ETV Bharat / state

ಸಿದ್ದರಾಮಯ್ಯ ಏನಾದ್ರೂ ಮಾಡಿ ಎಸ್​ಟಿ ಮೀಸಲಾತಿ ಕೊಡಿಸಲಿ, ನಾನು ಬೇಡ ಎನ್ನಲ್ಲ : ಸಚಿವ ಈಶ್ವರಪ್ಪ

author img

By

Published : Jan 6, 2021, 3:56 PM IST

ಕುರುಬ ಸಮುದಾಯಕ್ಕೆ ಎಸ್​ಟಿ ಮೀಸಲಾತಿ ಕೊಟ್ರೇ ಬೇಡ ಅಂತಾರಾ.. ನಾವು ಸಮಾಧಾನವಾಗಿ ಹೋರಾಟ ನಡೆಸುತ್ತಿದ್ದೇವೆ. ಅವರು ಅವರ ಪ್ರಯತ್ನ ಮಾಡಲಿ, ನಾವೆಲ್ಲ ಗುರುಗಳ ಜೊತೆ ಹೋರಾಟ ಮಾಡಲು ಹೊರಟಿದ್ದೇವೆ, ಅವರೂ ಬಂದ್ರೇ ಸಂತೋಷ..

Ishwarappa talks about kuruba demands
ಕೆಎಸ್​ ಈಶ್ವರಪ್ಪ ಹೇಳಿಕೆ

ದಾವಣಗೆರೆ : ಸಿದ್ದರಾಮಯ್ಯನವರು ಏನಾದ್ರೂ ತೀರ್ಮಾನ ಮಾಡಿ ಎಸ್​ಟಿ ಮೀಸಲಾತಿ ಕೊಡಿಸಲಿ. ನಾನು ಬೇಡ ಅನ್ನಲ್ಲ ಅನ್ನೋ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು.

ನಗರದಲ್ಲಿ ಮಾತನಾಡಿದ ಅವರು, ಕುರುಬರಿಗೆ ಎಸ್​ಟಿ ಮೀಸಲಾತಿ ಸಿಗಬೇಕೆಂದು ಕಾಗಿನೆಲೆ ಶ್ರೀಯವರ ನೇತೃತ್ವದಲ್ಲಿ ಸಮಾವೇಶ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಇಂದು ಹೋರಾಟ ಆರಂಭವಾಗಿದೆ. ಸಭೆ, ಸಮಾರಂಭಗಳು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿವೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್​ ಈಶ್ವರಪ್ಪ ಹೇಳಿಕೆ

ಸಿದ್ದರಾಮಯ್ಯನವರು ಎಸ್​ಟಿ ಮೀಸಲಾತಿ ಹೋರಾಟದಲ್ಲಿ ಕಾಣುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೆ ಎಸ್‌ ಈಶ್ವರಪ್ಪ, ಸಿದ್ದರಾಮಯ್ಯನವರನ್ನು ಹೋರಾಟಕ್ಕೆ ಕರೆಯಲಾಗಿದೆ. ಅವರು ಹೋರಾಟಕ್ಕೆ ಬಂದು ಏನಾದ್ರೂ ತೀರ್ಮಾನ ಮಾಡಿ, ಮೀಸಲಾತಿಯನ್ನು ಕುರುಬ ಸಮುದಾಯಕ್ಕೆ ಕೊಡಿಸಲಿ.

ಕುರುಬ ಸಮುದಾಯಕ್ಕೆ ಎಸ್​ಟಿ ಮೀಸಲಾತಿ ಕೊಟ್ರೇ ಬೇಡ ಅಂತಾರಾ.. ನಾವು ಸಮಾಧಾನವಾಗಿ ಹೋರಾಟ ನಡೆಸುತ್ತಿದ್ದೇವೆ. ಅವರು ಅವರ ಪ್ರಯತ್ನ ಮಾಡಲಿ, ನಾವೆಲ್ಲ ಗುರುಗಳ ಜೊತೆ ಹೋರಾಟ ಮಾಡಲು ಹೊರಟಿದ್ದೇವೆ, ಅವರೂ ಬಂದ್ರೇ ಸಂತೋಷ ಎಂದರು.

ಇದನ್ನೂ ಓದಿ:ಸ್ವಾಮಿ 15 ಲಕ್ಷ ಮಾತ್ರ ನನ್ನ ಖಾತೆಗೆ ಹಾಕಿದ್ದು: ನಟಿ ರಾಧಿಕಾ ಕುಮಾರಸ್ವಾಮಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.