ದಾವಣಗೆರೆ: 12 ಚುನಾವಣೆಯಲ್ಲಿ ನಾನು ಗೆದ್ದಿದ್ದೆ, ಆದರೆ ದುರದೃಷ್ಟಕರ ಎಂದರೆ ನನ್ನ ಕೊನೆಯ ಚುನಾವಣೆಯಲ್ಲಿ ಸೋತಿದ್ದೇನೆ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಆರ್ಎಸ್ಎಸ್, ಹಿಂದೂ ಸಂಘಟನೆಗಳು, ಪ್ರಧಾನಿ ಸೇರಿದಂತೆ ಎಲ್ಲರೂ ಷಡ್ಯಂತ್ರ ನಡೆಸಿ ನನ್ನನ್ನು ಸೋಲಿಸಿದ್ದಾರೆ. ಈಗ ನಮ್ಮ ಪಕ್ಷದವರು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.
ಜನರ ಪಕ್ಷದ ನಿರೀಕ್ಷೆ ಪ್ರಕಾರ ಕೊರತೆಗಳನ್ನು ನೀಗಿಸುವ ಕೆಲಸ ಮಾಡುತ್ತೇನೆ ಎಂದು ದಾವಣಗೆರೆಯಲ್ಲಿ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.
ಮೋದಿ ಪೆಟ್ರೋಲ್ ಬೆಲೆ ಏರಿಗೆ ಮಾಡಿ ಕಾಂಗ್ರೆಸ್ ನವರಿಗೆ ಬೈತಾರೆ:
ನಾವು ಪೆಟ್ರೋಲ್ ಬೆಲೆ 75 , ಡೀಸೆಲ್‌ನ ಬೆಲೆ 65 ರ ಮೇಲೆ ಹೋಗಿರಲಿಲ್ಲ. ಡಿಸೇಲ್ ಬಹಳಷ್ಟು ಬಳಕೆ ಮಾಡೋದೇ ರೈತರು, ರೈತರ ಪರವಾಗಿದ್ದೇವೆ ಎಂದು ಹೇಳಿ ಬೆಲೆ ಏರಿಕೆ ಮಾಡುತ್ತಿದ್ದಾರೆ. 21 ಲಕ್ಷ ಕೋಟಿ ರೂಪಾಯಿ ಲಾಭ ಗಳಿಗೆ ಪ್ರತಿ ವರ್ಷ ಮಾಡಿದ್ದಾರೆ. ದಿನೇದಿನೇ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ.
ಪಾಂಡಿಚೇರಿ ಯಲ್ಲಿ ನಾಲ್ಕು ಜನರನ್ನು ಖರೀದಿ ಮಾಡಿ ಹೆದರಿಸಿ ಅಧಿಕಾರ ಹಿಡಿದರು. ಗೋವಾ, ಮಣಿಪುರ್, ಕರ್ನಾಟಕ ಸೇರಿದಂತೆ ಹಲವು ಕಡೆ ಮೇಜಾರಿಟಿ ಇದ್ದರೂ ಸರ್ಕಾರ ಕೆಡವಿ ಅಧಿಕಾರಕ್ಕೆ ಬಂದರು ಎಂದು ವ್ಯಂಗ್ಯ ಮಾಡಿದರು.