ದಾವಣಗೆರೆ: ಜಿಲ್ಲೆಯಲ್ಲಿಂದು ಒಂದು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 10 ಮಂದಿ ಗುಣಮುಖರಾಗಿದ್ದು, ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ರೋಗಿ-10986 14 ವರ್ಷದ ಯುವಕ, ರೋಗಿ-10388 ರ ಸಂಪರ್ಕಿತ ಹಿನ್ನೆಲೆಯನ್ನು ಹೊಂದಿದ್ದಾರೆ. ರೋಗಿ-7575, ರೋಗಿ-7803, ರೋಗಿ-8064, ರೋಗಿ -8065, ರೋಗಿ-8070, ರೋಗಿ-8071, ರೋಗಿ-8072, ರೋಗಿ-8073, ರೋಗಿ-8074, ರೋಗಿ-8075 ಒಟ್ಟು ಹತ್ತು ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಒಟ್ಟು 283 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 237 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 7 ಮಂದಿ ಸಾವನ್ನಪ್ಪಿದ್ದು, ಪ್ರಸ್ತುತ 39 ಸಕ್ರಿಯ ಪ್ರಕರಣಗಳಿವೆ.