ETV Bharat / state

ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ, ಅದಕ್ಕೆ ಕೆಲ ಶಾಸಕರು ಕಾಂಗ್ರೆಸ್​ಗೆ ಬರುತ್ತಿದ್ದಾರೆ: ಸಚಿವ ರಾಮಲಿಂಗಾರೆಡ್ಡಿ - ಶಕ್ತಿ ಯೋಜನೆ

ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರಿಗೆ ಉಸಿರುಕಟ್ಟಿದ ಹಾಗೆ ಆಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಸಚಿವ ರಾಮಲಿಂಗರೆಡ್ಡಿ
ಸಚಿವ ರಾಮಲಿಂಗರೆಡ್ಡಿ
author img

By ETV Bharat Karnataka Team

Published : Aug 23, 2023, 7:15 PM IST

ಬಿಜೆಪಿಯಿಂದ ಶಾಸಕರು ಕಾಂಗ್ರೆಸ್​ಗೆ ಬರುತ್ತಿದ್ದಾರೆ : ಸಚಿವ ರಾಮಲಿಂಗಾರೆಡ್ಡಿ

ದಾವಣಗೆರೆ: ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ, ಅದಕ್ಕೆ ಬಿಜೆಪಿಯಿಂದ ಕೆಲ ಶಾಸಕರು ಕಾಂಗ್ರೆಸ್​ಗೆ ಬರುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು. ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋಳಿಗಳನ್ನು ಕೇಜ್​ಗಳಲ್ಲಿ ಹಾಕ್ತಾರಲ್ಲ, ಅ ರೀತಿ ಹಾಕಿದ್ದರಿಂದ ಅವರಿಗೆ ಉಸಿರುಗಟ್ಟಿದ‌ ವಾತಾವರಣ ನಿರ್ಮಾಣವಾಗಿದೆ. ನಮ್ಮ‌ ಪಕ್ಷದಲ್ಲಿ ಫ್ರೀ ಬರ್ಡ್ ಆಗಿ ಓಡಾಡುತ್ತಿದ್ದರು. ಈಗ ಮತ್ತೆ ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದರು.

ಬಳಿಕ ಶಕ್ತಿ ಯೋಜನೆ ಬಗ್ಗೆ ಪ್ರತಿಕ್ರಿಯಿಸಿ, ಈ ಯೋಜನೆಯಿಂದ ಸಾರಿಗೆ ನಿಗಮಕ್ಕೆ ನಷ್ಟ ಆಗೋದಿಲ್ಲ. 43 ಕೋಟಿಗಿಂತ ಹೆಚ್ಚು ಜನ ಮಹಿಳೆಯರು ಈವರೆಗೆ ಸಂಚಾರ ಮಾಡಿದ್ದಾರೆ. ಸಾವಿರ ಕೋಟಿಗಿಂತ ಹೆಚ್ಚ ಟಿಕೆಟ್​ಗಳನ್ನು ನೀಡಲಾಗಿದೆ.‌ ಇದೊಂದು ಯಶಸ್ವಿ ಕಾರ್ಯಕ್ರಮವಾಗಿದೆ. ಕೆಲವರು ಸಂಬಳ ಕೊಡಲು ಆಗುವುದಿಲ್ಲ, ಬಸ್ ನಿಲ್ಲುತ್ತವೆ ಎಂದು ಟೀಕೆ ಮಾಡಿದ್ದರು. ಆದರೆ ಮಹಿಳೆಯರು ಈ ಯೋಜನೆ ಯಶಸ್ವಿ ಮಾಡಿದ್ದಾರೆ ಎಂದು ನಾಲ್ಕು ನಿಗಮಗಳಿಂದ ಅವರಿಗೆ ಅಭಿನಂದನೆ ತಿಳಿಸಿದರು.

ಒಂದು ಲಕ್ಷದ 50 ಸಾವಿರ ಟ್ರಿಪ್​ಗಳು ದಿನನಿತ್ಯ ನಡೆಯಲಿವೆ. ಈ ಯೋಜನೆ ನಿಲ್ಲಿಸಲು ಬಿಜೆಪಿಯ ಪ್ರಯತ್ನ ಫಲ ಕೊಡುವುದಿಲ್ಲ.‌ ಈಗಾಗಲೇ ಡೇಟಾಗಳನ್ನು ನಮ್ಮ ನಾಲ್ಕು ನಿಗಮದ ಎಂಡಿಗಳು ನೀಡಿದ್ದಾರೆ. ನಾಲ್ಕು ನಿಗಮಗಳಿಗೆ ಹಣ ಬಿಡುಗಡೆ ಮಾಡುವುದು ಇದೆ, ಎಂಡಿಗಳು ಡೇಟಾ ನೀಡಿದ ನಂತರ ಬಿಡುಗಡೆ ಮಾಡುತ್ತೇವೆ. ಜೂನ್ ತಿಂಗಳಲ್ಲಿ 90% ರಷ್ಟು ಹಣ ಬಿಡುಗಡೆಯಾಗಿ ಇನ್ನು ಸ್ವಲ್ಪ ಹಣ ಸರ್ಕಾರದಿಂದ ಬರಬೇಕಿದೆ. 500 ಕೋಟಿ ರೂ.ಯನ್ನು ಬಸ್ಸಿನ ಸಾಲ ತೀರಿಸಲು ಕೊಡಲಾಗಿದೆ ಎಂದರು.

ಬಳಿಕ ಚಂದ್ರಯಾನ-3 ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಚಂದ್ರಯಾನಕ್ಕೆ ನೆಹರು ಅವರ ಕಾಲದಲ್ಲಿ ಬುನಾದಿ ಹಾಕಿದ್ದು, ಈ ಯಶಸ್ಸಿಗಾಗಿ ಕಷ್ಟಪಟ್ಟ ಸೇವೆ ಸಲ್ಲಿಸಿದ ವಿಜ್ಞಾನಿಗಳಿಗೆ ಹಾಗು ಎಲ್ಲಾರಿಗೂ ಅಭಿನಂಧನೆಯನ್ನು ಸಚಿವರು ತಿಳಿಸಿದರು.

ಬಿಜೆಪಿ ವಿರುದ್ಧ ಸಚಿವ ಎಸ್​ ಎಸ್​​ ಮಲ್ಲಿಕಾರ್ಜುನ್ ವಾಗ್ದಾಳಿ: ಸರ್ಕಲ್​ಗಳಿಗೆ, ರಿಂಗ್ ರಸ್ತೆಗೆ ಯಾರದ್ದೋ ಹೆಸರು ಇಟ್ಟಿದ್ದಾರೆ, ಇದು ಯಾರದ್ದೋ ದುಡ್ಡು ಯಲ್ಲಮ್ಮನ ಗಂಟು ಎಂಬಂತಾಗಿದೆ ಎಂದು ಬಿಜೆಪಿ ವಿರುದ್ಧ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ವಾಗ್ದಾಳಿ ನಡೆಸಿದರು. ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕಾಮಗಾರಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕಾಮಗಾರಿಗೆ ಹಣ ತರಲು ಬಿಜೆಪಿಯವರಿಗೆ ಆಗಲಿಲ್ಲ, ಅಂದು ಅವರು ಬರೀ ಮಾತ್ನಾಡ್ತಾ ಕೂತರು ಎಂದು ಹರಿಹಾಯ್ದರು.

ಅದ್ರೆ ನಾನು ಕೆಇಬಿ ಹಣ ತಂದು ಈ ನಿಲ್ದಾಣವನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಇನ್ನು, ದಾವಣಗೆರೆ ನಗರದ ಕೆಲ ಸರ್ಕಲ್​ಗಳಿಗೆ ಯಾರದ್ದೋ ಹೆಸರು, ರಿಂಗ್ ರಸ್ತೆಗೆ ಯಾರದ್ದೋ ಹೆಸರು, ಇದು ಹೇಗಾಗಿದೆ ಅಂದ್ರೆ ಯಾರದ್ದೋ ದುಡ್ಡು ಯಲ್ಲಮ್ಮನ ಗಂಟು ಎಂಬಂತಾಗಿದೆ. ಒಂದು ವಾರದಲ್ಲೇ ಸಾಕಷ್ಟು ವೃತ್ತಗಳಿಗೆ ಹೆಸರುಗಳನ್ನು ಇಟ್ಟಿದ್ದಾರೆ. ಇಡಲಿ ಬೇಡ ಎನ್ನುವುದಿಲ್ಲ, ಅದ್ರೆ ಇವರು ಯಾರದನ್ನು ಹೆಸರಿಟ್ಟಿದ್ದಾರೋ ಅವರು ಈ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಿದ್ದಾರಾ, ಈ ಸಮಾಜಕ್ಕೆ ಅವರ ಕಾಣಿಕೆ ಏನೂ ಎಂಬುದನ್ನು ತಿಳಿದು ಹೆಸರುಗಳನ್ನಿಡಬೇಕು ಎಂದು ಸಚಿವ ಮಲ್ಲಿಕಾರ್ಜುನ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಬೇರೆ ಪಕ್ಷದವರು ನಮ್ಮ ತತ್ವ ಸಿದ್ಧಾಂತ ಒಪ್ಪಿ ಕಾಂಗ್ರೆಸ್​ಗೆ ಬರಬಹುದು: ಸಚಿವ ಶಿವರಾಜ ತಂಗಡಗಿ ಆಹ್ವಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.