ETV Bharat / state

ಪೊಲೀಸರ ಭರ್ಜರಿ ಬೇಟೆ : ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ, ಹಣ ವಶಕ್ಕೆ - ಹರಿಹರದಲ್ಲಿ ಕಳವು ಮಾಡಿದ ಪ್ರಕರಣ ಬೆನ್ನತ್ತಿದ ಪೊಲೀಸರು

ದಾವಣಗೆರೆ ಜಿಲ್ಲೆಯ ಹರಿಹರ ನಗರ ಪೊಲೀಸ್ ಠಾಣೆಯ ಪೊಲೀಸರು ಮಹಾರಾಷ್ಟ್ರ ಮೂಲದ ಮೂರು ಜನರ ಗ್ಯಾಂಗ್​ವೊಂದನ್ನು ಜೈಲಿಗಟ್ಟಿದ್ದಾರೆ. ಮನೆ ಕಳ್ಳತನ‌ದಂತಹ ಹತ್ತು ಪ್ರಕರಣಗಳಲ್ಲಿ ಇವರು ಬೇಕಾಗಿದ್ದರು. ಬಂಧಿತರಿಂದ ಅಪಾರ ಮೌಲ್ಯದ ಚಿನ್ನಾಭರಣ, ಬೆಳ್ಳಿ, ಹಣವನ್ನು ವಶಕ್ಕೆ ಪಡೆಯಲಾಗಿದೆ..

Cops chasing a stolen case in Harihara
ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ, ಹಣ ವಶಕ್ಕೆ
author img

By

Published : Jan 28, 2022, 7:40 PM IST

Updated : Jan 28, 2022, 7:58 PM IST

ದಾವಣಗೆರೆ : ಜಿಲ್ಲೆಯ ಹರಿಹರ ನಗರ ಪೊಲೀಸ್ ಠಾಣೆಯ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ, ಹಣವನ್ನು ವಶಕ್ಕೆ ಪಡೆದು ಮಹಾರಾಷ್ಟ್ರ ಮೂಲದ ಗ್ಯಾಂಗ್​​ವೊಂದರ ಹೆಡೆಮುರಿ ಕಟ್ಟಿದ್ದಾರೆ.

ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ, ಹಣ ವಶಕ್ಕೆ ಪಡೆದ ಪೊಲೀಸರು

ರಾಜ್ಯದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ‌ದಂತಹ ಹತ್ತು ಪ್ರಕರಣಗಳಲ್ಲಿ ಬೇಕಾಗಿದ್ದ, ಖದೀಮರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.ಮಹಾರಾಷ್ಟ್ರ ಮೂಲದ ಮೂರು ಜನರ ಗ್ಯಾಂಗ್ ಪೊಲೀಸರಿಗೆ ಶರಣಾಗಿದ್ದು, ಆರೋಪಿಗಳಿಂದ 22, 92,000 ಮೌಲ್ಯದ ಸ್ವತ್ತು ಹಾಗೂ ಒಂದು ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ನಗರ ಠಾಣೆ ಪೊಲೀಸರ ಈ ಸಾಹಸಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಡಾ.ನೀರಜ್ ಅವರ ಫಾರ್ಮ್ ಹೌಸ್‌ನಲ್ಲಿಂದು ಸಂಜೆಯೊಳಗೆ ಸೌಂದರ್ಯ ಅಂತ್ಯಕ್ರಿಯೆ

ನಿಪ್ಪಾಣಿ, ಸಂಕೇಶ್ವರ, ಖಾನಾಪುರ, ಹಾವೇರಿ ರಾಣಿಬೆನ್ನೂರು ಹಾಗೂ ಹರಿಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಒಟ್ಟು 10 ಮನೆಗಳ್ಳತನ ಪ್ರಕರಣದಲ್ಲಿ ಈ ಮಹಾರಾಷ್ಟ್ರ ಮೂಲದ ಮೂರು ಜನರ ಗ್ಯಾಂಗ್ ಭಾಗಿಯಾಗಿತ್ತು.‌ 16,84,00 ಮೌಲ್ಯದ 421 ಗ್ರಾಂ ಬಂಗಾರದ ಆಭರಣ, 2,16,000 ಮೌಲ್ಯದ 3,600 ಗ್ರಾಂ ಬೆಳ್ಳಿ ಆಭರಣಗಳು, ಒಂದು ಲಕ್ಷ ನಗದು ಹಾಗೂ ಕಾರು ವಶಕ್ಕೆ ಪಡೆದು ಖದೀಮರನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

ಹರಿಹರದಲ್ಲಿ ಕಳವು ಮಾಡಿದ ಪ್ರಕರಣ ಬೆನ್ನತ್ತಿದ ಪೊಲೀಸರು : ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಮನೆ ಕಳ್ಳತನ ಮಾಡಿದ ಪ್ರಕರಣವನ್ನು ಬೆನ್ನತ್ತಿದ ಪೊಲೀಸರಿಗೆ ಈ ಮಹಾರಾಷ್ಟ್ರ ಗ್ಯಾಂಗ್ ಪತ್ತೆಯಾಗಿದೆ. ಮಹಾರಾಷ್ಟ್ರದ ಖದೀಮರನ್ನು ಬಂಧಿಸುವಲ್ಲಿ ಹರಿಹರ ಪೊಲೀಸರು ಯಶಸ್ವಿಯಾಗಿದ್ದಾರೆ. ‌ಇವರನ್ನು ಬಂಧಿಸಿ ಕರೆತಂದ ಬೆನ್ನಲ್ಲೇ ಹರಿಹರ ನಗರ ಠಾಣೆ ಪೊಲೀಸರನ್ನು ಎಸ್ ಪಿ ಸಿಬಿ ರಿಷ್ಯಂತ್ ಅಭಿನಂದಿಸಿದರು. ಆರೋಪಿಗಳ ಹೆಸರು ಹೇಳುವಂತಿಲ್ಲ ಎಂದು ಹೆಸರು ಹೇಳಲು ಎಸ್​ಪಿ ನಿರಾಕರಿಸಿದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 28, 2022, 7:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.