ದಾವಣಗೆರೆ: ಮೂರನೇ ಅಲೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸಿರುವಬ ಜಿಲ್ಲಾಡಳಿತ, ದೇವಸ್ಥಾನಗಳಲ್ಲಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಈಗಾಗಲೇ ಅದೇಶ ಹೊರಡಿಸಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಅಮ್ಮನ ಗುಡ್ಡ, ಜಗಳೂರಿನ ಮಡ್ರಳ್ಳಿ ಚೌಡೇಶ್ವರಿ ದೇವಾಲಯಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಇನ್ನು ಅಮ್ಮನ ಗುಡ್ಡದ ಕುಕ್ಕವಾಡೇಶ್ವರಿ ದೇವಸ್ಥಾನದ ಬಳಿ ಜನಸಂದಣಿ ಹೆಚ್ಚಾಗಿ ಕಂಡು ಬಂದಿತ್ತು. ಅಷ್ಟೇ ಅಲ್ಲದೆ, ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಪಾಡದೆ ಇದ್ದ ಜನರಿಗೆ ತಾಲೂಕು ಆಡಳಿತ ಬಿಸಿ ಮುಟ್ಟಿಸಿದೆ.
ಬೇರೆ ರಾಜ್ಯ, ಹೊರ ಜಿಲ್ಲೆಗಳಿಂದ ಬಂದು ಅಮ್ಮನ ದರ್ಶನ ಪಡೆದು ದೇವಸ್ಥಾನದ ಅವರಣದಲ್ಲಿ ಬಾಡೂಟ ಮಾಡುತ್ತಿದ್ದ ಭಕ್ತರನ್ನು ತಹಶೀಲ್ದಾರ್ ಪುಟ್ಟರಾಜ್ ಗೌಡ ವಾಪಸ್ ಕಳುಹಿಸಿದ್ದಾರೆ. ಖಾಸಗಿ ವಾಹನಗಳಲ್ಲಿ ಆಗಮಿಸಿರುವ ಭಕ್ತರಿಗೆ ಕೇವಲ ದರ್ಶನ ಮಾಡಿಕೊಂಡು ಹೋಗುವಂತೆ ತಹಶೀಲ್ದಾರ್ ಮನವಿ ಮಾಡಿದರು.