ETV Bharat / state

ದಾವಣಗೆರೆ: ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ - davangere real estate tycoon murder news

ದಾವಣಗೆರೆ ನಗರದ ಬಸವರಾಜ ಪೇಟೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

real estate tycoon
ರಿಯಲ್ ಎಸ್ಟೇಟ್ ಉದ್ಯಮಿ
author img

By

Published : Aug 12, 2021, 7:04 AM IST

ದಾವಣಗೆರೆ: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವ ಘಟನೆ ದಾವಣಗೆರೆ ನಗರದ ಬಸವರಾಜ ಪೇಟೆಯಲ್ಲಿ ನಡೆದಿದೆ.

ಬಸವರಾಜ್ ಪೇಟೆಯ ಸೀಮೆಎಣ್ಣೆ ಪರಮೇಶ್( 45) ಕೊಲೆಯಾದ ವ್ಯಕ್ತಿ. ಇವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಆಟೋದಲ್ಲಿ ಬಂದ ನಾಲ್ವರು ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಪರಮೇಶ್ ಅವರನ್ನು ಅವರ ಮನೆ ಸಮೀಪವೇ ಕೊಲೆ ಮಾಡಲಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಗಾಂಧಿನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್​ಪಿ ರಿಷ್ಯಂತ್ ಭೇಟಿ ನೀಡಿ ಮಾಹಿತಿ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.