ದಾವಣಗೆರೆ: ಕೊರೊನಾ ಪ್ರಕರಣ ಹೆಚ್ಚಳವಾದ ಕಾರಣ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿಲ್ಲ.
ಬೆಣ್ಣೆ ನಗರಿಯಲ್ಲಿ ನಿನ್ನೆ ಒಂದೇ ದಿನ 21 ಕೊರೊನಾ ಸೋಂಕಿತರ ಪ್ರಕರಣ ಪತ್ತೆಯಾಗಿದ್ದು ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನೀಡಿದ್ದ ಅನುಮತಿ ರದ್ದುಗೊಳಿಸಲಾಗಿದೆ. ನಗರ ಕೆಂಪು ವಲಯಕ್ಕೆ ಹತ್ತಿರವಾಗುತ್ತಿರುವ ಕಾರಣ ಎಣ್ಣೆ ಸಿಗದೆ ನಿರಾಸೆಗೊಂಡರು.
ಪಾಲಿಕೆ ವ್ಯಾಪ್ತಿ ಹೊರತುಪಡಿಸಿದಂತೆ ಜಿಲ್ಲೆಯಾದ್ಯಂತ ಮದ್ಯ ಮಾರಾಟಕ್ಕೆ ಅವಕಾಶವಿದೆ. ನೂಕುನುಗ್ಗಲು ತಡೆಗೆ ಬ್ಯಾರಿಕೇಡ್ ವ್ಯವಸ್ಥೆ ಮಾಡಿ ಖರೀದಿಗೆ ಏಕಮುಖ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲೆಯ ಮಾಯಕೊಂಡ, ಹರಿಹರ, ಹೊನ್ನಾಳಿ, ನ್ಯಾಮತಿ ಚನ್ನಗಿರಿ, ಜಗಳೂರು ತಾಲೂಕುಗಳಲ್ಲಿ ಮಾರಾಟ ಜೋರಾಗಿದೆ.