ETV Bharat / state

ನಕಲಿ ಗೋಲ್ಡ್ ಗ್ಯಾಂಗ್​ನಿಂದ ಮೋಸ ಹೋದಿರಾ ಜೋಕೆ.. ವಂಚಕರ ಬಗ್ಗೆ ದಾವಣಗೆರೆ ಎಸ್​ಪಿ ಮಾಹಿತಿ

ಎಲ್ಲಿ ತನಕ ಮೋಸ ಹೋಗುವವರು ಇರುತ್ತಾರೆಯೋ ಅಲ್ಲಿಯ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಇದಕ್ಕೆ ಇನ್ನೊಂದು ಹೆಸರೇ ನಕಲಿ ಗೋಲ್ಡ್ ದಂಧೆ. ಸುಮ್ನೆ ಒಂದು ಶಾಂಪಲ್​ ಕೊಟ್ಟು ವಂಚನೆ ಖೆಡ್ಡಾಕ್ಕೆ ಬೀಳಿಸುವ ಈ ಗ್ಯಾಂಗ್ ಇದೀಗ ಸಕ್ರಿಯವಾಗಿದೆ.

ನಕಲಿ ಗೋಲ್ಡ್ ಗ್ಯಾಂಗ್
ನಕಲಿ ಗೋಲ್ಡ್ ಗ್ಯಾಂಗ್
author img

By

Published : Nov 29, 2022, 5:52 PM IST

Updated : Nov 29, 2022, 7:03 PM IST

ದಾವಣಗೆರೆ: ಈ ಖದೀಮರು ಮಾಡುವುದೇ ವಂಚನೆ. ಇಂತಹ ವಂಚನೆ ಸಹಕಾರ ನೀಡಲು ಅಕ್ಕಪಕ್ಕದ ರಾಜ್ಯದಲ್ಲಿ ಒಂದಿಷ್ಟು ಜನ ಆ್ಯಕ್ಟಿವ್ ಆಗಿದ್ದಾರೆ. ಅಂದ್ರೆ ವಂಚನೆ ಕೆಲಸ ಮಾಡುವರಿಗೆಲ್ಲರಿಗೂ ಮಾಸಿಕ ಮೂವತ್ತು ಸಾವಿರ ಸಂಬಳ ಕೂಡ ನಿಗದಿಯಾಗಿದೆ. ಆಯಾ ಮಾತೃ ಭಾಷೆಯಲ್ಲಿ ಮಾತನಾಡಿ ಅವರನ್ನ ವಂಚನೆ ಜಾಲಕ್ಕೆ ಬೀಳಿಸುವುದೇ ಇವರ ಕೆಲ್ಸ. ನಕಲಿ ಗೋಲ್ಡ್ ಗ್ಯಾಂಗ್​ನ ವಿಶಿಷ್ಟವಾದ ಹೊಸ ಮಾಸ್ಟರ್ ಪ್ಲಾನ್ ಇದು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ಮಾಹಿತಿ ನೀಡಿದರು

ಎಲ್ಲಿ ತನಕ ಮೋಸ ಹೋಗುವವರು ಇರುತ್ತಾರೆಯೋ ಅಲ್ಲಿಯ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಇದಕ್ಕೆ ಇನ್ನೊಂದು ಹೆಸರೇ ನಕಲಿ ಗೋಲ್ಡ್ ದಂಧೆ. ಸುಮ್ನೆ ಒಂದು ಶಾಂಪಲ್​ ಕೊಟ್ಟು ವಂಚನೆ ಖೆಡ್ಡಾಕ್ಕೆ ಬೀಳಿಸುವ ಈ ಗ್ಯಾಂಗ್ ಸಕ್ರಿಯವಾಗಿದೆ. ತಮಿಳುನಾಡಿನಲ್ಲಿ 34, ಕೇರಳದಲ್ಲಿ 18 ಆಂಧ್ರ ಪ್ರದೇಶದಲ್ಲಿ 63 ಹಾಗೂ ಕರ್ನಾಟಕದಲ್ಲಿ 108 ಪ್ರಕರಣಗಳು ( ದಾವಣಗೆರೆಯಲ್ಲಿ 55-60 ಕೇಸ್ ದಾಖಲಾಗಿದೆ) ಸೇರಿ ಒಟ್ಟು 213 ಪ್ರಕರಣಗಳು ದಾವಣಗೆರೆ ಜಿಲ್ಲಾ ಪೊಲೀಸ್ ರೆಕಾರ್ಡ್ ನಲ್ಲಿವೆ.

ಇದಕ್ಕೆ ಹೊಸ ಸೇರ್ಪಡೆ ಅಂದ್ರೆ ಹೀಗೆ ನಕಲಿ ಚಿನ್ನ ನೀಡಿ ವಂಚನೆ ಮಾಡುವ ವ್ಯಕ್ತಿಗಳು ಈಗ ಕರ್ನಾಟಕವನ್ನ ಬಿಟ್ಟು ಬಿಟ್ಟಿದ್ದಾರೆ. ಕೇವಲ ಹೊರ ರಾಜ್ಯಗಳ ಮೇಲೆ ಕಣ್ಣಾಕ್ಕಿದ್ದಾರೆ. ಕಾರಣ ಇವರ ವಂಚನೆ ಜಾಲಕ್ಕೆ ಹೆಚ್ಚಾಗಿ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯದ ನೂರಾರು ಜನ ಚಿನ್ನದ ಆಸೆಗೆ ಬಿದ್ದು ಲಕ್ಷಾಂತರ ಹಣ ವಂಚಕರ ಕೈಗೆ ಕೊಟ್ಟು ಕೈ ಸುಟ್ಟುಕೊಳ್ಳುತ್ತಿದ್ದಾರೆ.

ಐದರಿಂದ ಹತ್ತು ಲಕ್ಷ ರೂಪಾಯಿ ವಂಚನೆ: 'ನಮ್ಮ ಮನೆ ಪಾಯಾ ತೆಗೆಯುವಾಗ ನಿಧಿ ಸಿಕ್ಕಿದೆ ಎಂದು ಮೊದಲು ಅಸಲಿ ಚಿನ್ನ ಕೊಟ್ಟು, ನಂತರ ಕುಂಕುಮದಲ್ಲಿ ನಕಲಿ ಚಿನ್ನ ಹಾಕಿ ವಂಚಿಸುತ್ತಾರೆ. ಮನೆಗೆ ಹೋಗಿ ನೋಡಿದರೆ ಎಲ್ಲ ನಕಲಿ ಚಿನ್ನದ ನಾಣ್ಯಗಳು. ಕನಿಷ್ಠ ಐದರಿಂದ ಹತ್ತು ಲಕ್ಷ ರೂಪಾಯಿ ವಂಚನೆ ಮಾಡುವುದು ಇವರ ಕೆಲ್ಸ ಎನ್ನುತ್ತಾರೆ' ಎಸ್ಪಿ ಸಿಬಿ ರಿಷ್ಯಂತ್.

ಕಾಲ್ ಮಾಡಿ ಮೋಸ ಮಾಡುವ ಜಾಲ: ಒಂದು ಸ್ಮಾಲ್ ಗ್ಯಾಂಗ್ ಚನ್ನಗಿರಿಯಲ್ಲಿ ಆಕ್ಟೀವ್ ಆಗಿದೆ. ಹೆಚ್ಚಾಗಿ ಹರಪ್ಪನಹಳ್ಳಿಯಲ್ಲಿ ಒಂದು ಲೊಕಲಿಟಿ ಕಂಪ್ಲೀಟ್​ ಇದೇ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಈಗಾಗಲೇ ಎಲ್ಲ ಕೇಸ್​ಗಳನ್ನು ಟ್ರೇಸ್​ ಹಾಕಿ ರಿಕವರಿ ಕೂಡಾ ಮಾಡಲಾಗಿದೆ. 90 ಪರ್ಸೆಂಟ್​ ಕೇಸ್​ ರಿಕವರಿ ಆಗಿದೆ. ಇತ್ತೀಚಿಗೆ ನಿಧಿ ಸಿಕ್ಕಿದೆ ಅಂತ ಕಾಲ್ ಮಾಡಿ ಮೋಸ ಮಾಡುವ ಜಾಲ ಬೆಳೆಯುತ್ತಿದೆ.

ಕರ್ನಾಟಕವನ್ನೂ ದಾಟಿ ಆಚೆಗಿನ ತಮಿಳುನಾಡಿನಲ್ಲೂ ಕಂಡುಬರುತ್ತಿದೆ. ಅದಕ್ಕಾಗಿ ಒಬ್ಬ ವ್ಯಕ್ತಿಯನ್ನು 30 ಸಾವಿರ ರೂ. ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಳ್ಳುತ್ತಿದ್ದಾರೆ. ನಕಲಿ ಚಿನ್ನದ ವಂಚನೆ ಜಾಲಕ್ಕೆ ಜನರನ್ನ ಬೀಳಿಸುವುದೇ ಇವರ ಕಾಯಕ ಎಂಬ ಆಘಾತಕಾರಿ ವಿಚಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ಬಿಚ್ಚಿಟ್ಟಿದ್ದಾರೆ.

ತಮಿಳುನಾಡು - ಆಂಧ್ರದವರಿಗೂ ಮೋಸ: ಬಾರ್ಡರ್​ಗಳ ಹೋಟೆಲ್ ಪಕ್ಕದಲ್ಲಿ ವ್ಯಕ್ತಿ ಕುಳಿತ್ತಿರುತ್ತಾನೆ. ನಂತರ ಅಲ್ಲಿಗೆ ಬರುವ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ಅವರಿಗೆ ಹೊಲದಲ್ಲಿ ಒಬ್ಬರಿಗೆ ನಿಧಿ ಸಿಕ್ಕಿದೆ ಎಂದು ನಂಬಿಸಿ ನಂತರ ನಿಧಾನವಾಗಿ ಅವರನ್ನು ಕಾಂಟಾಕ್ಟ್​ನಲ್ಲಿ ಬರುವಂತೆ ಮಾಡಿ, ಆಮೇಲೆ ಅದೇ ರೀತಿಯ ಹಳೆ ರೀತಿಯ ಗೋಲ್ಡ್​ ಕಾಯಿನ್ ನೀಡಿ ಅದನ್ನು ಬೇಕಿದ್ದರೆ ಟೆಸ್ಟ್​ ಮಾಡಿಕೊಂಡು ಬನ್ನಿ ಎಂದು ಹೇಳುವ ಪ್ರಕರಣ ಹೆಚ್ಚಾಗುತ್ತಿದೆ. ಇದೇ ರೀತಿ ತಮಿಳುನಾಡು ಹಾಗೂ ಆಂಧ್ರದವರಿಗೂ ಮೋಸ ಮಾಡಿದ್ದಾರೆ ಎಂದಿದ್ದಾರೆ.

ನಕಲಿ ಚಿನ್ನ ಕೊಟ್ಟು ವಂಚನೆ: ಇಂತಹ ಪರಿಸ್ಥಿತಿಯಲ್ಲಿ ಪ್ರಶ್ನೆ ಮಾಡಿದರೆ ಮಾರಣಾಂತಿಕ ಹಲ್ಲೆಮಾಡಿ ಓಡಿ ಹೋಗುವುದು ಇವರ ದಂಧೆ. ಹೀಗೆ ಮೊನ್ನೆ ತಾನೇ ಬೆಂಗಳೂರಿನ ಯಲಹಂಕದ ಶೇಖರ್ ಮುನಿಸ್ವಾಮಿ ಕೂದಲೆಳೆಯಲ್ಲಿ ಬಚಾವ್ ಆಗಿದ್ದಾರೆ. ಹೀಗೆ ನಕಲಿ ಚಿನ್ನ ಕೊಟ್ಟು ವಂಚಿಸುತ್ತಾರೆ. ಇಂತಹ ಪ್ರಕರಣಗಳು ನಡೆಯುವುದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಮಾತ್ರ.

ಸಾಮಾಜಿಕ ಜಾಲತಾಣದಲ್ಲಿಯೂ ಜಾಗೃತಿ: ಈಗಾಗಲೇ ಈ ಬಗ್ಗೆ ನಾವು ಜಾಗೃತಿ ಮೂಡಿಸಿದ್ದೇವೆ. ಫೇಸ್​ಬುಕ್​ನಲ್ಲಿ, ಟ್ವಿಟ್ಟರ್ ಅಕೌಂಟ್​ನಲ್ಲಿ ಮಾಹಿತಿ ಹಂಚಿದ್ದೇವೆ. ಮುಖ್ಯವಾಗಿ ಜನ ಈ ರೀತಿಯ ನಿಧಿ ಸಿಕ್ಕಿದೆ ಎಂಬ ಮೋಸದಿಂದ ಹೊರಬರಲಿ ಎಂಬುದು ನಮ್ಮ ಉದ್ದೇಶ ಅಂತಾರೆ ಸಿ ಬಿ ರಿಷ್ಯಂತ್.

ನಕಲಿ ಚಿನ್ನದ ವಂಚನೆಗೆ ಇಡಿ ದೇಶದಲ್ಲಿ ಈ ಸ್ಥಳಗಳು ಖ್ಯಾತಿ ಗಳಿಸಿವೆ. ಈಗ ಮತ್ತೊಬ್ಬರಿಗೆ ಸಂಬಳ ಕೊಟ್ಟು ವಂಚನೆ ಮಾಡಿಸುತ್ತಿರುವುದು ವಿಶೇಷ. ಇನ್ನಾದರೂ ಯಾರಾದರೂ ಕಡಿಮೆ ಬೆಲೆಗೆ ಬಂಗಾರ ಸಿಗುತ್ತೆ ಎಂದರೆ ಎಚ್ಚರದಿಂದ ಇರಿ ಎಂದು ಪೊಲೀಸರು ಮನವಿ ಮಾಡಿದರೂ ಜನರು ಮಾತ್ರ ದುರಾಸೆಗೆ ಬಿದ್ದು ತಮ್ಮ‌ ಹಣ ಕಳೆದುಕೊಳ್ಳುವ ಪ್ರಕರಣಗಳೇ ಹೆಚ್ಚಾಗುತ್ತಿವೆ.

ಓದಿ: ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡಮಾನ ಇಟ್ಟು ವಂಚನೆ: ಮೂವರ ಗ್ಯಾಂಗ್​ ವಶಕ್ಕೆ

Last Updated : Nov 29, 2022, 7:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.