![Reaction of who voted for the first time](https://etvbharatimages.akamaized.net/etvbharat/prod-images/18465624_dvg-2.jpg)
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 106 ರಲ್ಲಿ ಅರ್ಪಿತ ಜಾದವ್ ಎನ್ನುವವರು ಕೂಡ ಇದೇ ಮೊಲದ ಬಾರಿ ಮತ ಹಾಕಿದರು. ಶಿವಮೊಗ್ಗದಲ್ಲಿ ಮೊದಲ ವರ್ಷದ ನರ್ಸಿಂಗ್ ಮಾಡುತ್ತಿರುವ ಅರ್ಪಿತ, ದಾವಣಗೆರೆಗೆ ಆಗಮಿಸಿ ಮತದಾನ ಮಾಡಿ ಕರ್ತವ್ಯ ನಿರ್ವಹಿಸಿದರು.