ದಾವಣಗೆರೆ : ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ (Devarabelakere dam) ಪಿಕಪ್ ಡ್ಯಾಂನಲ್ಲಿ ನೀರಿನ ಹರಿವು ಹೆಚ್ಚಾಗಿದ್ದರೂ ಲೆಕ್ಕಿಸದ ಯುವಕರ ತಂಡ ಮೀನು ಹಿಡಿದು( Fishing in Harihara) ಅವುಗಳನ್ನ ಮಾರಾಟಕ್ಕೆ ಮುಂದಾಗಿರೋದು ಕಂಡು ಬಂದಿದೆ.
ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಬೆನ್ನಲ್ಲೇ ಡ್ಯಾಂಗೆ ಹೆಚ್ಚು ನೀರು ಹರಿದು ಬರುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಯುವಕರು ಡ್ಯಾಂನ ಕ್ರಸ್ಟ್ ಗೇಟ್ ಬಳಿ ಇಳಿದು ಮೀನು ಹಿಡಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ನೀರಿಗೆ ಇಳಿಯದಂತೆ ಈಗಾಗಲೇ ಪೊಲೀಸರು ಎಚ್ಚರಿಸಿದ್ದಾರೆ. ಇದಕ್ಕೂ ಕ್ಯಾರೇ ಎನ್ನದ ಯುವಕರು ಮಾತ್ರ ಮೀನು ಹಿಡಿಯಲು ಪೈಪೋಟಿಗಿಳಿದಿದ್ದಾರೆ.
ಓದಿ: ಬಿಡಿಎಸ್ ವಿದ್ಯಾರ್ಥಿನಿ ಪ್ರವೇಶಾತಿ: ಅನುಮೋದಿಸುವಂತೆ ಆರ್‌ಜಿಯುಹೆಚ್‌ಎಸ್ ಗೆ ಹೈಕೋರ್ಟ್ ಆದೇಶ