ದಾವಣಗೆರೆ: ಚಾಮರಾಜನಗರ ಆಕ್ಸಿಜನ್ ದುರಂತ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಡ್ ಸಿಗದ ವಿಚಾರವಾಗಿ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿರುದ್ಧ ಕಿಡಿ ಕಾರಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಸ್ವಪಕ್ಷೀಯ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಎಂ.ಪಿ.ರೇಣುಕಾಚಾರ್ಯ ಸಚಿವ ಸುಧಾಕರ್ ರಾಜೀನಾಮೆಗೆ ಆಗ್ರಹಿಸಿದರು. ಕೆಲ ಸಚಿವರು ತಮ್ಮ ಸ್ವಂತ ಕೆಲಸದಲ್ಲಿ, ಐಷಾರಾಮಿ ಜೀವನ ನಡೆಸುವುದರಲ್ಲಿ ಬ್ಯುಸಿ ಇರ್ತಾರೆ. ಆದರೆ ಜನರನ್ನು ರಕ್ಷಣೆ ಮಾಡುವ ಕೆಲಸ ಆಗ್ತಿಲ್ಲ. ಕೆಲಸ ಮಾಡಲು ಆಗದೇ ಇದ್ದರೆ ಗೌರವಯುತವಾಗಿ ಮನೆಗೆ ಹೋಗಿ ಎಂದರು.
ಆರೋಗ್ಯ ಸಚಿವ ಸುಧಾಕರ್ ಅವರಿಗೆ ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ಮಾಹಿತಿಯೇ ಇಲ್ಲ. ಇವರು ಎರಡು ಖಾತೆ ಪಡೆದಿರುವುದು ಯಾವ ಪುರುಷಾರ್ಥಕ್ಕೆ ಹೇಳಿ?, ಪ್ರಧಾನಿ ಮೋದಿ, ಬಿ.ಎಸ್. ಯಡಿಯೂರಪ್ಪ ಅವರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಇವರಿಗೇನಾಗಿದೆ? ಎಂದು ಅವರು ಹೇಳಿದರು.
ಇದನ್ನೂ ಓದಿ: ಯೋಗ್ಯತೆ ಇದ್ರೆ ಪಕ್ಷದಲ್ಲಿರಿ, ಇಲ್ಲ ಪಕ್ಷದಿಂದ ತೊಲಗಿ: ಹಳ್ಳಿ ಹಕ್ಕಿ ವಿರುದ್ಧ ಗುಡುಗಿದ ಬಿಡಿಎ ಅಧ್ಯಕ್ಷ