ದಾವಣಗೆರೆ: ಪಿಎಫ್ಐ ಮುಖಂಡ ಇಮಾದುದ್ದೀನ್ನನ್ನು ಎನ್ಐಎ ವಶಕ್ಕೆ ಪಡೆದಿದೆ. ಇದರ ಬಗ್ಗೆ ಅವರ ಸಹೋದರ ಮಹಮ್ಮದ್ ಸಾದ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದಾರೆ.
ಏಕಾಏಕಿ ಬೆಳಗಿನ ಜಾವ 4 ಗಂಟೆಗೆ ಎನ್ಐಎ ಅಧಿಕಾರಿಗಳು ಮನೆಗೆ ಬಂದರು. ಯಾವುದೇ ವಾರಂಟ್ ನೀಡದೇ ನಮ್ಮ ಅಣ್ಣನನ್ನು ಕರೆದುಕೊಂಡು ಹೋಗಿದ್ದಾರೆ. ಮನೆಯ ತಪಾಸಣೆ ನಡೆಸಿದ್ದಾರೆ. ಮೊಬೈಲ್, ಲ್ಯಾಪ್ ಟಾಪ್, ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ಹೋಗಿದ್ದಾರೆ. ಮನೆಯಲ್ಲಿರುವ ಕಬೋರ್ಡ್, ಬಾತ್ ರೂಂಗಳನ್ನು ಚೆಕ್ ಮಾಡಿದ್ದಾರೆ.
ನಮ್ಮ ಪೂರ್ವಜರ ಸ್ವಾತಂತ್ರ್ಯ ಹೋರಾಟಗಾರರು. ಇಂತಹ ಕುಟುಂಬದಿಂದ ಬಂದವರು ನಾವು, ಯಾವುದೇ ತಪ್ಪು ಮಾಡಿಲ್ಲ. ನಮ್ಮ ಅಣ್ಣ ಪಿಎಫ್ಐ ಸಂಘಟನೆಯಲ್ಲಿ ಸಾಕಷ್ಟು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಯಾವ ಕಾರಣಕ್ಕೆ ಈ ರೀತಿ ಕರೆದೊಯ್ದಿದ್ದಾರೆ, ಬಹಳ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಶಂಕಿತ ಉಗ್ರರ ಜೊತೆ ನಂಟಿದೆ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ದಾವಣಗೆರೆ, ಹರಿಹರದಲ್ಲೂ ಎನ್ಐಎ ದಾಳಿ: ಇಬ್ಬರ ವಿಚಾರಣೆ
ಅದು ಮಿಸ್ಟೇಕ್ ಆಗಿ ಇವರ ಹೆಸರು ಬಂದಿದೆ ಎಂದು ಗೊತ್ತಾಗಿದೆ. ಈ ದೇಶದ ಬಗ್ಗೆ ನಮಗೂ ಅಭಿಮಾನ ಇದೆ. ನಮ್ಮ ಅಣ್ಣನಿಗೂ ಅವರು ಮಾಡುತ್ತಿರುವ ಆರೋಪಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.