ದಾವಣಗೆರೆ : ದೇವರ ಮೂರ್ತಿ ಮೇಲೆ ಪಾದವಿಟ್ಟು ಪೂಜೆ ಮಾಡಿದ್ದ ಅರ್ಚಕನ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಈ ಬಗ್ಗೆ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕ ಮಹೇಶ್ವರಯ್ಯ ಕ್ಷಮೆಯಾಚಿಸಿದ್ದಾರೆ.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಕತ್ತಿಗೆ ಗ್ರಾಮದಲ್ಲಿ ಅರ್ಚಕ ಮಹೇಶ್ವರಯ್ಯ ಆಂಜನೇಯ ಸ್ವಾಮಿ ಮೂರ್ತಿಯ ಮೇಲೆ ಕಾಲಿಟ್ಟು ಪೂಜೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಜೊತೆಗೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ನನ್ನಿಂದ ತಪ್ಪಾಗಿದೆ ಎಂದು ಅರ್ಚಕ ಮಹೇಶ್ವರಯ್ಯ ಕ್ಷಮೆಯಾಚಿಸಿದ್ದಾರೆ.
ಇದಲ್ಲದೆ ಈ ಹಿಂದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳ್ಳೂರ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ದೇವರ ಮೂರ್ತಿ ಮೇಲೆ ಕಾಲಿಟ್ಟು ಪೂಜೆ ಮಾಡಿದ್ದರಂತೆ. ಅದೊಂದು ಸಂಪ್ರದಾಯ ಎಂದು ಆಂಜನೇಯ ದೇವರ ಮೇಲೆ ಕಾಲಿಟ್ಟು ಪೂಜೆ ಮಾಡಿದ್ದೆ. ನನ್ನಿಂದ ತಪ್ಪಾಗಿದೆ. ನನ್ನನ್ನು ಕ್ಷಮಿಸಿ ಎಂದು ಅರ್ಚಕ ಮಹೇಶ್ವರಯ್ಯ ಕೇಳಿಕೊಂಡಿದ್ದಾರೆ.
ಇದನ್ನೂ ಓದಿ : ದೀಪಾವಳಿಯಂದು ಮಾತ್ರ ದರ್ಶನ ನೀಡುವ ದೇವಿರಮ್ಮ.. ಮಲ್ಲೇನಹಳ್ಳಿಗೆ ಹರಿದುಬಂದ ಭಕ್ತಸಾಗರ