ದಾವಣಗೆರೆ: ಮದ್ಯ ಮಾರಾಟ ನಾಳೆಯಿಂದ ಆರಂಭವಾಗಲಿದ್ದು ಬಾರ್ಗಳು, ಎಂಎಸ್ಐಎಲ್ ಮುಂದೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ನಗರದ ವಿವಿಧೆಡೆ ಇರುವ ಬಾರ್ಗಳಲ್ಲಿ ನಾಳೆ ಬೆಳಿಗ್ಗೆ 9ರಿಂದ ಸಂಜೆ 7 ಗಂಟೆಯವರೆಗೆ ‘ಎಣ್ಣೆ’ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಈಗಿನಿಂದಲೇ ಮದ್ಯಪ್ರಿಯರು ಸಜ್ಜಾಗುತ್ತಿದ್ದಾರೆ.
ಮದ್ಯದಂಗಡಿಗಳ ಮುಂದೆ ಬೊಂಬು ಕಟ್ಟಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಮಾಡಲಾಗಿದೆ. ಲಾಕ್ಡೌನ್ ಬಳಿಕ ಮದ್ಯ ಸಿಗದೇ ಕಂಗಾಲಾಗಿದ್ದ ಎಣ್ಣೆಪ್ರಿಯರು ಜಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ.