ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೆ ಆಕ್ಸಿಜನ್ ಸಮಸ್ಯೆ ತಲೆದೋರಿದೆ. 45 ಜನರು ಆಕ್ಸಿಜನ್ ಬೆಡ್ನಲ್ಲಿದ್ದು, ಕೇವಲ ಒಂದೂವರೆ ಗಂಟೆಗೆ ಅಗುವಷ್ಟು ಮಾತ್ರ ಆಕ್ಸಿಜನ್ ಬಾಕಿ ಇದೆ. ಆಕ್ಸಿಜನ್ ಅಭಾವ ಬೆನ್ನಲ್ಲೇ ಅಧಿಕಾರಿಗಳೊಂದಿಗೆ ಶಾಸಕ ರೇಣುಕಾಚಾರ್ಯ ಆಕ್ಸಿಜನ್ ತರಲು ಮತ್ತೆ ಹರಿಹರದ ದಿ ಸದರನ್ ಗ್ಯಾಸ್ ಏಜೆಸ್ಸಿಯತ್ತ ಹೊರಟಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ತಲೆದೋರಿದ ಆಕ್ಸಿಜನ್ ಸಮಸ್ಯೆಗೆ ಖುದ್ದು ಆಕ್ಸಿಜನ್ ತಂದು ಶಾಸಕರು 20 ಜನರ ಪ್ರಾಣ ಕಾಪಾಡಿದ್ದರು. ಇಂದು ಮತ್ತೆ ಆಕ್ಸಿಜನ್ ಸಮಸ್ಯೆ ಉದ್ಭವಿಸಿದ್ದು, ಶಾಸಕ ಎಂ.ಪಿ.ರೇಣುಕಾಚಾರ್ಯ ಅಧಿಕಾರಿಗಳೊಂದಿಗಿನ ಮೀಟಿಂಗ್ ಮೊಟಕುಗೊಳಿಸಿ ಹರಿಹರದ ಕಡೆ ಆಕ್ಸಿಜನ್ಗಾಗಿ ಹೊರಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ 20,000ಕ್ಕೂ ಹೆಚ್ಚು ವಾಹನಗಳು ಸೀಜ್!
ಹೇಗಾದರೂ ಮಾಡಿ ಆಕ್ಸಿಜನ್ ತಂದು ಸೋಂಕಿತರ ಪ್ರಾಣ ಉಳಿಸಲು ಶಾಸಕರು ಪಣ ತೊಟ್ಟಿದ್ದು, ಪ್ರಶಂಸೆಗೆ ಪಾತ್ರವಾಗಿದೆ.