ETV Bharat / state

ಬೆಡ್ ಬ್ಲಾಕಿಂಗ್, ರೆಮ್​​ಡಿಸಿವಿರ್ ಅಕ್ರಮ ಮಾರಾಟ ತಡೆಯಲು ದಾವಣಗೆರೆ ಜಿಲ್ಲಾಡಳಿತ ಕ್ರಮ

author img

By

Published : May 30, 2021, 7:17 AM IST

ಕೊರೊನಾ ಸೋಂಕಿತರ ಜೀವ ಉಳಿಸಲು ಆಕ್ಸಿಜನ್​ ಬೆಡ್ ಪ್ರಮುಖವಾಗಿ ಅವಶ್ಯವಿರುತ್ತದೆ. ಇಂತಹ ಕರಾಳ ದಿನಗಳಲ್ಲೂ ಬೆಡ್ ಬ್ಲಾಕಿಂಗ್ ದಂಧೆ ನಡೆಸುವವರಿದ್ದಾರೆ. ಜತೆಗೆ ಕಾಳಸಂತೆಯಲ್ಲಿ ರೆಮ್​​ಡಿಸಿವಿರ್ ಇಂಜೆಕ್ಷನ್ ಮಾರುವವರ ಸಂಖ್ಯೆಯೂ ಕಡಿಮೆಯಿಲ್ಲ. ಇಂತಹ ಪ್ರಕರಣಗಳು ನಡೆಯದಂತೆ ಜಿಲ್ಲಾಡಳಿತ ಕ್ರಮ ವಹಿಸಿದೆ.

davanagere hospital
ದಾವಣಗೆರೆ ಆಸ್ಪತ್ರೆ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಪರಿಣಾಮ, ಬೆಡ್​ಗಳ ಸಮಸ್ಯೆ ಕೂಡ ತಲೆ‌ದೋರಿದೆ. ಪ್ರತಿ ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದು, ಮಧ್ಯವರ್ತಿಗಳು ಹಸ್ತಕ್ಷೇಪ ಮಾಡದಂತೆ ಜಿಲ್ಲಾಡಳಿತ ನಿಗಾ ವಹಿಸಿದೆ.

ಆಸ್ಪತ್ರೆ ವ್ಯವಸ್ಥೆ ಕುರಿತು ಡಿಹೆಚ್​ಒ, ಡಿಸಿ ಪ್ರತಿಕ್ರಿಯೆ

ಸೋಂಕಿತರ ಜೀವ ಉಳಿಸಲು ಪ್ರಮುಖ ಪಾತ್ರವಹಿಸುವ ಆಕ್ಸಿಜನ್​​ ಬೆಡ್ ಹಾಗು ಐಸಿಯು ಸೇರಿದಂತೆ ರೆಮ್​​ಡಿಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಆಗದಂತೆಯೂ ಕ್ರಮ ವಹಿಸಲಾಗಿದೆ. ಬೆಡ್​​ಗಳನ್ನು ಕೊಡಿಸುವ ಕೆಲಸ ನಡೆಯದಂತೆ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಸಾಫ್ಟ್‌ವೇರ್ ಜಾರಿಗೆ ತರಲಿದ್ದು, ಈ ಮೂಲಕವೇ ಬೆಡ್ ಪಡೆಯುವ ಸೌಕರ್ಯ ಕಲ್ಪಿಸಲಾಗುತ್ತದೆ. ಕೊರೊನಾ ಎರಡನೇ ಅಲೆ ಆರಂಭದಿಂದಲೂ ಈವರೆಗೂ ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪ ಕಂಡುಬಂದಿಲ್ಲ ಎಂದು ಡಿಹೆಚ್​ಒ ಡಾ. ನಾಗರಾಜ್ ಹೇಳುತ್ತಾರೆ.

ಇದನ್ನೂ ಓದಿ: ಬಂಟ್ವಾಳದ ಗ್ರಾಮದಲ್ಲಿ 29 ಮಂದಿಗೆ ಕೊರೊನಾ: ಕೋವಿಡ್​ ಕೇರ್​ ಸೆಂಟರ್​​ಗೆ ಶಿಫ್ಟ್​​

ತಿಂಗಳ ಹಿಂದೆ ರೆಮ್​ಡಿಸಿವಿರ್ ಇಂಜೆಕ್ಷನ್​​ಗೆ ಬಹುಬೇಡಿಕೆ ಇರುವ ಸಂದರ್ಭದಲ್ಲೇ ಅಭಾವ ಎದುರಾಗಿತ್ತು‌. ಇದನ್ನೇ ಬಂಡವಾಳ ಮಾಡಿಕೊಂಡ ಜಿಲ್ಲಾಸ್ಪತ್ರೆಯ ಇಬ್ಬರು ಸಿಬ್ಬಂದಿ ರೆಮ್​ಡಿಸಿವಿರ್ ಇಂಜೆಕ್ಷನ್ ಕದ್ದು ಮಾರಾಟ ಮಾಡಲು ಯತ್ನಿಸಿದ್ದು ಬೆಳಕಿಗೆ ಬಂದ ಬೆನ್ನಲ್ಲೇ ಹಿರಿಯ ಫಾರ್ಮಸಿ ಮಂಜುನಾಥ್ ರಾವ್ ಹಾಗು ಡಿ ಗ್ರೂಪ್ ನೌಕರ ಗಣೇಶ್ ಅವರನ್ನು ಬಂಧಿಸಿ 10 ರೆಮ್​ಡಿಸಿವಿರ್ ವಶಕ್ಕೆ ಪಡೆಯಲಾಗಿತ್ತು. ಈ ಜಾಲದ ಹಿಂದೆ ಇರುವವರನ್ನು ಬಂಧಿಸಲು ಪೊಲೀಸ್​ ಇಲಾಖೆ ತನಿಖೆ ಮುಂದುವರೆಸಿದೆ ಎಂದು ಡಿಸಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.