ETV Bharat / state

ಕೇಸ್ ದಾಖಲಿಸಿರುವ ಕಾಂಗ್ರೆಸ್ಸಿಗರಿಗೆ ನನ್ನ ಮೇಲೆ ಪ್ರೀತಿ.. ರೇಣುಕಾಚಾರ್ಯ ವ್ಯಂಗ್ಯ - ದಾವಣಗೆರೆ ಸುದ್ದಿ

ನನ್ನನ್ನು ಜೈಲಿಗೆ ಕಳುಹಿಸಿದರೆ ಪರಿಹಾರ ಸಿಗುತ್ತೆ ಎಂದುಕೊಂಡಿದ್ದರೆ ಅದು ಕಾಂಗ್ರೆಸ್ಸಿಗರ ಭ್ರಮೆ ಎಂದು ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.

Renukacharya
ರೇಣುಕಾಚಾರ್ಯ
author img

By

Published : Apr 13, 2020, 8:10 PM IST

ದಾವಣಗೆರೆ: ಹೋರಾಟದ ಮೂಲಕವೇ ನಾನು ಶಾಸಕನಾದವನು. ಕಾಂಗ್ರೆಸ್‌ನವರಿಗೆ ನನ್ನನ್ನು ಜೈಲಿಗೆ ಕಳುಹಿಸಬೇಕೆಂಬ ಆಸೆ ಇದೆ. ಹಾಗಾಗಿ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದು ನನ್ನ ಮೇಲೆ ಕಾಂಗ್ರೆಸ್ಸಿಗರಿಗೆ ಇರುವ ಪ್ರೀತಿ ತೋರಿಸುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ವ್ಯಂಗ್ಯವಾಡಿದರು.

ತಮ್ಮ ವಿರುದ್ಧದ ಕೇಸ್‌ ಕುರಿತಂತೆ ಶಾಸಕ ಎಂ ಪಿ ರೇಣುಕಾಚಾರ್ಯ ಪ್ರತಿಕ್ರಿಯೆ

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, 2003ರಿಂದ ಒಂದು ವರ್ಷ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದಾಗ 14 ದಿನ ಜೈಲುವಾಸ ಅನುಭವಿಸಿದ್ದೆ. ಮತ್ತೊಂದು ಹೋರಾಟದಲ್ಲಿಯೂ ಜೈಲು ಸೇರಿದ್ದೆ.‌ ಹೋರಾಟ, ಕೇಸ್, ಗಲಾಟೆ, ಗದ್ದಲ ಹೊಸದೇನಲ್ಲ. ಆದರೆ, ನಾನು ದೇಶದ್ರೋಹಿಯಾಗಿ ಹಾಗೂ ಜನರ ವಿರುದ್ಧ ಮಾತನಾಡಿಲ್ಲ ಎಂದು ಹೇಳಿದರು.

ನಿರಂತರವಾಗಿ ನನ್ನ ಮೇಲೆ ಕೇಸ್ ಹಾಕಿದ್ರೂ ಕುಗ್ಗುವುದಿಲ್ಲ. ಬದಲಾಗಿ ನನ್ನ ಆತ್ಮಸ್ಥೈರ್ಯ ಹೆಚ್ಚುತ್ತದೆ. ನನ್ನನ್ನು ಜೈಲಿಗೆ ಕಳುಹಿಸಿದರೆ ಪರಿಹಾರ ಸಿಗುತ್ತೆ ಎಂದುಕೊಂಡಿದ್ರೆ ಅದು ಕಾಂಗ್ರೆಸ್ಸಿಗರ ಭ್ರಮೆ ಎಂದರು. ಇನ್ನು, ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಬಗ್ಗೆ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.