ETV Bharat / state

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಮಾರಂಭದಲ್ಲಿ ರೇಣುಕಾಚಾರ್ಯ ಡ್ಯಾನ್ಸ್​..

ಹೊನ್ನಾಳಿ ಪಟ್ಟಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 1933 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಶಾಸಕ ರೇಣುಕಾಚಾರ್ಯ ಡ್ಯಾನ್ಸ್ ಮಾಡಿದ್ದಾರೆ ಎಂದು ಕಾಂಗ್ರೆಸ್​​ ಆಕ್ರೋಶ ವ್ಯಕ್ತಪಡಿಸಿದೆ.

mp renukacharya
ಶಾಸಕ ರೇಣುಕಾಚಾರ್ಯ ಡ್ಯಾನ್ಸ್
author img

By

Published : Mar 18, 2023, 7:02 AM IST

Updated : Mar 18, 2023, 8:35 AM IST

ಹೊನ್ನಾಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನಿನ್ನೆ ಹಮ್ಮಿಕೊಂಡಿದ್ದ 1933 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಚುನಾವಣಾ ಪ್ರಚಾರದ ಸಭೆಯಾಗಿ ಪರಿವರ್ತನೆಯಾಗಿತ್ತು ಎಂದು ಸ್ಥಳೀಯ ಕಾಂಗ್ರೆಸ್​ ಅಸಮಾಧಾನ ವ್ಯಕ್ತಪಡಿಸಿದೆ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಮಾರಂಭದಲ್ಲಿ ಬಿಜೆಪಿ ಬಾವುಟಗಳು ರಾರಾಜಿಸಿದವು. ಅಷ್ಟೇ ಅಲ್ಲದೆ, ಈ ವೇಳೆ ಬಿಜೆಪಿ ಕಾರ್ಯಕರ್ತರು ಶಾಸಕ ರೇಣುಕಾಚಾರ್ಯರೊಂದಿಗೆ ಭರ್ಜರಿ ಡ್ಯಾನ್ಸ್​ ಮಾಡಿ ಸಂಭ್ರಮಿಸಿದ್ದಾರೆ.

ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 1933 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಶಾಸಕ ಎಂ ಪಿ ರೇಣುಕಾಚಾರ್ಯ ಪಕ್ಷದ ಪ್ರಚಾರ ಕಾರ್ಯಕ್ರಮವಾಗಿ ಪರಿವರ್ತಿಸಿಕೊಂಡ್ರು ಎನ್ನುವ ಮಾತುಗಳು ಕೇಳಿ ಬಂದಿವೆ. ಸರ್ಕಾರಿ ಅಧಿಕಾರಿಗಳು ಕೂಡ ಇದು ನಿಮ್ಮ ಪಕ್ಷದ ಕಾರ್ಯಕ್ರಮ ಅಲ್ವೇ ಅಲ್ಲ, ಇಲ್ಲಿ ಬಿಜೆಪಿ ಧ್ವಜಗಳನ್ನು ಪ್ರದರ್ಶಿಸ ಬೇಡಿ ಎಂದು ಮೈಕ್ ಮೂಲಕ ಮನವಿ ಮಾಡಿಕೊಂಡರು. ಆದರೂ ಕಾರ್ಯಕರ್ತರು ಅಧಿಕಾರಿಗಳ ಮಾತು ಕೇಳಲಿಲ್ಲ.

ಮಾಜಿ ಶಾಸಕರ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ:​ ಬಳಿಕ ಮಾತನಾಡಿದ ಶಾಸಕ ರೇಣುಕಾಚಾರ್ಯ, "80 ಲಕ್ಷವನ್ನು ಕೋವಿಡ್ ಸಮಯದಲ್ಲಿ ಲೂಟಿ ಹೊಡೆದ ಎಂದು ಆರೋಪಿ ನನ್ನ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿದರು. ನನ್ನ ಮನೆಗೆ ಕಲ್ಲು ಹೊಡೆದ್ರು, ಯಡಿಯೂರಪ್ಪ ಬರ್ತಾರೆಂದು ಪೆಂಡಾಲ್ ಸುಟ್ಟರು, ನನ್ನ ಮೇಲೆ 100 ಕೇಸ್​ಗಳನ್ನು ಹಾಕಿಸಿದ್ರು. ಆದ್ರೆ, ನೀವು ಒಂದು ಹೆಜ್ಜೆ ಮುಂದೆ ಇಟ್ರೆ ನಾನು ನೂರು ಹೆಜ್ಜೆ ಮುಂದಿರುತ್ತೇನೆ" ಎಂದು ಮಾಜಿ ಶಾಸಕ ಡಿಜಿ ಶಾಂತನಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಶಾಸಕ ಎಂಪಿ ರೇಣುಕಾಚಾರ್ಯ ತಾಕತ್ ಇರುವ ಹೊನ್ನಾಳಿ ಹುಲಿ: ಸಿಎಂ ಬೊಮ್ಮಾಯಿ

ನಂತರ ಮಾತನಾಡಿದ ಬಿಎಸ್ ಯಡಿಯೂರಪ್ಪ, "ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯನೋ ಎಂಪಿ ರೇಣುಕಾಚಾರ್ಯ ಕೂಡ ಶಾಸಕರಾಗುವುದು ಅಷ್ಟೇ ಸತ್ಯ. ರೇಣುಕಾಚಾರ್ಯ ಅವರು ಹೊನ್ನಾಳಿ ತಾಲೂಕಿಗೆ ಸಾಕಷ್ಟು ಹಣ ತಂದು ಅಭಿವೃದ್ಧಿ ಮಾಡಿದ್ದಾರೆ, ಅವರನ್ನು 25 ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಿಂದ ಆರಿಸಿ ಕಳಿಸಿ" ಎಂದು ಮತದಾರರಿಗೆ ಮನವಿ ಮಾಡಿದರು.

ಇದನ್ನೂ ಓದಿ: ಕಾಂಗ್ರೆಸ್​ನದ್ದು ಗ್ಯಾರಂಟಿ ಕಾರ್ಡ್ ಅಲ್ಲ ಬೋಗಸ್ ಕಾರ್ಡ್.. ನಿಮಗೆ ಕಾರ್ಡ್ ಕೊಟ್ರೆ ಬೆಂಕಿ ಹಚ್ಚಿ ಸುಟ್ಟು ಹಾಕಿ: ರೇಣುಕಾಚಾರ್ಯ

ಇನ್ನು ಕಾರ್ಯಕ್ರಮದಲ್ಲಿ ಜನಸಾಮಾನ್ಯರು ಭಾಗಿಯಾಗಿಯಾಗುವ ಬದಲು ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕ ರೇಣುಕಾಚಾರ್ಯ ಬೆಂಬಲಿಗರು ಆಗಮಿಸಿದ್ದರು ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಕೆಲ ಕಾರ್ಯಕರ್ತರು ಸರ್ಕಾರಿ ಕಾರ್ಯಕ್ರಮದಲ್ಲಿ ಮಸ್ತು ಮಸ್ತು ಹುಡುಗಿ ಬಂದಳು ಹಾಡಿಗೆ ಹುಚ್ಚೆದ್ದು ಕುಣಿದರು. ಶಾಸಕರು ಕೂಡ ಸರ್ಕಾರಿ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ರು ಇದು ಸ್ಥಳೀಯ ಪ್ರತಿಪಕ್ಷಗಳ ಕೆಂಗಣ್ಣಿಗೂ ಗುರಿಯಾಗಿದೆ. ಸಮಾರಂಭದಲ್ಲಿ ಕೆಲವರು ಪಾನಮತ್ತರಾಗಿದ್ದರು ಎಂದು ವಿರೋಧ ಪಕ್ಷಗಳ ಕಾರ್ಯಕರ್ತರು ಆರೋಪಿಸಿದ್ದಾರೆ.

ಸುಂಟರ ಗಾಳಿ ಹಾಡಿಗೆ ರೇಣುಕಾಚಾರ್ಯ ಡ್ಯಾನ್ಸ್ : ಅಭಿವೃದ್ಧಿ‌ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ರಸಮಂಜರಿ ಕಾರ್ಯಕ್ರಮ‌ವನ್ನ ಕೂಡ ಆಯೋಜನೆ ಮಾಡಲಾಗಿತ್ತು. ಶಾಸಕ ರೇಣುಕಾಚಾರ್ಯ ಕೂಡ ಹಾಡುಗಳಿಗೆ ಸಖತ್ ಸ್ಟೆಪ್ಸ್​ ಹಾಕಿ ಸರ್ಕಾರಿ ಅಧಿಕಾರಿಗಳಿಗೆ ಕಿರಿ ಕಿರಿ ಮಾಡಿದ್ರು. ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬರುವ ಮೊದಲೇ ಸುಂಟರ ಗಾಳಿ ಹಾಡಿಗೆ ಶಾಸಕರು ಡಾನ್ಸ್ ಮಾಡಿರುವುದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ.

Last Updated : Mar 18, 2023, 8:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.