ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಅವರದ್ದಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ನಾನು ರಾಜ್ಯಾಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಕೆಲ ವಿಷಯಗಳನ್ನು ಹಂಚಿಕೊಂಡಿದ್ದೇನೆ. ಇದು ನಕಲಿ ಆಡಿಯೋ ಆಗಿದ್ದು, ರಾಜ್ಯಾಧ್ಯಕ್ಷರ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಈ ಬಗ್ಗೆ ಪತ್ರ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದು ತನಿಖೆಗೆ ಒತ್ತಾಯಿಸಲಾಗಿದೆ ಎಂದರು.
ನಳಿನ್ ಕುಮಾರ್ ಕಟೀಲು ಅವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ನಾನು ಯಾವಾಗಾದ್ರೂ ದೆಹಲಿಗೆ ತೆರಳಿದ್ರೆ, ಅಲ್ಲಿ ಅವರನ್ನು ಭೇಟಿಯಾಗುತ್ತಿದ್ದೆ. ಬಿ.ಎಸ್.ಯಡಿಯೂರಪ್ಪ ವರ್ಚಸ್ಸು ಚೆನ್ನಾಗಿದೆ. ಅವರನ್ನು ರಾಜ್ಯದ ಸಿಎಂ ಮಾಡಬೇಕು ಎಂದು ಅವರೇ ಹೇಳಿದ್ದರು ಎಂದು ಕಟೀಲು ಪರ ರೇಣುಕಾಚಾರ್ಯ ಬ್ಯಾಟ್ ಬೀಸಿದರು.
ಇನ್ನು ಅವರನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ, ನಾನು ಯಾವಾಗಾದರೂ ದೆಹಲಿಗೆ ತೆರಳಿದ್ರೇ ಅಲ್ಲಿ ನಳೀನ್ ಕುಮಾರ್ ಅವರು ಭೇಟಿ ಮಾಡುತ್ತಿದ್ದರು. ಬಿಎಸ್ ಯಡಿಯೂರಪ್ಪ ವರ್ಚಸ್ಸು ಚೆನ್ನಾಗಿದೆ, ಅವರನ್ನು ರಾಜ್ಯಾಧ್ಯಕ್ಷರಾಗಿ ಸಿಎಂ ಆಗಿ ಮಾಡ್ಬೇಕು ಎಂದು ಅಂದೇ ನಳೀನ್ ಅವರು ಸೂಚಿಸಿದ್ದರು ಎಂದು ಅವರ ಪರ ಎಂಪಿ ರೇಣುಕಚಾರ್ಯ ಬ್ಯಾಟ್ ಬೀಸಿದರು.
ಸಿಎಂ ಆಗಿ ಯಡಿಯೂರಪ್ಪನವರೇ ಮುಂದುವರೆಯುತ್ತಾರೆ ಎಂದು ನಳಿನ್ ಕುಮಾರ್ ಕಟೀಲು ಅವರೇ ಹೇಳಿ, ಅವರ ವಿರುದ್ಧ ಮಾತಾಡುವವರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ರು. ಇದೆಲ್ಲ ಕಾಂಗ್ರೆಸ್ನವರ ಕುತಂತ್ರವಷ್ಟೇ ಎಂದು ಹೆಚ್ಡಿಕೆ, ಸಿದ್ದರಾಮಯ್ಯ ಅವರನ್ನು ದೂರಿದರು.
ಇದನ್ನೂ ಓದಿ:ಕಟೀಲ್ ಬೆಂಬಲಕ್ಕೆ ನಿಂತ ಕೇಸರಿ ನಾಯಕರು: ಆಡಿಯೋ ವೈರಲ್ ತನಿಖೆಯತ್ತ ಬಿಜೆಪಿ ಚಿತ್ತ